ಮುಂಬೈ: ಏಕದಿನ ಕ್ರಿಕೆಟ್ನ ಅಸಂಖ್ಯ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಸಿಕೊಂಡಿರುವ ಭಾರತದ ದಿಗ್ಗಜ ಸಚಿನ್ ತೆಂಡೂಲ್ಕರ್ ಏಕದಿನ ಕ್ರಿಕೆಟ್ನಲ್ಲಿ ಚೊಚ್ಚಲ ದ್ವಿಶತಕ ಸಿಡಿಸಿ ಇಂದಿಗೆ 10 ವರ್ಷ ಕಳೆದಿದೆ.
ಏಕದಿನ ಕ್ರಿಕೆಟ್ನ ನಾಲ್ಕು ದಶಕಗಳಲ್ಲಿ ಅಸಾಧ್ಯವಾಗಿದ್ದ ದ್ವಿಶತಕವನ್ನು ಕೊನೆಗೂ ಕ್ರಿಕೆಟ್ ದೇವರಾದ ಸಚಿನ್ ತೆಂಡೂಲ್ಕರ್ 2010 ಫೆ.24ರಂದು ದಕ್ಷಿಣ ಆಫ್ರಿಕಾ ವಿರುದ್ಧ ಸಿಡಿಸಿ ವಿಶ್ವಕ್ರಿಕೆಟ್ಗೆ ಅಚ್ಚರಿ ತಂದಿದ್ದರು. 150 ಹೊಡೆಯುವುದೇ ದುಸ್ತರವಾಗಿದ್ದ ಕಾಲದಲ್ಲಿ ಬಲಿಷ್ಠ ಬೌಲಿಂಗ್ ಶಕ್ತಿ ಹೊಂದಿದ್ದ ದಕ್ಷಿಣ ಆಫ್ರಿಕಾ ವಿರುದ್ಧ ಸಚಿನ್ ದ್ವಿಶತಕ ಸಾಧಿಸಿ ತೋರಿಸಿದ್ದರು.
ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಈ ಸಾಧನೆಯನ್ನು ಮಾಡಿದ್ದರು. ಫೆಬ್ರವರಿ 24, 2010 ರಂದು ಗ್ವಾಲಿಯರ್ ಮೈದಾನದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಭಾರತದ ನಡುವೆ ಏಕದಿನ ಸರಣಿಯ ಎರಡನೇ ಪಂದ್ಯ ನಡೆದಿತ್ತು. ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಏಕದಿನ ಕ್ರಿಕೆಟ್ ಇತಿಹಾಸದ ಪ್ರಪ್ರಥಮ ದ್ವಿಶತಕವನ್ನು ಸಿಡಿಸಿದ್ದರು. 147 ಎಸೆತಗಳನ್ನೆದುರಿಸಿದ್ದ ಸಚಿನ್ ನಲ್ಲಿ ಭರ್ಜರಿ 25 ಬೌಂಡರಿ ಮತ್ತು 3 ಸಿಕ್ಸರ್ ಸಹಿತ 200 ರನ್ಗಳಿಸಿ ಔಟಾಗದೇ ಉಳಿದಿದ್ದರು.