ಮುಂಬೈ: ಪ್ರಸ್ತುತ ಸೀಮಿತ ಕ್ರೀಡಾಂಗಣಗಳಲ್ಲಿ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ಮೊದಲ ಕೋವಿಡ್ 19 ಪ್ರಕರಣ ಕಂಡುಬಂದಿದೆ. ಬಿಹಾರದ ಆಟಗಾರನಿಗೆ ವೈರಸ್ ತಗುಲಿದ್ದು, ತಂಡದ ಉಳಿದ ಆಟಗಾರರು ಕೂಡ ಪರೀಕ್ಷೆಗೆ ಒಳಗಾಗಲಿದ್ದಾರೆ.
ಆತನಿಗೆ ವೈರಸ್ ತಗುಲಿರುವುದು ಖಚಿತವಾಗಿದೆ, ಪ್ರಸ್ತುತ ಆ ಆಟಗಾರ ತಂಡದ ಇತರೆ ಆಟಗಾರರಿಂದ ದೂರ ಉಳಿದು ಐಸೋಲೇಟ್ ಆಗಿದ್ದಾರೆ. ಪ್ರಸ್ತುತ ಅವರು ಬೆಂಗಳೂರಿನಲ್ಲಿದ್ದು, ಅವರು ಪ್ರಯಾಣಿಸಲು ಸಾಧ್ಯವಿಲ್ಲ ಎಂದು ಬಿಹಾರ ಕ್ರಿಕೆಟ್ ಬೋರ್ಡ್ನ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ಮಾಹಿತಿ ನೀಡಿದ್ದಾರೆ.
ಮತ್ತೊಂದು ಮೂಲಗಳ ಪ್ರಕಾರ ಬಿಹಾರ ತಂಡದ ಎಲ್ಲಾ 22 ಆಟಗಾರರು ಮಂಗಳವಾರ ಕೋವಿಡ್ 19 ಟೆಸ್ಟ್ಗೆ ಒಳಗಾಗಿದ್ದಾರೆ. ಇವರೆಲ್ಲರ ಪರೀಕ್ಷಾ ವರದಿ ಸಂಜೆ ಬರಲಿದೆ ಎಂದು ತಿಳಿದುಬಂದಿದೆ.