ಕರ್ನಾಟಕ

karnataka

ETV Bharat / sports

ಶೀತಲ ಸಮರಕ್ಕೆ ಮತ್ತೆ ಪುಷ್ಟಿ ಕೊಟ್ಟಿತ್ತು ಕೊಹ್ಲಿ ಶೇರ್​ ಮಾಡಿದ ಪೋಟೋ! - ಟ್ವಿಟ್ಟರ್​ನಲ್ಲಿ ಆಕ್ರೋಶ

ಕೊಹ್ಲಿ ಟ್ವಿಟ್ಟರ್​ನಲ್ಲಿ ಶೇರ್​ ಮಾಡಿರುವ ಪೋಟೋ ಚರ್ಚೆಗೆ ಕಾರಣವಾಗಿದ್ದು, ರೋಹಿತ್​ ಎಲ್ಲಿ ಎಂದು ಟ್ವಿಟಿಗರು ವಿರಾಟ್ ಕೊಹ್ಲಿಯನ್ನ ಪ್ರಶ್ನೆ ಮಾಡುತ್ತಿದ್ದಾರೆ.

ವಿರಾಟ್ ಕೊಹ್ಲಿ

By

Published : Aug 2, 2019, 3:23 PM IST

ಹೈದರಾಬಾದ್:ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಮತ್ತು ಉಪನಾಯಕ ರೋಹಿತ್​ ಶರ್ಮಾ ನಡುವೆ ಎಲ್ಲವೂ ಸರಿ ಇಲ್ಲ ಎಂಬ ಮಾತುಗಳು ಪದೇಪದೆ ಕೇಳಿ ಬರುತ್ತಿದ್ದು, ಕೊಹ್ಲಿ ಟ್ವಿಟರ್​ನಲ್ಲಿ ಶೇರ್​ ಮಾಡಿರುವ ಪೋಟೋ ಕೂಡ ಇದಕ್ಕೆ ಮತ್ತಷ್ಟು ಪುಷ್ಟಿ ಕೊಡುತ್ತಿದೆ.

ಸದ್ಯ ವೆಸ್ಟ್​ ಇಂಡೀಸ್​ ಪ್ರವಾಸದಲ್ಲಿರುವ ಟೀಂ ಇಂಡಿಯಾ ಕೆರಿಬಿಯನ್​ ನಾಡಲ್ಲಿ ತಾಲೀಮು ನಡೆಸುತ್ತಿದೆ. ಭಾರತ ತಂಡದ ಆಟಗಾರರಿರುವ ಪೋಟೊವೊಂದನ್ನ ನಾಯಕ ವಿರಾಟ್​ ಕೊಹ್ಲಿ ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿದ್ದು, ನೆಟ್ಟಿಗರ ಅಕ್ರೋಶಕ್ಕೆ ಕಾರಣವಾಗಿದೆ.

‘ತಂಡ’(SQUAD) ಎಂಬ ತಲೆ ಬರಹದೊಂದಿಗೆ ವಿರಾಟ್​ ಶೇರ್​ ಮಾಡಿರುವ ಫೋಟೋದಲ್ಲಿ ರವೀಂದ್ರ ಜಡೇಜಾ, ನವ್​ದೀಪ್​ ಸೈನಿ, ಕಲೀಲ್​ ಅಹ್ಮದ್, ಶ್ರೇಯಸ್​ ಐಯರ್, ಕೃನಾಲ್​ ಪಂಡ್ಯಾ, ಭುವನೇಶ್ವರ್ ಕುಮಾರ್ ಮತ್ತು ಕೆ ಎಲ್ ರಾಹುಲ್ ಮಾತ್ರ ಇದ್ದಾರೆ. ಹೀಗಾಗಿ ರೋಹಿತ್​ ಶರ್ಮಾ ಎಲ್ಲಿ ಎಂದು ನೆಟ್ಟಿಗರು ವಿರಾಟ್​ ಕೊಹ್ಲಿಯನ್ನ ಪ್ರಶ್ನೆ ಮಾಡುತ್ತಿದ್ದಾರೆ.

ರೋಹಿತ್​ ಶರ್ಮಾ ಇಲ್ಲದೆ ಟೀಂ ಇಂಡಿಯಾ ಅಪೂರ್ಣವಾಗುತ್ತದೆ. ಎಂದು ನೆಟ್ಟಿಗರು ವಿರಾಟ್​ ಕೊಹ್ಲಿ ವಿರುದ್ಧ ಕಮೆಂಟ್ ಮಾಡುತ್ತಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆಯಷ್ಟೇ ರೋಹಿತ್​ ಶರ್ಮಾ ಹಾಗೂ ನನ್ನ ನಡುವೆ ಯಾವುದೇ ರೀತಿಯ ಬಿರುಕು ಇಲ್ಲ. ಮಾಧ್ಯಮಗಳಲ್ಲಿ ಆ ರೀತಿಯ ವರದಿ ಬಿತ್ತಗೊಳ್ಳುತ್ತಿರುವುದು ಹಾಸ್ಯಾಸ್ಪದವಾಗಿದೆ. ಯಾವ ಉದ್ದೇಶಕ್ಕಾಗಿ ಈ ರೀತಿಯ ವರದಿಗಳು ಪ್ರಕಟಗೊಳ್ಳುತ್ತಿವೆ ಎಂಬುದು ನನಗೆ ಗೊತ್ತಿಲ್ಲ ಎಂದು ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಹೇಳಿದ್ದರು.

ABOUT THE AUTHOR

...view details