ಕರ್ನಾಟಕ

karnataka

ETV Bharat / sports

ತಾವೇ ಲಾಂಚ್​ ಮಾಡಿದ ಆಡಿ ಕ್ಯೂ8 ಕಾರು ಖರೀದಿಸಿದ ವಿರಾಟ್​ ಕೊಹ್ಲಿ - 33 ಕೋಟಿ ಮೌಲ್ಯದ ಕಾರು ಖರೀದಿಸಿದ ಆಡಿ ಕ್ಯೂ8 ಕಾರು

ಆಡಿ ಕಂಪೆನಿ  ಬುಧವಾರವಷ್ಟೇ ಆಡಿ ಕ್ಯೂ8  ಕಾರನ್ನು ಭಾರತದಲ್ಲಿ ಲಾಂಚ್​ ಮಾಡಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಆಡಿ ಕಂಪನಿಯ ರಾಯಬಾರಿಯಾಗಿರುವ ಕೊಹ್ಲಿ ತಾವೇ ಮೊದಲ ಕಾರನ್ನು ಖರೀದಿಸಿದ್ದಾರೆ.

Kohli audi q8 car
Kohli audi q8 car

By

Published : Jan 16, 2020, 7:14 PM IST

ಮುಂಬೈ:ಭಾರತ ಕ್ರಿಕೆಟ್​ ತಂಡದ ನಾಯಕ ವಿರಾಟ್​ ಕೊಹ್ಲಿ ಬುಧವಾರ ಆಡಿ ಕ್ಯೂ8 ಕಾರನ್ನು ಭಾರತದಲ್ಲಿ ಲಾಂಚ್​ ಮಾಡಿ, ತಾವೇ ಮೊದಲ ಕಾರನ್ನು ಖರೀದಿಸಿದ ಮೊದಲ ಭಾರತೀಯ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ.

ಕೊಹ್ಲಿ ಬಳಿ ಆಡಿ ಕ್ಯೂ7, ಆಡಿ ಆರ್​ಎಸ್​ 5, ಆಡಿ ಆರ್​ಎಸ್ 6, ಎ8 ಎಲ್ ಡಬ್ಲ್ಯು ಕ್ವಾಟ್ರೊ, ಬೆಂಟ್ಲೆ ಕಾಂಟಿನೆಂಟಲ್ ಜಿಟಿ ,ಟೊಯೊಟಾ ಫಾರ್ಚುನರ್, ರೆನೊ ಡಸ್ಟರ್​ ಮತ್ತು ರೇಂಜ್ ರೋವರ್ ಸೇರಿದಂತೆ ಹಲವಾರು ಐಶಾರಾಮಿ ಕಾರುಗಳನ್ನು ಹೊಂದಿದ್ದಾರೆ.

ಆಡಿ ಕಂಪೆನಿ ಬುಧವಾರವಷ್ಟೇ ಆಡಿ ಕ್ಯೂ8 ಕಾರನ್ನು ಭಾರತದಲ್ಲಿ ಲಾಂಚ್​ ಮಾಡಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಆಡಿ ಕಂಪನಿಯ ರಾಯಬಾರಿಯಾಗಿರುವ ಕೊಹ್ಲಿ ತಾವೇ ಮೊದಲ ಕಾರನ್ನು ಖರೀದಿಸಿದ್ದಾರೆ.

ಈ ಕಾರಿನ ವಿಶೇಷತೆ:

ಆಡಿ ಕ್ಯೂ8 ಕಾರು 3.0-ಲೀಟರ್ ಟಿಎಫ್‌ಎಸ್‌ಐ ಪೆಟ್ರೋಲ್ ಎಂಜಿನ್‌ ಹೊಂದಿದ್ದು, 340 ಹಾರ್ಸ್​ ಪವರ್​ ಸಾಮರ್ಥ್ಯ ಹೊಂದಿದೆ. ಈ ಕಾರಿನ ಎಕ್ಸ್​ ಶೋರೂಂ ಬೆಲೆ ₹1.33 ಕೋಟಿ ಇದೆ.

For All Latest Updates

ABOUT THE AUTHOR

...view details