ಚೆನ್ನೈ: ಚೆಪಾಕ್ನಲ್ಲಿ ಇಂಗ್ಲೆಂಡ್ ವಿರುದ್ಧ ವಿಕೆಟ್ ಪಡೆಯಲು ಕೇವಲ ಚೆಪಾಕ್ನ ಟರ್ನಿಂಗ್ ಪಿಚ್ನಿಂದ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಬದಲಾಗಿ ನಾವು ಇಂಗ್ಲೆಂಡ್ ಬ್ಯಾಟ್ಸ್ಮನ್ಗಳ ಮನಸ್ಥಿತಿಯನ್ನು ಚೆನ್ನಾಗಿ ಅರಿತು ಬೌಲಿಂಗ್ ಮಾಡಿದ್ದರಿಂದ ವಿಕೆಟ್ ಪಡೆಯಲುವ ಸಾಧ್ಯವಾಯಿತು ಎಂದು ಭಾರತ ತಂಡದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಹೇಳಿದ್ದಾರೆ.
ಇಂಗ್ಲೆಂಡ್ ತಂಡದ ಮಾಜಿ ನಾಯಕರಾದ ಮೈಕಲ್ ವಾನ್ ಮತ್ತು ಕೆವಿನ್ ಪೀಟರ್ಸನ್ ಚೆಪಾಕ್ ಪಿಚ್ ಅನ್ನು ಡಸ್ಟ್ ಬೌಲ್(ಧೂಳಿನ ಬಟ್ಟಲು) ಎಂದು ಮೌಲ್ಯವನ್ನು ಜರಿದಿದ್ದರು. ಆದರೆ ಇಂಗ್ಲೆಂಡ್ ಸಹಾಯಕ ಕೋಚ್ ಮಾತ್ರ ಇದನ್ನು ಸವಾಲಿನ ಪಿಚ್ ಎಂದು ವಾದಿಸಿದ್ದರು.
ಆದರೆ, ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಉತ್ತಮ ಪ್ರದರ್ಶನ ತೋರಿ ಪಿಚ್ ಬಗೆಗಿನ ಚರ್ಚೆಗೆ ತಿರುಗೇಟು ನೀಡಿದ್ದರು. ಅವರು 96 ರನ್ ನೀಡಿ 8 ವಿಕೆಟ್ ಹಾಗೂ ಬ್ಯಾಟಿಂಗ್ನಲ್ಲಿ ಶತಕ ಬಾರಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದು ಭಾಜನರಾಗಿದ್ದರು.
"ಜನರು ಹೊರಗಿನಿಂದ ವಿಷಯಗಳ(ಪಿಚ್ ಕುರಿತು) ಬಗ್ಗೆ ಹಲವು ರೀತಿಯ ಭವಿಷ್ಯ ನುಡಿಯುತ್ತಿದ್ದರು. ಆದರೆ, ಇಲ್ಲಿ ಚೆಂಡುಗಳು ವಿಕೆಟ್ ಪಡೆಯುತ್ತಿಲ್ಲ ಎಂದು ನಾನು ಭಾವಿಸುತ್ತೇನೆ. ಎದುರಾಳಿ ಬ್ಯಾಟ್ಸ್ಮನ್ಗಳ ಆಲೋಚನೆಗಳು ನಮಗೆ ವಿಕೆಟ್ ತಂದುಕೊಟ್ಟಿತು" ಎಂದು ಅಶ್ವಿನ್ ಹೇಳಿದ್ದಾರೆ. ಆದರೆ, ಪ್ರತಿಸ್ಪರ್ಧಿ ಬ್ಯಾಟ್ಸ್ಮನ್ಗಳ ಬಗ್ಗೆ ಅವರ ಈ ಅಭಿಪ್ರಾಯವನ್ನು ವಿಸ್ತಾರವಾಗಿ ಹೇಳಿಲ್ಲ.
"ನಾನು ಇಲ್ಲಿ ಹಲವಾರು ವರ್ಷಗಳಿಂದ ಆಡುತ್ತಿದ್ದೇನೆ. ಹಾಗಾಗಿ ಇಲ್ಲಿ ಪ್ರಾಬಲ್ಯ ಸಾಧಿಸಲು ವೇಗ ಮತ್ತು ಬ್ಯಾಟ್ಸ್ಮನ್ಗಳಿಗೆ ವಂಚಿಸುವ ಕಲೆ ಅಗತ್ಯವಾಗಿದೆ. ಜೊತೆ ಆ ಉದ್ದೇಶವನ್ನು ಕಾಪಾಡಿಕೊಳ್ಳುವುದು ಮುಖ್ಯ" ಎಂದು ಅವರು ಆಂಗ್ಲರ ವಿರುದ್ಧ 317ರನ್ಗಳ ವಿಜಯ ಸಾಧಿಸಿದ ನಂತರ ಹೇಳಿದ್ದಾರೆ.
ನಾನು ಈ ಪಂದ್ಯದಲ್ಲಿ ವಿಭಿನ್ನ ರೀತಿಯ ಎಸೆತಗಳನ್ನು ಪ್ರಯತ್ನಿಸಿದ್ದೇನೆ, ಗಾಳಿಯನ್ನು ಚೆನ್ನಾಗಿ ಬಳಸಿಕೊಂಡಿದ್ದೇನೆ, ವಿವಿಧ ಆ್ಯಂಗಲ್ಗಳನ್ನು ಬಳಸಿದ್ದೇನೆ ಹಾಗೂ ರನ್ಅಪ್ ವೇಗವನ್ನು ಕೂಡ ಉಪಯೋಗಿಸಿಕೊಂಡಿದ್ದರಿಂದ ಯಶಸ್ವಿಯಾಗಲು ಕಾರಣವಾಯಿತು ಎಂದು ಅವರು ತಿಳಿಸಿದ್ದಾರೆ.