ಕರ್ನಾಟಕ

karnataka

By

Published : Nov 21, 2020, 4:22 PM IST

ETV Bharat / sports

ವಿರಾಟ್​ ಕೊಹ್ಲಿ ಜಾಗ ತುಂಬುವವರ್ಯಾರು? ಟೀಮ್​ ಇಂಡಿಯಾ ಮುಂದಿದೆ 4 ಆಯ್ಕೆ!

ಕೊನೆಯ ಮೂರು ಟೆಸ್ಟ್​ ಪಂದ್ಯಗಳಿಗೆ ಕೊಹ್ಲಿ ಜಾಗಕ್ಕೆ ಯಾರು ಅನ್ನೋ ಪ್ರಶ್ನೆ ಈಗಿನಿಂದಲೇ ಸಾಕಷ್ಟು ಕೇಳಿ ಬರುತ್ತಿದೆ. ಇನ್ನೂ ತಿಂಗಳ ಕಾಲ ಸಮಯವಿರುವುದರಿಂದ ಇಂತಹವರೇ ಕೊಹ್ಲಿ ಸ್ಥಾನ ತುಂಬಬಲ್ಲರು ಎಂದು ಹೇಳುವುದು ಆತುರದ ನಿರ್ಧಾರವಾಗಲಿದೆ. ಆದರೂ ಎರಡನೇ ಟೆಸ್ಟ್​​ನಿಂದ ಕೊಹ್ಲಿ ಜಾಗಕ್ಕೆ ರಾಹುಲ್, ರೋಹಿತ್ ಸೇರಿದಂತೆ ಹಲವರ ಹೆಸರು ಕೇಳಿ ಬರುತ್ತಿದೆ.

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ
ವಿರಾಟ್ ಕೊಹ್ಲಿ

ನವದೆಹಲಿ:ಭಾರತ ಕ್ರಿಕೆಟ್​ ತಂಡದ ನಾಯಕ ವಿರಾಟ್​ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್​ ನಂತರ ಭಾರತಕ್ಕೆ ಮರಳಲಿದ್ದಾರೆ. ಅವರ ಪತ್ನಿ ಅನುಷ್ಕಾ ಶರ್ಮಾ ಮೊದಲ ಮಗುವಿಗೆ ಜನ್ಮ ನೀಡುವುದರಿಂದ ಆ ಸಂದರ್ಭದಲ್ಲಿ ಜೊತೆಗಿರುವ ಸಲುವಾಗಿ ಕೊಹ್ಲಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ಆದ್ರೆ ಕೊನೆಯ ಮೂರು ಟೆಸ್ಟ್​ ಪಂದ್ಯಗಳಿಗೆ ಕೊಹ್ಲಿ ಜಾಗಕ್ಕೆ ಯಾರು ಅನ್ನೋ ಪ್ರಶ್ನೆ ಈಗಿನಿಂದಲೇ ಸಾಕಷ್ಟು ಕೇಳಿ ಬರುತ್ತಿದೆ. ಇನ್ನೂ ತಿಂಗಳ ಕಾಲ ಸಮಯವಿರುವುದರಿಂದ ಇಂತಹವರೇ ಕೊಹ್ಲಿ ಸ್ಥಾನ ತುಂಬಬಲ್ಲರು ಎಂದು ಹೇಳುವುದು ಆತುರದ ನಿರ್ಧಾರವಾಗಲಿದೆ. ಆದರೂ ಎರಡನೇ ಟೆಸ್ಟ್​​ನಿಂದ ಕೊಹ್ಲಿ ಜಾಗಕ್ಕೆ ರಾಹುಲ್, ರೋಹಿತ್ ಸೇರಿದಂತೆ ಹಲವರ ಹೆಸರು ಕೇಳಿ ಬರುತ್ತಿದೆ.

ಕೆ.ಎಲ್.ರಾಹುಲ್​

ಕನ್ನಡಿಗ ಕೆ.ಎಲ್.ರಾಹುಲ್ ಈ ಸ್ಥಾನಕ್ಕೆ ಸೂಕ್ತ ಆಯ್ಕೆಯಾಗಬಹುದು. ರೋಹಿತ್-ಅಗರ್​ವಾಲ್​ ಇನ್ನಿಂಗ್ಸ್​ ಆರಂಭಿಸಿದರೆ ಚೇತೇಶ್ವರ್ ಪೂಜಾರ ಮತ್ತು ರಹಾನೆ ಮಧ್ಯೆ ರಾಹುಲ್​ರನ್ನು ಆಡಿಸಬಹುದು ಎನ್ನಲಾಗುತ್ತಿದೆ.

ರೋಹಿತ್ ಶರ್ಮಾ

ಮತ್ತೊಂದು ಅಯ್ಕೆಯೆಂದರೆ ರೋಹಿತ್ ಶರ್ಮಾರನ್ನು ನಾಲ್ಕರಲ್ಲಿ ಆಡಿಸಿ ರಾಹುಲ್​ರನ್ನು ಆರಂಭಿಕ ಕ್ರಮಾಂಕದಲ್ಲಿ ಆಡಿಸಬಹುದಾಗಿದೆ. ಏಕೆಂದರೆ ಅವರು ಐಪಿಎಲ್​ನಲ್ಲಿ 670 ರನ್ ​ಗಳಿಸಿ ಆರಂಭಿಕರಾಗಿ ಭಾರೀ ಯಶಸ್ಸು ಸಾಧಿಸಿದ್ದಾರೆ.

ಇನ್ನು ಯುವ ಆಟಗಾರರಾದ ಪೃಥ್ವಿ ಶಾ ಮತ್ತು ಶುಬ್ಮನ್ ಗಿಲ್​ ಕೂಡ ಭಾರತ ತಂಡದ ಮುಂದಿರುವ ಮತ್ತೆರಡು ಆಯ್ಕೆಯಾಗಿದೆ. ಆದರೆ ಟೀಮ್ ಮ್ಯಾನೇಜ್​​ಮೆಂಟ್​ ಈ ಯುವ ಆಟಗಾರರನ್ನು ಕಣಕ್ಕಿಳಿಸುವ ಸಾಧ್ಯತೆ ಬಹಳ ಕಡಿಮೆಯಿದೆ. ಏಕೆಂದರೆ ಈ ಯುವ ಆಟಗಾರರು ಇತ್ತೀಚೆಗೆ ಮುಗಿದ ಐಪಿಎಲ್​ನಲ್ಲಿ ನೀರಸ ಪ್ರದರ್ಶನ ತೋರಿದ್ದಾರೆ.

ಶಾ ಕಳೆದ 5 ಪಂದ್ಯಗಳಲ್ಲಿ ಕೇವಲ 30 ರನ್ ​ಗಳಿಸಿದ್ದಾರೆ. ಮತ್ತೊಂದು ಕಡೆ ಟೂರ್ನಿಯಲ್ಲಿ ಗಿಲ್ ಕೂಡ ಏಳು-ಬೀಳು ಕಂಡಿದ್ದಾರೆ. ಅವರು 33.84 ಸರಾಸರಿಯಲ್ಲಿ 440 ರನ್​ ಗಳಿಸಿದ್ದಾರೆ. ಆದರೆ ಪೃಥ್ವಿ ಶಾಗೆ ಹೋಲಿಸಿದರೆ ಕೆಕೆಆರ್ ಬ್ಯಾಟ್ಸ್​ಮನ್​ ಅದ್ಭುತವಾದ ಟೆಸ್ಟ್​ ಸರಾಸರಿ ಹೊಂದಿದ್ದಾರೆ. ಶಾ 57 ಸರಾಸರಿ ಹೊಂದಿದ್ದರೆ, ಗಿಲ್ 73ರ ಸರಾಸರಿ ಹೊಂದಿದ್ದಾರೆ.

ಕೊನೆಯ ಆಯ್ಕೆ ಎಂದರೆ ಆಂಧ್ರ ಪ್ರದೇಶದ ಹನುಮ ವಿಹಾರಿ. ಇವರು ಈಗಾಗಲೇ ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ತಮ್ಮ ಸಾಮರ್ಥ್ಯ ಸಾಬೀತು ಮಾಡಿದ್ದಾರೆ. ಅವರು ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಿಲ್ಲವಾದರೂ ಆಸೀಸ್​ ವೇಗಿಗಳನ್ನು ಸಮರ್ಥವಾಗಿ ಎದುರಿಸಿದ್ದರು. ಹಾಗಾಗಿ ಇವರು ಕೂಡ ಕೊಹ್ಲಿ ಜಾಗಕ್ಕೆ ಒಂದು ಆಯ್ಕೆಯಾಗಿದ್ದಾರೆ.

ABOUT THE AUTHOR

...view details