ಶ್ರೀನಗರ: ಆಗಸ್ಟ್ 15ರಂದು ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಘೋಷಣೆ ಮಾಡಿರುವ ಟೀಂ ಇಂಡಿಯಾ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಸುರೇಶ್ ರೈನಾ ಇದೀಗ ತಮ್ಮ ವೃತ್ತಿ ಜೀವನದ ಎರಡನೇ ಇನ್ನಿಂಗ್ಸ್ ಆರಂಭಿಸಲು ಮುಂದಾಗಿದ್ದಾರೆ.
ಜಮ್ಮು- ಕಾಶ್ಮೀರ ಬಡ ಮಕ್ಕಳಿಗೆ ಮಿಡಿದ ಮನ...ಈ ನಿರ್ಧಾರ ಕೈಗೊಂಡ ಸುರೇಶ್ ರೈನಾ! - ರೈನಾ ಕಾಶ್ಮೀರ
ಅತಿ ಕಡಿಮೆ ವಯಸ್ಸಿನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಣೆ ಮಾಡಿರುವ ಸುರೇಶ್ ರೈನಾ ಇದೀಗ ತಮ್ಮ ಜೀವನದ ಎರಡನೇ ಇನ್ನಿಂಗ್ಸ್ ಆರಂಭಿಸಲು ಮುಂದಾಗಿದ್ದಾರೆ.
ಕಣಿವೆ ನಾಡು ಜಮ್ಮು - ಕಾಶ್ಮೀರದಲ್ಲಿ ಕ್ರಿಕೆಟ್ ಪ್ರಚಾರ ಮಾಡಲು ಮುಂದಾಗಿರುವ ರೈನಾ, ಇದೇ ವಿಚಾರವಾಗಿ ಇದೀಗ ಅಲ್ಲಿ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ದಿಲ್ಬಾಗ್ ಸಿಂಗ್ ಹಾಗೂ ಅನಂತ್ನಾಗ್ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ್ ಸಿಂಗ್ಗೆ ಪತ್ರ ಬರೆದಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿ ಕ್ರಿಕೆಟ್ ಪ್ರಚಾರದ ಜತೆಗೆ ಅಲ್ಲಿನ ಬಡ ಮಕ್ಕಳಿಗೆ ಇದರ ಬಗ್ಗೆ ತರಬೇತಿ ನೀಡಿ, ಅವರ ವೃತ್ತಿ ಜೀವನ ರೂಪಿಸಲು ನಿರ್ಧರಿಸಿದ್ದಾಗಿ ತಿಳಿಸಿದ್ದಾರೆ. ಅಲ್ಲಿನ ಗ್ರಾಮೀಣ ಶಾಲೆ ಹಾಗೂ ಕಾಲೇಜ್ಗಳಲ್ಲಿ ಕ್ರಿಕೆಟ್ ಪ್ರಚಾರ ಮಾಡಲು ಮುಂದಾಗಿದ್ದು, ಗ್ರಾಮೀಣ ಪ್ರತಿಭೆಗಳನ್ನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡುವುದೇ ನನ್ನ ಉದ್ದೇಶ ಎಂದು ತಿಳಿಸಿದ್ದಾರೆ.15 ವರ್ಷದ ಕ್ರಿಕೆಟ್ ವೃತ್ತಿ ಬದುಕಿನಲ್ಲಿ ಸುರೇಶ್ ರೈನಾ ಏಕದಿನ ಕ್ರಿಕೆಟ್ನಿಂದ 5,615ರನ್ಗಳಿಕೆ ಮಾಡಿದ್ದಾರೆ. ಇದರಲ್ಲಿ 36 ಅರ್ಧಶತಕ ಸೇರಿವೆ.