ಲಂಡನ್ :ಇಂಗ್ಲೆಂಡ್ನಅಂತಾರಾಷ್ಟ್ರೀಯ ಖ್ಯಾತಿಯ ಅಂಪೈರ್ ಇಯಾನ್ ಗೌಲ್ಡ್, ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಫಿಟ್ನೆಸ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರನ್ನು ಮಾಡೆಲ್ಗೆ ಹೋಲಿಕೆ ಮಾಡಿ ಬಣ್ಣಿಸಿದ್ದಾರೆ.
ವಿರಾಟ್ ಕೊಹ್ಲಿಗೆ ಉತ್ತಮ ಕ್ರಿಕೆಟ್ ಮೆದುಳಿದೆ. ಅವರ ಕ್ರೀಡಾ ಸ್ಫೂರ್ತಿಯ ಬಗ್ಗೆ ಗಂಟೆಗಟ್ಟಲೇ ಮಾತನಾಡಬಹುದು ಎಂದು ಗೌಲ್ಡ್ ಅಭಿಪ್ರಾಯಪಟ್ಟಿದ್ದಾರೆ. ಅವರೊಬ್ಬ ತಮಾಷೆಯ ಮನುಷ್ಯ, ಅವರು ಒಂದೆರೆಡು ಬಾರಿ ನನ್ನಂತೆಯೇ ಬ್ಯಾಟಿಂಗ್ ಮಾಡಿದ್ದಾರೆ. ಅವರೊಬ್ಬ ಮೋಹಕ ಬ್ಯಾಟ್ಸ್ಮನ್. ಸಚಿನ್ ತೆಂಡೂಲ್ಕರ್ ಅವರಂತೆಯೇ ಕೊಹ್ಲಿ ಕೂಡ. ಇಡೀ ಭಾರತ ಅವರ ಬೆನ್ನ ಹಿಂದೆ ಇದೆ ಎಂದು ಗೌಲ್ಡ್ ವೆಬ್ಸೈಟ್ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.