ಚೆನ್ನೈ:ಪ್ರವಾಸಿ ಇಂಗ್ಲೆಂಡ್ ತಂಡದ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯದ ವೇಳೆ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಐಸಿಸಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದು, ಇದೀಗ ಒಂದು ಪಂದ್ಯದಿಂದ ಬ್ಯಾನ್ ಆಗುವ ಸಾಧ್ಯತೆ ಇದೆ.
ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನದ ಕೊನೆ ಓವರ್ ವೇಳೆ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಡಿಆರ್ಎಸ್ ವಿಚಾರವಾಗಿ ಅಂಪೈರ್ ನಿತಿನ್ ಮೆನನ್ ಜತೆ ಮಾತಿನ ವಾಗ್ವಾದ ನಡೆಸಿದ್ದರು. ಈ ಮೂಲಕ ಐಸಿಸಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ.
ಓದಿ: ನಾಯಕತ್ವದಲ್ಲಿ ಧೋನಿ ದಾಖಲೆ ಸರಿಗಟ್ಟಿದ ವಿರಾಟ್ ಕೊಹ್ಲಿ..
ಟೆಸ್ಟ್ ಪಂದ್ಯದ ಮೂರನೇ ದಿನ ಬ್ಯಾಟಿಂಗ್ ಮಾಡಲು ಬಂದಿದ್ದ ಇಂಗ್ಲೆಂಡ್ ಕ್ಯಾಪ್ಟನ್ ರೂಟ್ ಪ್ಯಾಡ್ಗೆ ಬಡಿದ ಚೆಂಡು ನೇರವಾಗಿ ವಿಕೆಟ್ ಕೀಪರ್ ರಿಷಬ್ ಪಂತ್ ಕೈ ಸೇರಿತ್ತು. ಈ ವೇಳೆ ಅಂಪೈರ್ ನಾಟೌಟ್ ಎಂದು ತೀರ್ಪು ನೀಡಿದ್ದರು. ಆದರೆ ಕೊಹ್ಲಿ ಡಿಆರ್ಎಸ್ ಮನವಿ ಮಾಡಿದ್ದರು. ಈ ವೇಳೆ ಅದು ಕ್ಯಾಚ್ ಬದಲಿಗೆ ಎಲ್ಬಿ ಎಂಬುದು ಸಾಭೀತುಗೊಂಡಿತ್ತು. ಆದರೆ ಟೀಂ ಇಂಡಿಯಾ ಕ್ಯಾಚ್ ವಿಚಾರವಾಗಿ ಡಿಆರ್ಎಸ್ ತೆಗೆದುಕೊಂಡಿದ್ದ ಕಾರಣ ಅಂಪೈರ್ ನಾಟೌಟ್ ಎಂದು ತೀರ್ಪು ನೀಡಿದ್ದರು. ಇದೇ ವಿಚಾರವಾಗಿ ಕೊಹ್ಲಿ ಅಂಪೈರ್ ಜತೆ ವಾಗ್ವಾದ ನಡೆಸಿದ್ದರು.
ಐಸಿಸಿ ಆರ್ಟಿಕಲ್ 2.8 ಪ್ರಕಾರ ವಿರಾಟ್ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದರಿಂದ ಇದೀಗ ಒಂದು ಪಂದ್ಯದಿಂದ ನಿಷೇಧಕ್ಕೊಳಗಾಗುವ ಸಾಧ್ಯತೆ ಇದೆ.