ಕರ್ನಾಟಕ

karnataka

ETV Bharat / sports

ವಿರಾಟ್ ಕೊಹ್ಲಿ​ ಕ್ಯಾಪ್ಟನ್​ ಗದ್ದುಗೆ ಏರಿ ಇಂದಿಗೆ 6 ವರ್ಷ: ಅವರ ಟೆಸ್ಟ್​ ಕ್ರಿಕೆಟ್​ ದಾಖಲೆ ಹೇಗಿದೆ ನೋಡಿ

ಅಡಿಲೇಡ್​ನಲ್ಲಿ ನಡೆದಿದ್ದ ಪಂದ್ಯದಲ್ಲಿ ಧೋನಿ ಅನುಪಸ್ಥಿತಿಯಲ್ಲಿ ಬಿಸಿಸಿಐ ಮೊದಲ ಟೆಸ್ಟ್​ ಪಂದ್ಯದ ನಾಯಕತ್ವ ಜವಾಬ್ದಾರಿಯನ್ನು ವಿರಾಟ್​ ಕೊಹ್ಲಿಗೆ ವಹಿಸಿತ್ತು. ಯುವ ಪಡೆಯನ್ನು ಅದ್ಭುತವಾಗಿ ಮುನ್ನಡೆಸಿದ್ದ ಕೊಹ್ಲಿ ಎರಡೂ ಇನ್ನಿಂಗ್ಸ್​ಗಳಲ್ಲೂ ಆಕರ್ಷಕ ಶತಕ ಸಿಡಿಸಿ ಮಿಂಚಿದ್ದರು. ದುರಾದೃಷ್ಟವಶಾತ್​ ಇತರೆ ಬ್ಯಾಟ್ಸ್​ಮನ್​ಗಳ ವೈಫಲ್ಯದಿಂದ ಕೇವಲ 48 ರನ್​ಗಳ ಅಂತರದಿಂದ ಭಾರತ ತಂಡ ಸೋಲು ಕಂಡಿತ್ತು.

ವಿರಾಟ್​ ಕೊಹ್ಲಿ
ವಿರಾಟ್​ ಕೊಹ್ಲಿ

By

Published : Dec 9, 2020, 1:27 PM IST

ಹೈದರಾಬಾದ್​:ಭಾರತ ಟೆಸ್ಟ್​ ತಂಡದ ನಾಯಕತ್ವ ಜವಾಬ್ದಾರಿಯನ್ನು ಕೊಹ್ಲಿ ವಹಿಸಿಕೊಂಡು ಇಂದಿಗೆ 6 ವರ್ಷ ತುಂಬಿದೆ. ಕೊಹ್ಲಿ ಆಸ್ಟ್ರೇಲಿಯಾದಲ್ಲಿ 4 ಪಂದ್ಯಗಳ ಟೆಸ್ಟ್​ ಸರಣಿಯ ಮೊದಲ ಪಂದ್ಯದಲ್ಲಿ ನಾಯಕತ್ವ ಜವಾಬ್ದಾರಿವಹಿಸಿಕೊಂಡಿದ್ದರು.

ಅಡಿಲೇಡ್​ನಲ್ಲಿ ನಡೆದಿದ್ದ ಪಂದ್ಯದಲ್ಲಿ ಧೋನಿ ಅನುಪಸ್ಥಿತಿಯಲ್ಲಿ ಬಿಸಿಸಿಐ ಮೊದಲ ಟೆಸ್ಟ್​ ಪಂದ್ಯದ ನಾಯಕತ್ವ ಜವಾಬ್ದಾರಿಯನ್ನು ವಿರಾಟ್​ ಕೊಹ್ಲಿಗೆ ವಹಿಸಿತ್ತು. ಯುವ ಪಡೆಯನ್ನು ಅದ್ಭುತವಾಗಿ ಮುನ್ನಡೆಸಿದ್ದ ಕೊಹ್ಲಿ ಎರಡೂ ಇನ್ನಿಂಗ್ಸ್​ಗಳಲ್ಲೂ ಆಕರ್ಷಕ ಶತಕ ಸಿಡಿಸಿ ಮಿಂಚಿದ್ದರು. ದುರಾದೃಷ್ಟವಶಾತ್​ ಇತರೆ ಬ್ಯಾಟ್ಸ್​ಮನ್​ಗಳ ವಿಫಲತೆಯಿಂದ ಕೇವಲ 48ರನ್​ಗಳ ಅಂತರದಿಂದ ಭಾರತ ತಂಡ ಸೋಲು ಕಂಡಿತ್ತು.

ಆ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೆಲಿಯಾ ವಾರ್ನರ್​(145), ಮೈಕಲ್ ಕ್ಲಾರ್ಕ್​(162) ಹಾಗೂ ಸ್ಟಿವ್ ಸ್ಮಿತ್​(162) ಶತಕದ ನೆರವಿನಿಂದ 517 ರನ್​ಗಳಿಸಿದ್ದರು. ಇದಕ್ಕುತ್ತರವಾಗಿ ಭಾರತ ಕೊಹ್ಲಿ(115) ಶತಕ, ವಿಜಯ್(53) ಹಾಗೂ ರಹಾನೆ(62) ಅರ್ಧಶತಕದ ನೆರವಿನಿಂದ 444 ರನ್​ಗಳಿಸಿತ್ತು. 73 ರನ್​ಗಳ ಮುನ್ನಡೆ ಪಡೆದಿದ್ದ ಆಸೀಸ್​ 2ನೇ ಇನ್ನಿಂಗ್ಸ್​ನಲ್ಲಿ 290 ರನ್​ಗಳಿಸಿ, ಭಾರತಕ್ಕೆ 364 ರನ್​ಗಳ ಗುರಿ ನೀಡಿತ್ತು.

ವಿರಾಟ್​ ಕೊಹ್ಲಿ

ಭಾರತದ ಪರ ಮುರುಳಿ ವಿಜಯ್ 99 ಮತ್ತು ವಿರಾಟ್​ ಕೊಹ್ಲಿ 141 ರನ್​ಗಳಿಸಿ ಉತ್ತಮ ಪೈಪೋಟಿ ನಡೆಸಿತ್ತಾದರೂ, ನಥನ್ ಲಿಯಾನ್ ದಾಳಿಗೆ ದಿಢೀರ್ ಕುಸಿತ ಕಂಡು 315 ರನ್​ಗಳಿಗೆ ಆಲೌಟ್​ ಆಗುವ ಮೂಲಕ 48 ರನ್​ಗಳ ಸೋಲು ಕಂಡಿತ್ತು. ಲಿಯಾನ್​ 7 ವಿಕೆಟ್​ ಪಡೆದು ಮಿಂಚಿದ್ದರು.

ಧೋನಿ 3ನೇ ಪಂದ್ಯದ ನಂತರ ಟೆಸ್ಟ್​ ಕ್ರಿಕೆಟ್​ಗೆ ದಿಢೀರ್​ ನಿವೃತ್ತಿ ಘೋಷಿಸಿದ ನಂತರ ವಿರಾಟ್​ ಕೊಹ್ಲಿ ಭಾರತ ಟೆಸ್ಟ್​ ತಂಡಕ್ಕೆ ಪೂರ್ಣ ಪ್ರಮಾಣದ ನಾಯಕರಾದರು. ಅಲ್ಲಿಂದ ಇಲ್ಲಿಯವರೆಗೆ ಕೊಹ್ಲಿ 55 ಟೆಸ್ಟ್​ ಪಂದ್ಯಗಳಲ್ಲಿ ನಾಯಕರಾಗಿದ್ದಾರೆ. ಕೊಹ್ಲಿ ಭಾರತದ ಶ್ರೇಷ್ಠ ಟೆಸ್ಟ್​ ನಾಯಕನಾಗಿದ್ದು 55 ಪಂದ್ಯಗಳಲ್ಲಿ 33 ಜಯ ತಂದುಕೊಟ್ಟಿದ್ದಾರೆ. ಧೋನಿ 60 ಪಂದ್ಯಗಳಲ್ಲಿ 27ರಲ್ಲಿ ಜಯ ಮತ್ತು 18 ಸೋಲು ಕಂಡಿದ್ದರೆ, ಗಂಗೂಲಿ ನಾಯಕತ್ವದಲ್ಲಿ ಭಾರತ 49 ಪಂದ್ಯಗಳಿಂದ 21 ಜಯ ಮತ್ತು 13 ಸೋಲು ಕಂಡಿದೆ.

ABOUT THE AUTHOR

...view details