ದುಬೈ:ನಾಯಕ ವಿರಾಟ್ ಕೊಹ್ಲಿ ಅವರ ಆಕರ್ಷಕ 90 ರನ್ಗಳ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಿಎಸ್ಕೆಗೆ 170 ರನ್ಗಳ ಟಾರ್ಗೆಟ್ ನೀಡಿದೆ.
ಟಾಸ್ ಗೆದ್ದು ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ, ದೀಪಕ್ ಚಹಾರ್ ಆರಂಭಿಕ ಬ್ಯಾಟ್ಸ್ಮನ್ ಆ್ಯರೋನ್ ಫಿಂಚ್ ಅವರನ್ನು ಬೌಲ್ಡ್ ಮಾಡಿ ಸಿಎಸ್ಕೆಗೆ ಆರಂಭಿಕ ಮುನ್ನಡೆ ತಂದು ಕೊಟ್ಟರು.
ನಂತರ ಯುವ ಬ್ಯಾಟ್ಸ್ಮನ್ ಪಡಿಕ್ಕಲ್ ಜೊತೆ ಸೇರಿಕೊಂಡ ಕೊಹ್ಲಿ, 2ನೇ ವಿಕೆಟ್ಗೆ 53 ರನ್ಗಳ ಜೊತೆಯಾಟ ನೀಡಿದರು. ದೇವದತ್ ಇಂದು ನಿಧಾನಗತಿ ಆಟವಾಡಿ 34 ಎಸೆತಗಳಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 33 ರನ್ಗಳಿಸಿ ಔಟಾದರು. ನಂತರ ಬಂದ ಎಬಿಡಿ ಕೂಡ ಅದೇ ಓವರ್ನಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಸುಂದರ್ ಆಟ ಕೂಡ 10 ರನ್ಗಳಿಗೆ ಸೀಮಿತವಾಯಿತು.
ಆದರೆ, 5ನೇ ವಿಕೆಟ್ ಜೊತೆಯಾದ ಕೊಹ್ಲಿ ಮತ್ತು ಶಿವಂ ದುಬೆ 33 ಎಸೆತಗಳಲ್ಲಿ 73 ರನ್ ಸೂರೆಗೈದರು. ದುಬೆ 14 ಎಸೆತಗಳಲ್ಲಿ 2 ಬೌಂಡರಿ ಒಂದು ಸಿಕ್ಸರ್ ಸಹಿತ 22 ರನ್ಗಳಿಸಿದರೆ, ಕೊಹ್ಲಿ 52 ಎಸೆತಗಳಲ್ಲಿ 4 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 90 ರನ್ಗಳಿಸಿ ಔಟಾಗದೇ ಉಳಿದರು.
ಸಿಎಸ್ಕೆ ಪರ ಠಾಕೂರ್ 2, ದೀಪಕ್ ಚಹಾರ್ ಹಾಗೂ ಸ್ಯಾಮ್ ಕರ್ರನ್ ತಲಾ ಒಂದು ವಿಕೆಟ್ ಪಡೆದರು.