ಕರ್ನಾಟಕ

karnataka

ETV Bharat / sports

ಐಸಿಸಿ ಟಿ-20 ರ‍್ಯಾಂಕಿಂಗ್‌‌: ಕುಸಿದ ರಾಹುಲ್​, 4ನೇ ಸ್ಥಾನಕ್ಕೆ ಬಡ್ತಿ ಪಡೆದ ಕೊಹ್ಲಿ - ಐಸಿಸಿ

ಕೊಹ್ಲಿ ಈ ಸರಣಿಯಲ್ಲಿ 3 ಅರ್ಧಶತಕ ಸಹಿತ 231 ರನ್​ ಗಳಿಸಿ ಇಂಗ್ಲೆಂಡ್ ವಿರುದ್ಧ 3-2ರಲ್ಲಿ ಸರಣಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದೀಗ ಕನ್ನಡಿಗ ಕೆ.ಎಲ್.ರಾಹುಲ್​ರನ್ನು ಹಿಂದಿಕ್ಕಿ 4ನೇ ಸ್ಥಾನಕ್ಕೇರುವ ಮೂಲಕ ಮೂರು ಮಾದರಿಯಲ್ಲೂ ಭಾರತದ ಅಗ್ರ ರ‍್ಯಾಂಕಿಂಗ್‌ ಬ್ಯಾಟ್ಸ್​ಮನ್​ ಎನಿಸಿಕೊಂಡಿದ್ದಾರೆ.

ವಿರಾಟ್​ ಕೊಹ್ಲಿ
ವಿರಾಟ್​ ಕೊಹ್ಲಿ

By

Published : Mar 24, 2021, 3:32 PM IST

ದುಬೈ:ಭಾರತ ಕ್ರಿಕೆಟ್​ ತಂಡದ ನಾಯಕ ವಿರಾಟ್​ ಕೊಹ್ಲಿ ಐಸಿಸಿ ಬುಧವಾರ ಬಿಡುಗಡೆ ಮಾಡಿರುವ ಟಿ-20 ಶ್ರೇಯಾಂಕದಲ್ಲಿ ಒಂದು ಸ್ಥಾನ ಬಡ್ತಿ ಪಡೆದು 5ನೇ ಸ್ಥಾನಕ್ಕೇರಿದ್ದಾರೆ. ಆದರೆ 4 ಪಂದ್ಯಗಳಲ್ಲಿ ವಿಫಲರಾಗಿದ್ದ ಕೆ.ಎಲ್.ರಾಹುಲ್​ 5ನೇ ಸ್ಥಾನಕ್ಕೆ ಕುಸಿದಿದ್ದಾರೆ. ಸರಣಿ ಆರಂಭದಲ್ಲಿ ಅವರು 2ನೇ ಸ್ಥಾನದಲ್ಲಿದ್ದರು.

ಕೊಹ್ಲಿ ಈ ಸರಣಿಯಲ್ಲಿ 3 ಅರ್ಧಶತಕ ಸಹಿತ 231 ರನ್​ ಗಳಿಸಿ ಇಂಗ್ಲೆಂಡ್ ವಿರುದ್ಧ 3-2ರಲ್ಲಿ ಸರಣಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದೀಗ ಕನ್ನಡಿಗ ಕೆ.ಎಲ್.​ರಾಹುಲ್​ರನ್ನು ಹಿಂದಿಕ್ಕಿ 4ನೇ ಸ್ಥಾನಕ್ಕೇರುವ ಮೂಲಕ ಮೂರು ಮಾದರಿಯಲ್ಲೂ ಭಾರತದ ಅಗ್ರ ರ‍್ಯಾಂಕಿಂಗ್‌ ಬ್ಯಾಟ್ಸ್​ಮನ್​ ಎನಿಸಿಕೊಂಡಿದ್ದಾರೆ.

ಕೊನೆಯ ಪಂದ್ಯದಲ್ಲಿ 34 ಎಸೆತಗಳಲ್ಲಿ 64 ರನ್​ ಚಚ್ಚಿದ್ದ ರೋಹಿತ್ ಶರ್ಮಾ 3 ಸ್ಥಾನ ಬಡ್ತಿ ಪಡೆದರೂ 14ನೇ ಶ್ರೇಯಾಂಕ ಪಡೆದಿದ್ದಾರೆ. ಶ್ರೇಯಸ್ ಐಯ್ಯರ್​ ಜೀವನ ಶ್ರೇಷ್ಠ 26, ಸೂರ್ಯ ಕುಮಾರ್ ಯಾದವ್​ 66 ಮತ್ತು ಪಂತ್ 69ನೇ ಸ್ಥಾನಕ್ಕೇರಿದ್ದಾರೆ. ಮೊದಲ 3ರಲ್ಲಿ ಇಂಗ್ಲೆಂಡ್​ನ ಡೇವಿಡ್ ಮಲನ್, ಆಸೀಸ್ ನಾಯಕ ಆ್ಯರೋನ್ ಫಿಂಚ್ ಮತ್ತು ಪಾಕ್​ನ ಬಾಬರ್ ಅಜಮ್ ಇದ್ದಾರೆ.

ಬೌಲಿಂಗ್ ಶ್ರೇಯಾಂಕದಲ್ಲಿ ಭುವನೇಶ್ವರ್ ಕುಮಾರ್ ಬರೋಬ್ಬರಿ 21 ಸ್ಥಾನ ಬಡ್ತಿ ಪಡೆದು 24ಕ್ಕೇರಿದ್ದಾರೆ. ಇಂಗ್ಲೆಂಡ್ ಪರ ಆದಿಲ್ ರಶೀದ್​ ಒಂದು ಸ್ಥಾನ ಮೇಲೇರಿ 4ಕ್ಕೆ ಬಡ್ತಿ ಪಡೆದರೆ, ತಲಾ 12 ಸ್ಥಾನ ಏರಿಕೆ ಕಂಡಿರುವ ಜೋಫ್ರಾ ಆರ್ಚರ್​ 22, ಮಾರ್ಕ್​ವುಡ್​ 27ನೇ ಶ್ರೇಯಾಂಕ ಪಡೆದಿದ್ದಾರೆ. ದಕ್ಷಿಣ ಆಫ್ರಿಕಾದ ಶಂಸಿ ಅಫ್ಘಾನಿಸ್ತಾನದ ರಶೀದ್​ರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ.

ABOUT THE AUTHOR

...view details