ಬರ್ಮಿಂಗ್ಹ್ಯಾಮ್:ಪ್ರಸಕ್ತ ಸಾಲಿನ ವಿಶ್ವಕಪ್ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಕೊಹ್ಲಿ ಪಡೆ, ಆಸ್ಟ್ರೇಲಿಯಾ ಬಳಿಕ 2ನೇ ತಂಡವಾಗಿ ಸೆಮಿಫೈನಲ್ ಪ್ರವೇಶ ಪಡೆದುಕೊಂಡಿದ್ದು, ಈ ಮೂಲಕ 7ನೇ ಬಾರಿ ಮೆಗಾ ಟೂರ್ನಿಯಲ್ಲಿ ಸೆಮೀಸ್ ಪ್ರವೇಶ ಪಡೆದ ತಂಡ ಎಂಬ ರೆಕಾರ್ಡ್ ಬರೆದಿದೆ.
ಈ ಹಿಂದೆ ಭಾರತ 1983,1987,1996, 2003, 2011 ಹಾಗೂ 2015ರ ವಿಶ್ವಕಪ್ಗಳಲ್ಲಿ ಸೆಮಿಫೈನಲ್ ಪ್ರವೇಶ ಪಡೆದುಕೊಂಡಿತ್ತು. ಈ ಸಲವೂ ಬಾಂಗ್ಲಾ ವಿರುದ್ಧ 28 ರನ್ಗಳ ಗೆಲುವು ದಾಖಲು ಮಾಡುವ ಮೂಲಕ ಮುಂದಿನ ಹಂತಕ್ಕೆ ಅವಕಾಶ ಪಡೆದುಕೊಂಡಿದೆ. ಇನ್ನು ವಿಶ್ವಕಪ್ನಲ್ಲಿ ಬಾಂಗ್ಲಾದೇಶಕ್ಕೆ ಇದು ಭಾರತದ ವಿರುದ್ಧ ಸತತ ಮೂರನೇ ಸೋಲು. 2015ರಲ್ಲಿ ವಿಶ್ವಕಪ್ ಸೆಮಿಫೈನಲ್ ಪ್ರವೇಶ ಪಡೆದುಕೊಂಡಿದ್ದ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದಿತ್ತು.
ರೋಹಿತ್ ಶರ್ಮಾ ದಾಖಲೆ
ವಿಶ್ವಕಪ್ನಲ್ಲಿ ಈ ಹಿಂದೆ ಸೌರವ್ ಗಂಗೂಲಿ 2003ರ ವಿಶ್ವಕಪ್ನಲ್ಲಿ ಮೂರು ಶತಕ ದಾಖಲಿಸಿದ್ದರು. ಇದೀಗ ರೋಹಿತ್ ಶರ್ಮಾ ಆ ದಾಖಲೆ ಅಳಿಸಿ ಹಾಕುವ ಮೂಲಕ 4 ಶತಕ ಸಿಡಿಸಿರುವ ಭಾರತದ ಮೊದಲ ಬ್ಯಾಟ್ಸ್ಮನ್ ಎಂಬ ರೆಕಾರ್ಡ್ ಸಹ ಬರೆದಿದ್ದಾರೆ. ಗಂಗೂಲಿ ಕಿನ್ಯಾ ವಿರುದ್ಧ 2 ಶತಕ ಹಾಗೂ ನಮಿಬಿಯಾ ವಿರುದ್ಧ 1 ಶತಕ ದಾಖಲು ಮಾಡಿದ್ದರು.