ಮುಂಬೈ: ಕೊರೊನಾ ವಿರುದ್ಧ ಹೋರಾಟಕ್ಕೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಈಗಾಗಲೇ 50 ಲಕ್ಷ ರೂ ದೇಣಿಗೆ ನೀಡಿದ್ದು, ಇದೀಗ ಮತ್ತೊಂದು ಮಹತ್ವಾಕಾಂಕ್ಷಿ ಕಾರ್ಯಕ್ಕೆ ಹೆಜ್ಜೆ ಇಟ್ಟಿದ್ದಾರೆ.
ಸಚಿನ್ ತೆಂಡೂಲ್ಕರ್ ಇದೀಗ ಪ್ರತಿ ತಿಂಗಳು 5 ಸಾವಿರ ಜನರಿಗೆ ಊಟ ನೀಡುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಆದಾಯ ರಹಿತ ಸಂಸ್ಥೆ ಅಪ್ನಾಲಯದ ಮೂಲಕ ಈ ಕೆಲಸ ಮಾಡಲು ಕ್ರಿಕೆಟ್ ದಂತಕಥೆ ನಿರ್ಧರಿಸಿದ್ದಾರೆ. ಅವರ ಈ ನಿರ್ಧಾರಕ್ಕೆ ಈಗಾಗಲೇ ಅಪ್ನಾಲಯ್ ಟ್ವೀಟ್ ಮಾಡಿ ಮೆಚ್ಚುಗೆ ಸೂಚಿಸಿದ್ದು, ಪ್ರತಿ ತಿಂಗಳು ನೀವು ನೀಡುವ ರೇಷನ್ 5 ಸಾವಿರ ಜನರಿಗೆ ತಲುಪಿಸುವ ಕೆಲಸ ನಮ್ಮದು ಎಂದಿದೆ.