ಬರ್ಮಿಂಗ್ಹ್ಯಾಮ್: ವಿಶ್ವಕಪ್ನಲ್ಲಿ ಇಂದು ಭಾರತ-ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಲಿದ್ದು, ಪಂದ್ಯ ಆರಂಭಗೊಳ್ಳುವುದಕ್ಕೂ ಮುಂಚಿತವಾಗಿ ನಡೆದ ಸುದ್ದಿಗೋಷ್ಠಿಯಲ್ಲಿ ವಿರಾಟ್ ಕೊಹ್ಲಿ ಚಿಕ್ಕ ಹುಡುಗಿಯ ಪ್ರಶ್ನೆಗೂ ತಾಳ್ಮೆಯಿಂದ ಉತ್ತರಿಸಿ ಎಲ್ಲರ ಮನಗೆದ್ದಿದ್ದಾರೆ.
ಐಸಿಸಿ ಕ್ರಿಕೆಟ್ ಹಾಗೂ ವಿಶ್ವ ಸಂಸ್ಥೆಯ ಮಕ್ಕಳ ನಿಧಿ(ಯುನಿಸೆಫ್) ಸೇರಿ ಜಗತಿನಾದ್ಯಂತ ಮಕ್ಕಳಿಗೆ ಬೆಂಬಲ ನೀಡಲು ನಿಧಿಸಂಗ್ರಹ ಕಾರ್ಯಕ್ರಮ ಆಯೋಜಿಸಿತ್ತು. ಇದರಲ್ಲಿ ಭಾಗಿಯಾಗಿದ್ದ ಕೊಹ್ಲಿ ಪುಟಾಣಿ ಹೆಣ್ಣು ಮಗು ಕೇಳಿರುವ ಪ್ರಶ್ನೆಗೆ ಉತ್ತರ ನೀಡಿದ್ದಾರೆ.
ಸುದ್ದಿಗೋಷ್ಠಿಗೆ ಬಂದ ವಿರಾಟ್ ಕೊಹ್ಲಿಯನ್ನ ಚಿಕ್ಕ ಮಗು ಎಡ್ವರ್ಡ್ ಪರಿಚಯಿಸಿದ್ದು, ನಾನು ನಿಮಗೆ ಒಂದು ದಿನದ ಮಾಧ್ಯಮ ಸಲಹೆಗಾರನಾಗಿ ಕೆಲಸ ಮಾಡಲಿರುವೆ ಎಂದು ತಿಳಿಸಿದ್ದಾರೆ. ಇದಕ್ಕೆ ಕೊಹ್ಲಿ ಧನ್ಯವಾದ ಹೇಳಿದ್ದಾರೆ.
ಇದಾದ ಮರುಕ್ಷಣವೇ ನೇಹಾ ಎಂಬ ಬಾಲಕಿ, ಇಂದಿನ ಪಂದ್ಯದ ಬಗ್ಗೆ ನೀವೂ ಉತ್ಸುಕರಾಗಿದ್ದೀರಿ ಎಂದು ಪ್ರಶ್ನೆ ಕೇಳಿದ್ದಾಳೆ. ಇದಕ್ಕೆ ತಾಳ್ಮೆಯಿಂದ ಉತ್ತರ ನೀಡಿದ ಕೊಹ್ಲಿ, ಯೆಸ್ ನೇಹಾ, ನಿಮ್ಮ ಸುಂದರವಾದ ಪ್ರಶ್ನೆಗೆ ಧನ್ಯವಾದಗಳು. ನಾವು ತುಂಬಾ ಉತ್ಸುಕರಾಗಿದ್ದೇವೆ. ವಿಶೇಷವಾದ ಆಟದಲ್ಲಿ ಭಾಗಿಯಾಗಲು ತುಂಬಾ ಉತ್ಸುಕತೆ ಇದೆ. ಪಂದ್ಯ ವೀಕ್ಷಣೆ ಮಾಡಲು ನೀವು ಉತ್ಸುಕರಾಗಿದ್ದೀರಿ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.