ಶಾರ್ಜಾ:ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಗುರುವಾರ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಪಂದ್ಯದಲ್ಲಿ ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸಿದ್ದಾರೆ. ಅವರು ಟಿ-20 ಕ್ರಿಕೆಟ್ ಇತಿಹಾಸದಲ್ಲಿ ಒಂದೇ ತಂಡದ ಪರ 200 ಪಂದ್ಯಗಳನ್ನಾಡಿದ ಮೊದಲ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
2008ರ ಉದ್ಘಾಟನಾ ಐಪಿಎಲ್ನಿಂದ ವಿರಾಟ್ ಕೊಹ್ಲಿ ಆರ್ಸಿಬಿ ತಂಡದ ಪರವೇ ಆಡುತ್ತಿದ್ದಾರೆ. 2011ರ ಹರಾಜಿನ ವೇಳೆ ಆರ್ಸಿಬಿ ತಂಡದ ಎಲ್ಲ ಆಟಗಾರರನ್ನು ಬಿಡುಗಡೆಗೊಳಿಸಿ ಕೊಹ್ಲಿಯನ್ನು ಮಾತ್ರ ರೀಟೈನ್ ಮಾಡಿಕೊಂಡಿತ್ತು.
ವಿರಾಟ್ 10 ದಿನಗಳ ಹಿಂದೆಯಷ್ಟೇ ಡೆಲ್ಲಿ ವಿರುದ್ಧ ಒಂದೇ ತಂಡದ ಪರ ಅತಿ ಹೆಚ್ಚು ಪಂದ್ಯಗಳನ್ನಾಡಿದ್ದ ದಾಖಲೆಗೆ ಪಾತ್ರರಾಗಿದ್ದರು. ಇದೀಗ ಒಂದೇ ತಂಡದ ಪರ ಅತಿ 200 ಪಂದ್ಯಗಳನ್ನಾಡಿದ ಮೊದಲ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ.
ಇಂಗ್ಲೆಂಡ್ನ ಜೇಮ್ಸ್ ಹಿಲ್ಡರ್ನೆತ್ ಸರ್ರೆ ಪರ 196, ಎಂಎಸ್ ಧೋನಿ ಸಿಎಸ್ಕೆ ಪರ 192, ಸಮಿತ್ ಪಟೇಲ್ ನಾಟಿಂಗ್ಹ್ಯಾಮ್ಶೈರ್ ಪರ191 ಹಾಗೂ ಸುರೇಶ್ ರೈನಾ ಸಿಎಸ್ಕೆ ಪರ 188 ಪಂದ್ಯಗಳನ್ನಾಡಿ ಕೊಹ್ಲಿ ನಂತರದ ಸ್ಥಾನದಲ್ಲಿದ್ದಾರೆ.
ವಿರಾಟ್ ಕೊಹ್ಲಿ ಐಪಿಎಲ್ನಲ್ಲಿ 184 ಪಂದ್ಯಳನ್ನಾಡಿದ್ದರೆ, ಉಳಿದ 16 ಪಂದ್ಯಗಳನ್ನು ಚಾಂಪಿಯನ್ ಲೀಗ್ ಟಿ-20ಯಲ್ಲಿ ಆಡಿದ್ದಾರೆ.