ಕರ್ನಾಟಕ

karnataka

ETV Bharat / sports

ಏಕದಿನ ಕ್ರಿಕೆಟ್​ನಲ್ಲೇ ಅತ್ಯಂತ ಕಳಪೆ ದಾಖಲೆ ಬರೆದ ಟೀಂ ಇಂಡಿಯಾ.. ಏನದು?

ಆಕ್ಲೆಂಡ್​ನಲ್ಲಿ ನಡೆದ ಏಕದಿನ ಸರಣಿಯ 2ನೇ ಪಂದ್ಯದಲ್ಲಿ ಶ್ರೇಯಸ್​ ಅಯ್ಯರ್​, ಜಡೇಜಾ, ನವದೀಪ್​ ಸೈನಿ ಅವರ ಬ್ಯಾಟಿಂಗ್ ನಡುವೆಯೂ ಭಾರತ ತಂಡ 22 ರನ್​ಗಳಿಂದ ಸೋತಿದೆ. ಇದರಿಂದಾಗಿ 2-0 ಅಂತರದಿಂದ ಸರಣಿ ಕೈಚೆಲ್ಲಿದೆ.

unwanted record
ಏಕದಿನ ಕ್ರಿಕೆಟ್​ನಲ್ಲಿ ಹೆಚ್ಚು ಪಂದ್ಯ ಸೋತ ಭಾರತ

By

Published : Feb 8, 2020, 7:26 PM IST

ಆಕ್ಲೆಂಡ್​:ಭಾರತ ತಂಡ ನ್ಯೂಜಿಲ್ಯಾಂಡ್​ ವಿರುದ್ಧ ಸತತ ಎರಡು ಏಕದಿನ ಪಂದ್ಯಗಳಲ್ಲೂ ಸೋಲು ಕಾಣುವ ಮೂಲಕ ಏಕದಿನ ಕ್ರಿಕೆಟ್​ ಇತಿಹಾಸದಲ್ಲಿ ಅತಿ ಹೆಚ್ಚು ಪಂದ್ಯ ಸೋಲುಕಂಡ ತಂಡ ಎಂಬ ಕೆಟ್ಟ ದಾಖಲೆಗೆ ಪಾತ್ರವಾಗಿದೆ.

ಆಕ್ಲೆಂಡ್​ನಲ್ಲಿ ನಡೆದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಶ್ರೇಯಸ್​ ಅಯ್ಯರ್​, ಜಡೇಜಾ, ನವದೀಪ್​ ಸೈನಿ ಅವರ ಬ್ಯಾಟಿಂಗ್ ನಡುವೆಯೂ ಭಾರತ ತಂಡ 22 ರನ್​ಗಳಿಂದ ಸೋಲು ಕಾಣುವ ಮೂಲಕ 2-0 ಅಂತದಿಂದ ಸರಣಿ ಕೈಚೆಲ್ಲಿದೆ.

ಈ ಸರಣಿ ಸೋಲಿನೊಂದಿಗೆ ಭಾರತ ಏಕದಿನ ಚರಿತ್ರೆಯಲ್ಲಿ ಆಡಿರುವ (ಅತಿ ಹೆಚ್ಚು) 986 ಪಂದ್ಯಗಳಲ್ಲಿ ಬರೋಬ್ಬರಿ 423 ಮ್ಯಾಚ್‌ಗಳಲ್ಲಿ ಸೋಲು ಕಂಡಂತಾಗಿದೆ. ಈ ಮೂಲಕ ಹೆಚ್ಚು ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳನ್ನು ಸೋತ ತಂಡ ಎಂಬ ಕೆಟ್ಟ ದಾಖಲೆಗೂ ಟೀಂ ಇಂಡಿಯಾ ಪಾತ್ರವಾಗಿದೆ. ಭಾರತವನ್ನು ಬಿಟ್ಟರೆ ಶ್ರೀಲಂಕಾ 421, ಪಾಕಿಸ್ತಾನ 413, ನ್ಯೂಜಿಲ್ಯಾಂಡ್​ 374 ಪಂದ್ಯಗಳಲ್ಲಿ ಸೋತು ನಂತರದ ಸ್ಥಾನದಲ್ಲಿವೆ.

12 ಸರಣಿಗಳ ಜಯದ ಬಳಿಕ ಮೊದಲ ಸೋಲು:ಭಾರತ ತಂಡ 2019ರ ವಿಶ್ವಕಪ್ ಬಳಿಕ ಎಲ್ಲ ಮಾದರಿಯ 12 ದ್ವಿಪಕ್ಷೀಯ ಸರಣಿಗಳನ್ನಾಡಿದೆ. ಈ ವೇಳೆ 3 ಟೆಸ್ಟ್​ ಸರಣಿ, 5 ಟಿ20 ಹಾಗೂ ಮೂರು ಏಕದಿನ ಸರಣಿಯಲ್ಲಿ ಗೆಲುವು ಸಾಧಿಸಿತ್ತು. ದಕ್ಷಿಣ ಆಫ್ರಿಕಾ ವಿರುದ್ಧ ಮಾತ್ರ ಟಿ20 ಸರಣಿಯನ್ನು ಡ್ರಾ ಸಾಧಿಸಿತ್ತು. ಇದೀಗ ಕಿವೀಸ್​ ವಿರುದ್ಧ ಏಕದಿನ ಸರಣಿ ಕಳೆದುಕೊಳ್ಳುವ ಮೂಲಕ ತನ್ನ ಸರಣಿ ಗೆಲುವಿನ ಸರಪಳಿ ಕಳಚಿಕೊಂಡಿದೆ.

ABOUT THE AUTHOR

...view details