ಕರ್ನಾಟಕ

karnataka

ETV Bharat / sports

ವಿಶ್ವಕಪ್​ ಆರಂಭ ಮಾತ್ರ, ಮುಂದೆ ಎಲ್ಲಾ ಮಾದರಿಯಲ್ಲೂ ಇಂಗ್ಲೆಂಡ್​ ಪ್ರಾಬಲ್ಯ: ತಂಡದ ಮಾಜಿ ನಾಯಕ - ವಿಶ್ವಕಪ್​

2019ರ ವಿಶ್ವಕಪ್​ನಲ್ಲಿ ಚಾಂಪಿಯನ್​ ಆಗಿರುವ ಇಂಗ್ಲೆಂಡ್ ವಿಜಯಯಾತ್ರೆ ಇದೀಗ ಶುರುವಾಗಿದೆ. ಆದರೆ ಇದು ಆರಂಭ ಮಾತ್ರ, ಎಲ್ಲಾ ಕ್ರಿಕೆಟ್​ ಮಾದರಿಗಳಲ್ಲಿ ನಮ್ಮ ತಂಡ ಪ್ರಾಬಲ್ಯ ಸಾಧಿಸಲಿದೆ ಎಂದು ಇಂಗ್ಲೆಂಡ್​ ತಂಡದ ಮಾಜಿ ನಾಯಕ ಮೈಕಲ್​ ವಾನ್​ ಅಭಿಪ್ರಾಯಪಟ್ಟಿದ್ದಾರೆ.

Cricket World Cup

By

Published : Jul 16, 2019, 4:14 PM IST

ಲಂಡನ್​:2019ರ ವಿಶ್ವಕಪ್​ನಲ್ಲಿ ಚಾಂಪಿಯನ್​ ಆಗಿರುವ ಇಂಗ್ಲೆಂಡ್ ವಿಜಯಯಾತ್ರೆ ಇದೀಗ ಶುರುವಾಗಿದೆ. ಆದರೆ ಇದು ಆರಂಭ ಮಾತ್ರ, ಎಲ್ಲಾ ಕ್ರಿಕೆಟ್​ ಮಾದರಿಗಳಲ್ಲಿ ನಮ್ಮ ತಂಡ ಪ್ರಾಬಲ್ಯ ಸಾಧಿಸಲಿದೆ ಎಂದು ಇಂಗ್ಲೆಂಡ್​ ತಂಡದ ಮಾಜಿ ನಾಯಕ ಮೈಕಲ್​ ವಾನ್​ ಅಭಿಪ್ರಾಯಪಟ್ಟಿದ್ದಾರೆ.

ಕಳೆದ ನಾಲ್ಕು ವರ್ಷಗಳಿಂದ ವಿಶ್ವಕಪ್​ಗೋಸ್ಕರ ಇಡೀ ತಂಡ ಸಾಕಷ್ಟು ಶ್ರಮಪಟ್ಟಿತ್ತು. ಬಲಿಷ್ಠವಾದ ತಂಡ ಕಟ್ಟಿದ್ದ ಇಂಗ್ಲೆಂಡ್​ ಕ್ರಿಕೆಟ್​ ಆಡಳಿತ ಮಂಡಳಿ ಏಕದಿನ ಕ್ರಿಕೆಟ್​ನಲ್ಲಿ ಪ್ರಾಬಲ್ಯ ಸಾಧಿಸಿತ್ತು.

ತವರಿನಲ್ಲಿ ನಡೆದ 12ನೇ ವಿಶ್ವಕಪ್​ನಲ್ಲಿ ಆರಂಭದಲ್ಲಿ ಅಬ್ಬರಿಸಿ, ಮಧ್ಯಂತರದಲ್ಲಿ ಸೋಲನುಭವಿಸಿ ಮತ್ತೆ ಕೊನೆಯಲ್ಲಿ ಸತತ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿ ಸೆಮಿಫೈನಲ್​ ಪ್ರವೇಶಿಸಿತ್ತು. ಅಲ್ಲೂ ಆಸ್ಟ್ರೇಲಿಯಾ ವಿರುದ್ಧ ಏಕಪಕ್ಷೀಯವಾಗಿ ಗೆಲುವು ಸಾಧಿಸಿತ್ತು. ನಂತರ ಫೈನಲ್​ನಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧ ಬೌಂಡರಿಗಳ ಆಧಾರದ ಮೇಲೆ ಗೆಲುವು ಸಾಧಿಸಿ ಚಾಂಪಿಯನ್​ ಆಗಿದೆ.

ಇಂಗ್ಲೆಂಡ್​ ಪ್ರದರ್ಶನ ಕುರಿತು ಟೆಲಿಗ್ರಾಫ್​ಗೆ ಲೇಖನ ಬರೆದಿರುವ ಮೈಕಲ್​ ವಾನ್​, ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಇಂಗ್ಲೆಂಡ್​ ಪ್ರಾಬಲ್ಯ ಈಗ ಶುರುವಾಗಿದೆ. ವಿಶ್ವಕಪ್​ ಗೆಲುವು ಆರಂಭ ಮಾತ್ರ. ಇನ್ಮುಂದೆ ಎಲ್ಲಾ ಮಾದರಿಯ ಕ್ರಿಕೆಟ್​ನಲ್ಲೂ ಇಂಗ್ಲೆಂಡ್​ ತನ್ನ ಪ್ರಾಬಲ್ಯ ಮೆರೆಯಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ABOUT THE AUTHOR

...view details