ಟ್ರಿನಿಡಾಡ್ :ಸಿಪಿಎಲ್ನ 2020 ಆವೃತ್ತಿಯ ಲೀಗ್ ಹಂತದ ಎಲ್ಲಾ ಪಂದ್ಯಗಳು ಮುಗಿದಿವೆ. ಶಾರುಖ್ ಖಾನ್ ನೇತೃತ್ವದ ಟಿಕೆಆರ್ ತಂಡ ಲೀಗ್ನ ಎಲ್ಲಾ 10 ಪಂದ್ಯಗಳನ್ನು ಗೆದ್ದು ದಾಖಲೆಯೊಂದಿಗೆ ಸೆಮಿಫೈನಲ್ ಪ್ರವೇಶಿಸಿದೆ.
ನಿನ್ನೆ ನಡೆದ ಕೊನೆಯು ಲೀಗ್ ಪಂದ್ಯದಲ್ಲಿ ಸೇಂಟ್ ಕಿಟ್ಸ್ ಮತ್ತು ನೇವಿಲ್ ಪ್ಯಾಟ್ರಿಯೋಟ್ಸ್ ತಂಡವನ್ನು 9 ವಿಕೆಟ್ಗಳಿಂದ ಮಣಿಸಿದ ಟಿಕೆಆರ್ ಗರಿಷ್ಠ ಅಂಕಗಳೊಂದಿಗೆ ಸೆಮಿಫೈನಲ್ ಪ್ರವೇಶಿಸಿತು. ಟಿಕೆಆರ್ ಜೊತೆಗೆ ಜಮೈಕಾ ತಲವಾಸ್, ಗಯಾನ ಅಮೇಜಾನ್ ವಾರಿಯರ್ಸ್, ಸೇಂಟ್ ಲೂಸಿಯಾ ಜೌಕ್ಸ್ ತಂಡಗಳು ಕೂಡ ಸೆಮಿಫೈನಲ್ ಪ್ರವೇಶಿಸಿವೆ.
ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಎಸ್ಎನ್ಪಿ 18.2 ಓವರ್ಗಳಲ್ಲಿ ಕೇವಲ 77 ರನ್ಗಳಿಗೆ ಆಲೌಟ್ ಆಗುವ ಮೂಲಕ ಸಿಪಿಎಲ್ನಲ್ಲೇ ಕನಿಷ್ಠ ಮೊತ್ತ ದಾಖಲಿಸಿದ ಕುಖ್ಯಾತಿಗೆ ಪಾತ್ರವಾಯಿತು. ಈ ಮೊತ್ತವನ್ನು ಬೆನ್ನತ್ತಿದ ಟಿಕೆಆರ್ 11.3 ಓವರ್ಗಳಲ್ಲಿ 1 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
ಈ ಗೆಲುವಿನ ಮೂಲಕ ಲೀಗ್ ಹಂತದ ಟಿ20 ಕ್ರಿಕೆಟ್ ಟೂರ್ನಿಯ ಇತಿಹಾಸದಲ್ಲಿಯೇ ಎಲ್ಲಾ ಪಂದ್ಯಗಳನ್ನು ಗೆದ್ದ ವಿಶ್ವದ 3 ತಂಡ ಎಂಬ ದಾಖಲೆಗೆ ಪಾತ್ರವಾಯಿತು. ಇದಕ್ಕೂ ಮೊದಲು 2019 ಆವೃತ್ತಿಯಲ್ಲಿ ಗಯಾನ ಅಮೇಜಾನ್ ವಾರಿಯರ್ಸ್ 10 ಪಂದ್ಯ ಗೆದ್ದಿತ್ತು. ಕರ್ನಾಟಕ ತಂಡ ಕಳೆದ ವರ್ಷದ ಸಯ್ಯದ್ ಮುಷ್ತಾಕ್ ಅಲಿ ಟೂರ್ನಾಮೆಂಟ್ನ ಲೀಗ್ನಲ್ಲಿ 11 ಪಂದ್ಯಗಳನ್ನು ಗೆದ್ದು ದಾಖಲೆ ಬರೆದಿತ್ತು.