ಕರ್ನಾಟಕ

karnataka

By

Published : Dec 26, 2019, 12:24 PM IST

ETV Bharat / sports

ವಿಸ್ಡನ್​ ದಶಕದ ಅಗ್ರ​ 5 ಕ್ರಿಕೆಟಿಗರ ಪಟ್ಟಿಯಲ್ಲಿ ರನ್​ಮಷಿನ್​ ಕೊಹ್ಲಿ, ಎಬಿಡಿ,​ ಪೆರ್ರಿ

31 ವರ್ಷದ ಕೊಹ್ಲಿ ಈ ದಶಕದಲ್ಲಿ ವಿಶ್ವದ ಇತರೆ ಆಟಗಾರರಿಗಿಂತ 5,775 ರನ್ ಹಾಗೂ 22 ಶತಕಗಳಲ್ಲಿ ಮುನ್ನಡೆ ಸಾಧಿಸಿಕೊಂಡಿದ್ದಾರೆ. ಅಲ್ಲದೆ ಎಲ್ಲಾ ಮಾದರಿಯ ಕ್ರಿಕೆಟ್​ನಲ್ಲಿ 50 ಕ್ಕಿಂತ ಹೆಚ್ಚು ಸರಾಸರಿಯನ್ನು ಕಾಪಾಡಿಕೊಂಡಿರುವ ವಿಶ್ವದ ಏಕೈಕ ಬ್ಯಾಟ್ಸ್​ಮನ್​ ಆಗಿದ್ದಾರೆ. ಅಲ್ಲದೆ ಕೊಹ್ಲಿ ಭಾರತದ ಅತ್ಯಂತ ಯಶಸ್ವಿ ಟೆಸ್ಟ್​ ತಂಡದ ನಾಯಕ ಹಾಗೂ ಮೊದಲ ಸಲ ಸತತ  7 ಟೆಸ್ಟ್​ ಪಂದ್ಯಗಳನ್ನು ಗೆದ್ದ ಭಾರತ ತಂಡದ ನಾಯಕ ಎಂಬ  ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

Wisden cricketers of the decade
Wisden cricketers of the decade

ಮುಂಬೈ:ಭಾರತ ಕ್ರಿಕೆಟ್​ ತಂಡದ ನಾಯಕ ವಿರಾಟ್​ ಕೊಹ್ಲಿ ವಿಸ್ಡನ್​ ಪ್ರಕಟಿಸಿರುವ ಹತ್ತು ವರ್ಷಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಟಾಪ್​​ 5 ಕ್ರಿಕೆಟಿಗರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

31 ವರ್ಷದ ಕೊಹ್ಲಿ ಈ ದಶಕದಲ್ಲಿ ವಿಶ್ವದ ಇತರೆ ಆಟಗಾರರಿಗಿಂತ 5,775 ರನ್ ಹಾಗೂ 22 ಶತಕಗಳಲ್ಲಿ ಮುನ್ನಡೆ ಸಾಧಿಸಿಕೊಂಡಿದ್ದಾರೆ. ಅಲ್ಲದೆ ಎಲ್ಲಾ ಮಾದರಿಯ ಕ್ರಿಕೆಟ್​ನಲ್ಲಿ 50 ಕ್ಕಿಂತ ಹೆಚ್ಚು ಸರಾಸರಿಯನ್ನು ಕಾಪಾಡಿಕೊಂಡಿರುವ ವಿಶ್ವದ ಏಕೈಕ ಬ್ಯಾಟ್ಸ್​ಮನ್​ ಆಗಿದ್ದಾರೆ. ಅಲ್ಲದೆ ಕೊಹ್ಲಿ ಭಾರತದ ಅತ್ಯಂತ ಯಶಸ್ವಿ ಟೆಸ್ಟ್​ ತಂಡದ ನಾಯಕ ಹಾಗೂ ಮೊದಲ ಸಲ ಸತತ 7 ಟೆಸ್ಟ್​ ಪಂದ್ಯಗಳನ್ನು ಗೆದ್ದ ಭಾರತ ತಂಡದ ನಾಯಕ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಸ್ಟಿವ್​ ಸ್ಮಿತ್​

ಕೊಹ್ಲಿ ಜೊತೆಗೆ ಆಸ್ಟ್ರೇಲಿಯಾ ತಂಡದ ಯಶಸ್ವಿ ಟೆಸ್ಟ್​ ಬ್ಯಾಟ್ಸ್​ಮನ್​ ಸ್ಟಿವ್​ ಸ್ಮಿತ್​, ಆಸ್ಟ್ರೇಲಿಯಾ ಮಹಿಳಾ ತಂಡದ ಆಲ್​ರೌಂಡರ್​ ಎಲಿಸ್​ ಪೆರ್ರೆ, ದಕ್ಷಿಣ ಆಫ್ರಿಕಾದ ಎಬಿಡಿ ವಿಲಿಯರ್ಸ್​ ಹಾಗೂ ಡೇಲ್​ ಸ್ಟೈನ್​ ವಿಸ್ಡನ್​ ದಶಕದ ಟಾಪ್​ 5 ಆಟಗಾರರಾಗಿ ಆಯ್ಕೆಯಾಗಿದ್ದಾರೆ.

ಡೇಲ್​ ಸ್ಟೈನ್​

ಸ್ಮಿತ್​ 71 ಟೆಸ್ಟ್​ಗಳಲ್ಲಿ 26 ಶತಕ ಹಾಗೂ 27 ಅರ್ಧಶತಕಗಳ ಸಹಿತ 7,070 ​ರನ್​ ಗಳಿಸಿದ್ದಾರೆ. ಪೆರ್ರಿ 112 ಏಕದಿನ ಹಾಗೂ 11 ಟಿ20 ಪಂದ್ಯಗಳಿಂದ 4,023 ರನ್​ ಹಾಗೂ 289 ವಿಕೆಟ್​ ಪಡೆದಿದ್ದಾರೆ. ಪೆರ್ರಿ ಒಂದು ವರ್ಷದಲ್ಲಿ ಟಿ20 ಕ್ರಿಕೆಟ್​ನಲ್ಲಿ 1,000 ರನ್​ ಹಾಗೂ100 ವಿಕೆಟ್​ ಪಡೆದ ಏಕೈಕ ಕ್ರಿಕೆಟರ್​ ಎಂಬ ವಿಶ್ವದಾಖಲೆಯನ್ನು ಪಡೆದಿದ್ದಾರೆ.

ದಕ್ಷಿಣ ಆಫ್ರಿಕಾದ ಎಬಿಡಿ 420 ಅಂತಾರಾಷ್ಟ್ರೀಯ ಕ್ರಿಕೆಟ್​ ಪಂದ್ಯಗಳಿಂದ 20,014 ರನ್​ ಗಳಿಸಿದ್ದಾರೆ. ಡೇಲ್​ ಸ್ಟೈನ್​ 262 ಅಂತಾರಾಷ್ಟ್ರೀಯ ಪಂದ್ಯಗಳಿಂದ 696 ವಿಕೆಟ್ ಪಡೆದು ವಿಸ್ಡನ್ ದಶಕದ 5 ಅತ್ಯುತ್ತಮ ಆಟಗಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

ABOUT THE AUTHOR

...view details