ಕರ್ನಾಟಕ

karnataka

ETV Bharat / sports

ಐಪಿಎಲ್​ನಿಂದಲೇ 100 ಕೋಟಿ ರೂ. ಸಂಭಾವನೆ ಪಡೆದ 4ನೇ ಆಟಗಾರ ಸುರೇಶ್ ರೈನಾ! - ಐಪಿಲ್​ನಲ್ಲಿ 100 ಕೋಟಿ ಗಳಿಸಿದ ರೈನಾ

ಸುರೇಶ್​ ರೈನಾ, ಇಂಡಿಯನ್ ಪ್ರೀಮಿಯರ್​ ಲೀಗ್​ನಿಂದಲೇ 100 ಕೋಟಿ ಸಂಪಾದನೆ ಮಾಡಿದ 4ನೇ ಆಟಗಾರ ಎನಿಸಿದ್ದಾರೆ.

Suresh Raina
ಸುರೇಶ್ ರೈನಾ

By

Published : Jan 22, 2021, 9:50 AM IST

ನವದೆಹಲಿ:ವೈಯಕ್ತಿಕ ಕಾರಣಗಳಿಂದ 2020ರ ಐಪಿಎಲ್ ಟೂರ್ನಿಯಿಂದ ಹೊರಗುಳಿದಿದ್ದ ಸುರೇಶ್​ ರೈನಾ ಅವರನ್ನು ಚೆನ್ನೈ ತಂಡ ಉಳಿಸಿಕೊಂಡಿದ್ದು 2021ರ ಸೀಸನ್​ನಲ್ಲಿ ಸಿಎಸ್​ಕೆ ಪರ ಕಣಕ್ಕಿಳಿಯೋದು ಪಕ್ಕಾ ಆಗಿದೆ.

ಸಿಎಸ್​ಕೆ ತಂಡದ ಖಾಯಂ ಸದಸ್ಯನಂತೆ ಹಲವು ವರ್ಷಗಳಿಂದ ಹಳದಿ ಜೆರ್ಸಿ ತೊಟ್ಟು ಕಣಕ್ಕಿಳಿಯುತ್ತಿರುವ ರೈನಾ ಗಳಿಕೆ ವಿಚಾರದಲ್ಲಿ ಹೊಸದೊಂದು ದಾಖಲೆ ಬರೆದಿದ್ದಾರೆ. 2008 ರಿಂದ ಐಪಿಎಲ್ ಟೂರ್ನಿ ಆಡುತ್ತಿರುವ ರೈನಾ, ಈ ಸೀಸನ್​ಗೆ 11 ಕೋಟಿ ಸಂಭಾವನೆ ಪಡೆಯಲಿದ್ದಾರೆ ಎಂದು ಹೇಳಲಾಗಿದೆ. ಈ ಮೂಲಕ ಇಂಡಿಯನ್ ಪ್ರೀಮಿಯರ್​ ಲೀಗ್​ನಿಂದಲೇ 100 ಕೋಟಿ ಸಂಪಾದನೆ ಮಾಡಿದ 4ನೇ ಆಟಗಾರ ಎನಿಸಿದ್ದಾರೆ.

ಸಿಎಸ್​​ಕೆ ತಂಡದ ನಾಯಕ ಧೋನಿ, ಆರ್​ಸಿಬಿ ನಾಯಕ ವಿರಾಟ್ ಕೊಹ್ಲಿ ಮತ್ತು ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ ಐಪಿಎಲ್​ ನಿಂದಲೇ 100 ಸಂಭಾವನೆ ಪಡೆದ ಆಟಗಾರರು ಎನಿಸಿದ್ದರು. ಇದೀಗ ಈ ಪಟ್ಟಿಗೆ ಸುರೇಶ್ ರೈನಾ ಕೂಡ ಸೇರ್ಪಡೆಯಾಗಿದ್ದಾರೆ ಎಂದು ವರದಿಯಾಗಿದೆ.

34ರ ಹರೆಯದ ಸುರೇಶ್ ರೈನಾ ಐಪಿಎಲ್‌ನಲ್ಲಿ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್ ಎನಿಸಿದ್ದು, 164 ಪಂದ್ಯಗಳಿಂದ 4,527 ರನ್‌ಗಳನ್ನು ಬಾರಿಸಿದ್ದಾರೆ. 2020ರ ಆಗಸ್ಟ್ ತಿಂಗಳಿನಲ್ಲಿ ಸುರೇಶ್ ರೈನಾ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ನಿವೃತ್ತಿ ಘೋಷಿಸಿದ್ದರು.

ABOUT THE AUTHOR

...view details