ಕರ್ನಾಟಕ

karnataka

ETV Bharat / sports

ನಾಯಕ ಕೊಹ್ಲಿ ಮುಡಿಗೆ ಸೇರಲಿದೆ ಮತ್ತೊಂದು ಮುಕುಟ.. ಏನದು?

ಕೊಹ್ಲಿ ನೇತೃತ್ವದಲ್ಲಿ ಭಾರತ ತಂಡ 49 ಟೆಸ್ಟ್​ ಪಂದ್ಯಗಳನ್ನಾಡಿದೆ. ಇದರಲ್ಲಿ 29 ಜಯ 10 ಡ್ರಾ ಹಾಗೂ 10 ಪಂದ್ಯಗಳಲ್ಲಿ ಸೋಲು ಕಂಡಿದೆ. ಅದರಲ್ಲೂ ಇದೇ ವರ್ಷ ಆಸ್ಟ್ರೇಲಿಯಾ ನೆಲದಲ್ಲಿ ಐತಿಹಾಸಿಕ ಟೆಸ್ಟ್​ ಸರಣಿ ಜಯಿಸಿರುವುದು ಅವರ ಸಾಧನೆಯಾಗಿದೆ.

Virat Kohli

By

Published : Oct 9, 2019, 6:01 PM IST

ಪುಣೆ: ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್​ ಪಂದ್ಯದ ವೇಳೆ ನಾಯಕನಾಗಿ 50ನೇ ಟೆಸ್ಟ್​ ಪಂದ್ಯವಾಡಲಿದ್ದಾರೆ. ಗುರುವಾರದಿಂದ ಭಾರತ ತಂಡ ದಕ್ಷಿಣ ಅಫ್ರಿಕಾ ವಿರುದ್ಧ ಎರಡನೇ ಟೆಸ್ಟ್​ ಪಂದ್ಯವಾಡಲಿದೆ. ಈ ಮೂಲಕ ನಾಯಕನಾಗಿ 50ನೇ ಟೆಸ್ಟ್​ ಪಂದ್ಯವನ್ನು ಮುನ್ನಡೆಸಲಿದ್ದಾರೆ.

ದೆಹಲಿ ಮೂಲದ ಅಗ್ರೆಸಿವ್​ ಬ್ಯಾಟ್ಸ್​ಮನ್​ ಕೊಹ್ಲಿ ಭಾರತ ತಂಡದ ಯಶಸ್ವಿ ಟೆಸ್ಟ್​ ಕ್ಯಾಪ್ಟನ್​ ಎನಿಸಿಕೊಂಡಿದ್ದಾರೆ. ವೆಸ್ಟ್​ ಇಂಡೀಸ್​ ವಿರುದ್ಧ ಟೆಸ್ಟ್​ ಸರಣಿ ಗೆಲ್ಲುವ ಮೂಲಕ ಧೋನಿ ದಾಖಲೆಯನ್ನು ಮುರಿದ್ದಿದ್ದರು. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೊಹ್ಲಿ, ದೇಶವನ್ನು ನಾಯಕನಾಗಿ ಮುನ್ನಡೆಸುವುದಕ್ಕೆ ಹೆಮ್ಮೆಯನ್ನಿಸುತ್ತಿದೆ. ನಾನು ಈ ಸ್ಥಾನದಲ್ಲಿರುವುದು ನನ್ನ ಅದೃಷ್ಟ. ಭಾರತಕ್ಕಾಗಿ ನಾನು ಅನೇಕ ಪಂದ್ಯಗಳನ್ನಾಡಿರುವುದಕ್ಕೆ ಹಾಗೂ ನಾಯಕನಾಗಿರುವುದಕ್ಕೆ ನಾನು ತುಂಬಾ ಕೃತಜ್ಞನಾಗಿದ್ದೇನೆ ಎಂದಿದ್ದಾರೆ.

ಟೆಸ್ಟ್​ನಲ್ಲಿ ನಾಯಕನಾಗಿ 50 ಪಂದ್ಯ ಪೂರೈಸುತ್ತಿರುವುದು ಕೇವಲ ಒಂದು ಮೈಲುಗಲ್ಲು ಅಷ್ಟೇ.. ಆದರೆ, ಆಡುವ ಎಲ್ಲಾ ಪಂದ್ಯಗಳನ್ನು ಗೆಲ್ಲಲೂ ದೃಷ್ಟಿಹರಿಸಬೇಕಿದೆ. ಅಂಕಿ-ಅಂಶ ಹಾಗೂ ನಂಬರ್​ಗಳು ನಮಗೆ ಅಗತ್ಯವಲ್ಲ ಎಂಬುದನ್ನು ತಂಡ ತಿಳಿದುಕೊಳ್ಳಬೇಕಿದೆ. ಆಟಗಾರನಾಗಿ ಇದು ನನಗೂ ಕೂಡ ಅನ್ವಯಿಸುತ್ತದೆ ಎಂದಿದ್ದಾರೆ.

ಕೊಹ್ಲಿ ನೇತೃತ್ವದಲ್ಲಿ ಭಾರತ ತಂಡ 49 ಪಂದ್ಯಗಳನ್ನಾಡಿದೆ. ಇದರಲ್ಲಿ 29 ಜಯ 10 ಡ್ರಾ ಹಾಗೂ 10 ಪಂದ್ಯಗಳಲ್ಲಿ ಸೋಲುಕಂಡಿದೆ. ಅದರಲ್ಲೂ ಇದೇ ವರ್ಷ ಆಸ್ಟ್ರೇಲಿಯಾ ನೆಲದಲ್ಲಿ ಐತಿಹಾಸಿಕ ಟೆಸ್ಟ್​ ಸರಣಿ ಜಯಿಸಿರುವುದು ಅವರ ಸಾಧನೆಯಾಗಿದೆ.

ABOUT THE AUTHOR

...view details