ರಾಂಚಿ:ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಸರಣಿ ಕ್ಲೀನ್ಸ್ವೀಪ್ ಮಾಡಿಕೊಂಡಿದೆ. ಅಲ್ಲದೇ ಅನೇಕ ದಾಖಲೆ ನಿರ್ಮಾಣ ಮಾಡಿರುವ ಜತೆಗೆ ತವರು ನೆಲದಲ್ಲಿ ಕೊಹ್ಲಿ ಪಡೆ ಸತತ 11ನೇ ಟೆಸ್ಟ್ ಸರಣಿ ಗೆದ್ದ ಸಾಧನೆ ಮಾಡಿದೆ.
ಇದರ ಮಧ್ಯೆ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದ ವಿರಾಟ್ ಕೊಹ್ಲಿ, ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿರುವ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಸೌರವ್ ಗಂಗೂಲಿ ಹಾಗೂ ಹಿರಿಯ ಆಟಗಾರ ಎಂಎಸ್ ಧೋನಿ ಬಗ್ಗೆ ರಿಪೋಟರ್ಸ್ ಸುದ್ದಿ ಕೇಳಿದ್ರು.
ನಗು ಮುಖದಿಂದಲೇ ಉತ್ತರಿಸಿದ ವಿರಾಟ್ ಕೊಹ್ಲಿ, ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿರುವ ಸೌರವ್ ಗಂಗೂಲಿ ಅವರಿಗೆ ನಾನು ಅಭಿನಂದನೆ ಸಲ್ಲಿಕೆ ಮಾಡುತ್ತೇನೆ. ಇಲ್ಲಿಯವರೆಗೆ ಧೋನಿ ಭವಿಷ್ಯದ ಬಗ್ಗೆ ಅವರು ನನ್ನೊಂದಿಗೆ ಮಾತನಾಡಿಲ್ಲ. ಆ ವಿಷಯ ಬಗ್ಗೆ ಮಾತನಾಡಿದ್ರೆ ಖಂಡಿತವಾಗಿ ನಾನು ಉತ್ತರ ನೀಡುತ್ತೇನೆ ಎಂದು ಹೇಳಿದ್ದಾರೆ.
ಟೆಸ್ಟ್ ಕ್ರಿಕೆಟ್ ಹೇಗೆ ಜೀವಂತವಾಗಿರಸಿಕೊಳ್ಳಬೇಕು: ವಿರಾಟ್ ಕೊಹ್ಲಿ ನೀಡಿದ್ರು ಈ ಎಲ್ಲ ಟಿಪ್ಸ್!
ಇದೇ ವೇಳೆ ವರದಿಗಾರನೋರ್ವ ಕೊಹ್ಲಿಗೆ ಮಾಜಿ ನಾಯಕ ಎಂಎಸ್ ಧೋನಿ ಭವಿಷ್ಯದ ಕುರಿತು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ವಿರಾಟ್, ಧೋನಿ ಇಲ್ಲಿಯೆ ನಮ್ಮ ಜೊತೆ ಇದ್ದಾರೆ. ಡ್ರೆಸ್ಸಿಂಗ್ ರೂಮ್ಗೆ ಬನ್ನಿ, ಬಂದು ಹಲೋ ಹೇಳಿಬಿಡಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ.