ಕರ್ನಾಟಕ

karnataka

ETV Bharat / sports

ವಿರುಷ್ಕಾ ದಂಪತಿಯ ಮಗಳ ನಾಮಕರಣ ಇಲ್ಲಿ ನಡೆಯುವ ಸಾಧ್ಯತೆ! - ಹರಿದ್ವಾರದ ಅನಂತ ಬಾಬಾ ಆಶ್ರಮ

ಕೊಹ್ಲಿ ಅಥವಾ ಅನುಷ್ಕಾ ತಮ್ಮ ಮನೆಯ ಶುಭ ಕಾರ್ಯಗಳಿಗೆ ಮತ್ತು ತಮಗೆ ಏನಾದರೂ ಸಮಸ್ಯೆ ಎದುರಾದ್ರೆ ನೇರವಾಗಿ ಬಾಬಾ ಅನಂತ ಮಹಾರಾಜ್​ ಆಶ್ರಮಕ್ಕೆ ಹೋಗುತ್ತಾರೆ. ಅಲ್ಲದೆ ಅನುಷ್ಕಾ ಕೂಡ ಯಾವುದೇ ಕಾರ್ಯ ಆರಂಭಿಸುವ ಮೊದಲು ಅವರ ಗುರುಗಳ ಆಶೀರ್ವಾದ ತೆಗೆದುಕೊಳ್ಳುತ್ತಾರೆ..

ಅನುಷ್ಕಾ ಶರ್ಮಾ ವಿರಾಟ್ ಕೊಹ್ಲಿ
ಅನುಷ್ಕಾ ಶರ್ಮಾ ವಿರಾಟ್ ಕೊಹ್ಲಿ

By

Published : Jan 12, 2021, 7:10 PM IST

Updated : Jan 12, 2021, 7:38 PM IST

ಹರಿದ್ವಾರ :ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್​ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿಗೆ ಸೋಮವಾರ ಹೆಣ್ಣು ಮಗು ಜನಿಸಿದೆ. ಈ ಖುಷಿ ವಿಚಾರವನ್ನು ಕೊಹ್ಲಿ ತಮ್ಮ ಅಭಿಮಾನಿಗಳಿಗೆ ಟ್ವಿಟರ್​ ಮೂಲಕ ತಿಳಿಸಿದ್ದರು.

ವಿರಾಟ್​ ಕೊಹ್ಲಿ ಈ ವಿಷಯವನ್ನು ಸಾಮಾಜಿಕ ಜಾಲಾತಾಣದಲ್ಲಿ ಹಂಚಿಕೊಳ್ಳುತ್ತಿದ್ದಂತೆ ವಿರುಷ್ಕಾ ದಂಪತಿಗೆ ಹಾಲಿ ಮತ್ತು ಮಾಜಿ ಕ್ರಿಕೆಟಿಗರು ಸೇರಿದಂತೆ ಲಕ್ಷಾಂತರ ಅಭಿಮಾನಿಗಳು ಶುಭಾಶಯ ಕೋರಿದ್ದಾರೆ. ಈ ಸ್ಟಾರ್​ ದಂಪತಿ ಹರಿದ್ವಾರದ ಅನಂತ ಬಾಬಾ ಆಶ್ರಮದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ.

ಕೊಹ್ಲಿ ಅಥವಾ ಅನುಷ್ಕಾ ತಮ್ಮ ಮನೆಯ ಶುಭ ಕಾರ್ಯಗಳಿಗೆ ಮತ್ತು ತಮಗೆ ಏನಾದರೂ ಸಮಸ್ಯೆ ಎದುರಾದ್ರೆ ನೇರವಾಗಿ ಬಾಬಾ ಅನಂತ ಮಹಾರಾಜ್​ ಆಶ್ರಮಕ್ಕೆ ಹೋಗುತ್ತಾರೆ. ಅಲ್ಲದೆ ಅನುಷ್ಕಾ ಕೂಡ ಯಾವುದೇ ಕಾರ್ಯವನ್ನು ಆರಂಭಿಸುವ ಮೊದಲು ಅವರ ಗುರುಗಳ ಆಶೀರ್ವಾದ ತೆಗೆದುಕೊಳ್ಳುತ್ತಾರೆ ಎಂದು ತಿಳಿದು ಬಂದಿದೆ.

ಇದೀಗ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಅನುಷ್ಕಾ ಶರ್ಮಾ, ಆಸ್ಪತ್ರೆಯಿಂದ ಬಂದ ನಂತರ ಈ ಆಶ್ರಮಕ್ಕೆ ಭೇಟಿ ನೀಡುತ್ತಾರೆ ಎನ್ನಲಾಗುತ್ತಿದೆ. ಈ ಮಗುವಿನ ಹೆಸರನ್ನು ಕೂಡ ಬಾಬಾ ಅನಂತ್ ಮಹಾರಾಜ್​ ನಿರ್ಧರಿಸಿಲಿದ್ದಾರೆ ಎನ್ನಲಾಗುತ್ತಿದೆ.

Last Updated : Jan 12, 2021, 7:38 PM IST

ABOUT THE AUTHOR

...view details