ಕರ್ನಾಟಕ

karnataka

ETV Bharat / sports

ಕೊನೆಯ ಓವರ್​ನಲ್ಲಿ 14 ರನ್​ ನೀಡಿ ಟ್ರೋಲ್​​​ಗೆ ತುತ್ತಾದ ಉಮೇಶ್​! - ಟ್ರೋಲ್

ಪಂದ್ಯ ಸೋತ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಉಮೇಶ್​ ಭಾರೀ ಆಕ್ರೋಶಕ್ಕೆ ಒಳಗಾಗಿದ್ದಾರೆ. ವಿವಿಧ ಮೆಮೆ ಮೂಲಕ ಉಮೇಶ್​ರ ಕಾಲೆಳೆದಿದ್ದಾರೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ಮಾಡಿದ್ದ ಟೀಂ ಇಂಡಿಯಾ 126 ರನ್​ಗಳ ಸಾಧಾರಣ ಮೊತ್ತ ಕಲೆ ಹಾಕಿತ್ತು.

Umesh

By

Published : Feb 25, 2019, 12:51 PM IST

ವಿಶಾಖಪಟ್ಟಣಂ: ನಿನ್ನೆ ಆಸೀಸ್​ ವಿರುದ್ಧ ನಡೆದ ಮೊದಲ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ ರೋಚಕ ಸೋಲು ಅನುಭವಿಸಿದೆ. ಗೆಲ್ಲಬಹುದಾದ ಪಂದ್ಯದಲ್ಲಿ ಕೊನೆಯ ಓವರ್​ ಎಸೆದು ರನ್​ ನೀಡಿದ ವೇಗಿ ಉಮೇಶ್​ ಯಾದವ್​ ನೆಟ್ಟಿಗರ ಟ್ರೋಲ್​ಗೆ ತುತ್ತಾಗಿದ್ದಾರೆ.

ಪಂದ್ಯ ಸೋತ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಉಮೇಶ್​ ಭಾರೀ ಆಕ್ರೋಶಕ್ಕೆ ಒಳಗಾಗಿದ್ದಾರೆ. ವಿವಿಧ ಮೆಮೆ ಮೂಲಕ ಉಮೇಶ್​ರ ಕಾಲೆಳೆದಿದ್ದಾರೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ಮಾಡಿದ್ದ ಟೀಂ ಇಂಡಿಯಾ 126 ರನ್​ಗಳ ಸಾಧಾರಣ ಮೊತ್ತ ಕಲೆ ಹಾಕಿತ್ತು. ಆದರೂ ಕೂಡ ಜಸ್​ಪ್ರೀತ್​ ಬೂಮ್ರಾ ಅವರು ಮಾರಕ ಬೌಲಿಂಗ್​ ಮೂಲಕ ತಂಡಕ್ಕೆ ಗೆಲುವಿನ ಆಸೆ ಹುಟ್ಟಿಸಿದ್ದರು.

ಆಸೀಸ್​ಗೆ 12 ಎಸೆತಗಳಲ್ಲಿ ಗೆಲುವಿಗೆ 16 ರನ್​ ಬೇಕಿತ್ತು. ಆಗ 19ನೇ ಓವರ್​ ಮಾಡಿದ ಬೂಮ್ರಾ ಕೇವಲ 2 ರನ್​ ನೀಡಿ 2 ವಿಕೆಟ್​ ಉರುಳಿಸಿ ಪಂದ್ಯವನ್ನು ಭಾರತದತ್ತ ವಾಲುವಂತೆ ಮಾಡಿದ್ದರು. ಆದರೆ ಅಂತಿಮ ಓವರ್​ನಲ್ಲಿ 14 ರನ್​ ಬೇಕಿದ್ದರೂ ಆಸೀಸ್​ ಬಾಲಂಗೋಚಿಗಳನ್ನು ನಿಯಂತ್ರಿಸುವಲ್ಲಿ ಯಾದವ್​ ವಿಫಲರಾದರು. ಉಮೇಶ್​​ 2 ಬೌಂಡರಿ ಸಹಿತ 14 ರನ್ ನೀಡಿದ್ದರಿಂದ ರೋಚಕ ಪಂದ್ಯದಲ್ಲಿ ಭಾರತ ಸೋಲಬೇಕಾಯಿತು.

ಇನ್ನು ಗೆಲ್ಲಬಹುದಾದ ಪಂದ್ಯವನ್ನು ಸೋತಿದ್ದನ್ನು ಸಹಿಸದ ಅಭಿಮಾನಿಗಳು ಉಮೇಶ್​ ಮೇಲೆ ಟ್ರೋಲ್​ ಸುರಿಮಳೆಗರೆದಿದ್ದಾರೆ.

ABOUT THE AUTHOR

...view details