ಕರ್ನಾಟಕ

karnataka

ETV Bharat / sports

ಬೌಲ್ಟ್​ ಹ್ಯಾಟ್ರಿಕ್​​: ಕಿವೀಸ್​ ವಿರುದ್ಧ 243ರನ್​ಗಳ ಸಾದಾರಣ ಮೊತ್ತ ದಾಖಲಿಸಿದ ಆಸ್ಟ್ರೇಲಿಯಾ

ಕೀವೀಸ್​ ವೇಗಿಗಳ ದಾಳಿಗೆ ಸಿಲುಕಿದ ಆಸ್ಟ್ರೇಲಿಯಾ ತಂಡ 50 ಓವರ್​ಗಳಲ್ಲಿ 9 ವಿಕೆಟ್​​ ಕಳೆದುಕೊಂಡು 243 ರನ್​ಗಳ ಸಾದಾರನ ಮೊತ್ತ ದಾಖಲಿಸಿದೆ.

Usman Khawaja

By

Published : Jun 29, 2019, 9:42 PM IST

Updated : Jun 29, 2019, 9:52 PM IST

ಲಂಡನ್​: ಕಿವೀಸ್​ ಬೌಲರ್​ಗಳ ದಾಳಿಗೆ ಸಿಲುಕಿದ ಕಾಂಗರೂ ಪಡೆ ಉಸ್ಮಾನ್​ ಖವಾಜ ಹಾಗೂ ಅಲೆಕ್ಸ್​ ಕ್ಯಾರಿ ಅರ್ಧಶತಕಗಳ ಹೊರೆತಾಗಿಯೂ 243 ರನ್​ಗಳ ಸಾದಾರಣ​ ಮೊತ್ತ ದಾಖಲಿಸಿದೆ.

ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಆಸ್ಟ್ರೇಲಿಯಾಕ್ಕೆ ಕಿವೀಸ್​ ವೇಗಿಗಳ ಆರಂಭದಲ್ಲೇ ಆಘಾತ ನೀಡಿದರು. ಆರಂಭಿಕರಾದ ಆ್ಯರೋನ್​ ಫಿಂಚ್​(8)ರನ್ನು ಬೌಲ್ಟ್​ ಬೌಲ್ಡ್​ ಮಾಡಿದರೆ, ಡೇವಿಡ್ ವಾರ್ನರ್​(16) ಹಾಗೂ ಸ್ಮಿತ್​(5)ರನ್ನು ಲೂಕಿ ಫರ್ಗ್ಯುಸನ್​ ಔಟ್​ ಮಾಡಿದರು.ನಂತರ ಬಂದ ಸ್ಟೋಯ್ನಿಸ್​ ಆಟ 21 ರನ್​ಗಳಿಗೆ ಸೀಮಿತವಾದರೆ,ಮ್ಯಾಕ್ಸ್​ವೆಲ್​ 1 ರನ್​ಗಳಿಸಿ ಬಂದಷ್ಟೇ ವೇಗವಾಗಿ ವಾಪಸ್​ ಹೋದರು. ಇವರಿಬ್ಬರ ವಿಕೆಟ್​ ನೀಶಾಮ್​ ಪಾಲಾಯಿತು.

ಖವಾಜ-ಕ್ಯಾರಿ ಜುಗಲ್​ಬಂದಿ:

92 ಕ್ಕೆ 5 ವಿಕೆಟ್​ ಕಳೆದುಕೊಂಡು ಆಘಾತ ಅನುಭವಿಸಿದ್ದ ಆಸೀಸ್​ಗೆ 6ನೇ ವಿಕೆಟ್​ ಜೊತೆಯಾಟದಲ್ಲಿ ಒಂದಾದ ಖವಾಜ ಹಾಗೂ ಅಲೆಕ್ಸ್​ ಕ್ಯಾರಿ(71) 107 ರನ್​ ಜೊತೆಯಾಟ ನಡೆಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. 72 ಎಸೆತಗಳಲ್ಲಿ 11 ಬೌಂಡರಿ ಸಹಿತ 71 ರನ್​ಗಳಿಸಿದ್ದ ಕ್ಯಾರಿ ಅರೆಕಾಲಿಕ ಬೌಲರ್​ ಕೇನ್​ ವಿಲಿಯಮ್ಸನ್​​ಗೆ​ ವಿಕೆಟ್​ ಒಪ್ಪಿಸಿದರು.

ನಂತರ ಖವಾಜ ಜೊತೆಗೂಡಿದ ಪ್ಯಾಟ್​ ಕಮ್ಮಿನ್ಸ್​(23) 7ನೇ ವಿಕೆಟ್​ಗೆ 44 ರನ್​ಗಳ ಜೊತೆಯಾಟ ನೀಡಿದರು. ವಿಕೆಟ್​ ಬೀಳುತ್ತಿದ್ದರು ಉತ್ತಮ ಇನ್ನಿಂಗ್ಸ್​ ಕಟ್ಟಿದ ಖವಾಜ 129 ಎಸೆತಗಳಲ್ಲಿ 5 ಬೌಂಡರಿಸಹಿತ 88 ರನ್​ಗಳಿಸಿದರು.

ಬೌಲ್ಟ್​ ಹ್ಯಾಟ್ರಿಕ್​:

ಇನ್ನಿಂಗ್ಸ್​ನ ಕೊನೆಯ ಓವರ್​ ಎಸೆಯಲು ಬಂದ ಕಿವೀಸ್​ ವೇಗಿ ಟ್ರೆಂಟ್​ ಬೌಲ್ಟ್​ ಮೊದಲೆರಟು ಎಸೆತದಲ್ಲಿ ಎರಡು ಸಿಂಗಲ್​ ನೀಡಿದರು. ನಂತರ ಮೂರನೇ ಎಸೆತದಲ್ಲಿ ಖವಾಜರನ್ನು ಬೌಲ್ಡ್​ ಮಾಡಿದರು. 4ನೇ ಎಸೆತದಲ್ಲಿ ಮಿಚೆಲ್​ ಸ್ಟಾರ್ಕ್​ರನ್ನು ಖಾತೆ ತೆರೆಯುವ ಮುನ್ನವೇ ಬೌಲ್ಡ್​ ಮಾಡುವ ಮೂಲಕ ಪೆವಿಲಿಯನ್​ಗಟ್ಟಿದರು. ಐದನೇ ಎಸೆತದಲ್ಲಿ ಬೆಹ್ರನ್​ಡ್ರಾಫ್​ರನ್ನು ಎಲ್​ಬಿಗೆ ಕೆಡವಿದ ಬೌಲ್ಟ್​ ಟೂರ್ನಿಯಲ್ಲಿ 2ನೇ ಹ್ಯಾಟ್ರಿಕ್​ ಸಾಧಿಸಿದರು. ಅಲ್ಲದೆ ನ್ಯೂಜಿಲ್ಯಾಂಡ್​ ಪರ ವಿಶ್ವಕಪ್​ನಲ್ಲಿ ಹ್ಯಾಟ್ರಿಕ್​ ವಿಕೆಟ್​ ಪಡೆದ ಚೊಚ್ಚಲ ಬೌಲರ್​ ಎಂಬ ದಾಖಲೆಗೂ ಪಾತ್ರರಾದರು.

Last Updated : Jun 29, 2019, 9:52 PM IST

ABOUT THE AUTHOR

...view details