ಮುಂಬೈ: ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಹೀನಾಯ ಪ್ರದರ್ಶನ ತೋರಿ ಲೀಗ್ನಲ್ಲಿ ಕೊನೆಯ ಸ್ಥಾನ ಪಡೆದಿದ್ದ ಮುಂಬೈ ತಂಡ ಇದೀಗ ಮುಂದಿನ ತಿಂಗಳು ನಡೆಯುವ ವಿಜಯ ಹಜಾರೆ ಟ್ರೋಫಿಗಾಗಿ ಸಂಭವನೀಯ ಆಟಗಾರರನ್ನು ಆಯ್ಕೆ ಮಾಡಿದೆ.
ಭಾರತ ಸೀಮಿತ ತಂಡದ ಆಟಗಾರ ಶ್ರೇಯಸ್ ಅಯ್ಯರ್, ಟೆಸ್ಟ್ ತಂಡದಿಂದ ಹೊರಬಿದ್ದಿರುವ ಪೃಥ್ವಿ ಶಾ, ಅನುಭವಿ ಸೂರ್ಯ ಕುಮಾರ್ ಯಾದವ್ ಹಾಗೂ ಲೆಜೆಂಡರಿ ಬ್ಯಾಟ್ಸ್ಮನ್ ಸಚಿನ್ ತೆಂಡೂಲ್ಕರ್ ಮಗ ಅರ್ಜುನ್ ತೆಂಡೂಲ್ಕರ್ ಕೂಡ ಈ ಪಟ್ಟಿಯಲ್ಲಿ ಸೇರಿದ್ದಾರೆ.
ಆಯ್ಕೆ ಯಾಗಿರುವ ಎಲ್ಲಾ ಆಟಗಾರರನ್ನು ಸೋಮವಾರ 8 ಗಂಟೆಗೆ ಎಂಸಿಎ ಶರದ್ ಪವಾರ್ ಕ್ರಿಕೆಟ್ ಆಕಾಡೆಮಿಯ ಬಾಂದ್ರ ಕುರ್ಲಾ ಕಾಂಪ್ಲೆಕ್ಸ್ಗೆ ಹಾಜರಾಗಲೂ ಎಂಸಿಎ ಕಾರ್ಯದರ್ಶಿ ಸಂಜಯ್ ನಾಯಕ್ ಹೇಳಿಕೆ ಬಿಡುಗಡೆ ಮಾಡಿದ್ದಾರೆ.