ಕರ್ನಾಟಕ

karnataka

ETV Bharat / sports

'ಹೇಗಾದರೂ ಮಾಡಿ ತಂಡವನ್ನು ಗೆಲ್ಲಿಸುತ್ತೇನೆಂದು ಮೈದಾನಕ್ಕೆ ಹೋದರೆ, ನಿಮ್ಮ ಸಾಮರ್ಥ್ಯ ತಾನಾಗೇ ಹೊರಬರುತ್ತದೆ' - ವಿರಾಟ್​ ಕೊಹ್ಲಿ ನ್ಯೂಸ್​

ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 22 ಸಾವಿರಕ್ಕೂ ಹೆಚ್ಚು ರನ್, 70 ಶತಕ, 108 ಅರ್ಧಶತಕ ಸಿಡಿಸಿರುವ ಕೊಹ್ಲಿ ನಾಯಕನಾಗಿ ಈಗಾಗಲೇ ಗಂಗೂಲಿ, ಧೋನಿಯನ್ನೇ ಮೀರಿಸಿ ಭಾರತವನ್ನು ಯಶಸ್ಸಿನ ಶಿಖರದತ್ತ ಕೊಂಡೊಯ್ದಿದ್ದಾರೆ.

ವಿರಾಟ್​ ಕೊಹ್ಲಿ
ವಿರಾಟ್​ ಕೊಹ್ಲಿ

By

Published : Dec 28, 2020, 10:33 PM IST

ನವದೆಹಲಿ: ಹೇಗಾದರೂ ತಂಡವನ್ನು ಗೆಲ್ಲಿಸಬೇಕೆಂಬ ಮನೋಬಲ ನಿಮ್ಮಲ್ಲಿದ್ದರೆ, ನೀವು ನಿಮ್ಮಲ್ಲಿರುವ ಮಿತಿಗಳನ್ನು ಮೀರಿ ನಿಮ್ಮ ಸ್ವಂತ ಸಾಮರ್ಥ್ಯದ ಮೇಲೆ ಪ್ರದರ್ಶನ ಮಾಡಲು ಸಾಧ್ಯವಾಗುತ್ತದೆ ಎಂದು ಐಸಿಸಿ ದಶಕದ ಕ್ರಿಕೆಟರ್​ ಪ್ರಶಸ್ತಿಗೆ ಭಾಜನರಾದ ಟೀಮ್ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 22 ಸಾವಿರಕ್ಕೂ ಹೆಚ್ಚು ರನ್, 70 ಶತಕ, 108 ಅರ್ಧಶತಕ ಸಿಡಿಸಿರುವ ಕೊಹ್ಲಿ ನಾಯಕನಾಗಿ ಈಗಾಗಲೇ ಗಂಗೂಲಿ, ಧೋನಿಯನ್ನೇ ಮೀರಿಸಿ ಭಾರತವನ್ನು ಯಶಸ್ಸಿನ ಶಿಖರದತ್ತ ಕೊಂಡೊಯ್ದಿದ್ದಾರೆ.

ಸೋಮವಾರ ಐಸಿಸಿ ದಶಕದ ಕ್ರಿಕೆಟಿಗ ಪ್ರಶಸ್ತಿಗೆ ತಮ್ಮನ್ನು ಆಯ್ಕೆ ಮಾಡಿರುವುದಕ್ಕೆ ಪ್ರತಿಕ್ರಿಯಿಸಿರುವ ಕೊಹ್ಲಿ, ತಮ್ಮ ಸಾಧನೆಗೆ ನೆರವಾದ ಹಲವಾರು ವಿಚಾರಗಳನ್ನು ಐಸಿಸಿ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.

"ನೀವು ಏಕಾಂಗಿಯಾಗಿ ಸ್ಥಿರತೆಯ ಬಗ್ಗೆ ಆಲೋಚಿಸಿದರೆ, ನನ್ನ ಪ್ರಕಾರ ನೀವು ಎಂದಿಗೂ ಸ್ಥಿರವಾಗಿರಲು ಸಾಧ್ಯವಿಲ್ಲ. ನೀವು ನಿಮ್ಮ ತಂಡವನ್ನು ಏನೇ ಆದರೂ ಗೆಲ್ಲಿಸುತ್ತೇನೆಂಬ ಮನೋಬಲದಲ್ಲಿ ಮೈದಾನಕ್ಕೆ ಹೆಜ್ಜೆ ಹಾಕಿದರೆ, ಆಗ ನೀವು ನಿಮ್ಮ ಇತಿ-ಮಿತಿಗಳನ್ನು ಮೀರಿ ಮತ್ತು ನಿಮ್ಮದೇ ಆದ ಸ್ವಂತ ಬಲದಿಂದ ಪ್ರದರ್ಶನ ತೋರುತ್ತೀರಿ" ಎಂದು ಕೊಹ್ಲಿ ಹೇಳಿದ್ದಾರೆ.

ಇದೇ ಮನಸ್ಥಿತಿ ಸದಾ ನನ್ನ ತಲೆಯಲ್ಲಿರುತ್ತದೆ. ತಂಡಕ್ಕಾಗಿ ಹೃದಯ ಮತ್ತು ಆತ್ಮವನ್ನು ನೀಡಿ, ಇಡೀ ತಂಡವಾಗಿ ಮೈದಾನಲ್ಲಿ ಫಲಿತಾಂಶ ಪಡೆಯುತ್ತೇವೆಯೋ ಅಥವಾ ಇಲ್ಲವೇ ಎಂಬುದರ ಬಗ್ಗೆ ಸರಿಯಾದ ದಿಕ್ಕಿನಲ್ಲಿ ಮುಂದುವರೆಯಲು ಬಯಸುತ್ತೇನೆ ಎಂದಿರುವ ಅವರು, ವೈಯಕ್ತಿಕ ಪ್ರದರ್ಶನವು ತಂಡದ ಗುರಿಗೆ ಹೊಂದಿಕೆಯಾದರೆ ಮಾತ್ರ ಅದು ಆಟಗಾರನಲ್ಲಿ ಅತ್ಯುತ್ತಮವಾದದ್ದನ್ನು ಹೊರ ತರುತ್ತದೆ ಎಂದಿದ್ದಾರೆ.

ನೀವು ಪಂದ್ಯದಲ್ಲಿ 40, 50, 60, ಶತಕ ಅಥವಾ ಧ್ವಿಶತಕ ಯಾವುದಾದರೂ ಗಳಿಸಿ. ಆದರೆ ತಂಡಕ್ಕೆ ಗೆಲುವು ತಂದುಕೊಡುವ ಆಲೋಚನೆಯಲ್ಲಿ ಮೈದಾನಕ್ಕೆ ಕಾಲಿಡಬೇಕಷ್ಟೇ. ನನ್ನ ಪಯತ್ನವೇನಿದ್ದರೂ ಸದಾ ತಂಡವನ್ನು ಎಷ್ಟು ಸಾಧ್ಯವೋ ಅಷ್ಟು ಗೆಲುವಿನ ಸ್ಥಾನದಲ್ಲಿರಿಸಲು ಬಯಸುತ್ತೇನೆ ಎಂದಿದ್ದಾರೆ.

ABOUT THE AUTHOR

...view details