ಜಮ್ಮು: 2020ರ ಐಪಿಎಲ್ನಲ್ಲಿ ಸನ್ರೈಸರ್ಸ್ ಪರ ಆಡಿದ್ದು ಜಮ್ಮು ಕಾಶ್ಮೀರದ ಯುವ ಆಲ್ರೌಂಡರ್ ಅಬ್ಧುಲ್ ಸಮದ್ ಅದ್ಭುತ ಪ್ರದರ್ಶನಕ್ಕೆ ಕಾರಣವಾಗಿದೆ ಎಂದು ಮಾಜಿ ಟೀಮ್ ಇಂಡಿಯಾ ಆಟಗಾರ ಸುರೇಶ್ ರೈನಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಮದ್ 13ನೇ ಐಪಿಎಎಲ್ನಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ. ಅವರು ಸೂಕ್ತ ಪ್ರೋತ್ಸಾಹ ಮತ್ತು ಉತ್ತಮ ಸೌಲಭ್ಯಗಳ ಕೊರತೆಯ ನಡುವೆಯೂ ಅದ್ಭುತ ಸೃಷ್ಟಿಸಿದರು ಎಂದು ಯುವ ಆಟಗಾರನನ್ನು ರೈನಾ ಕೊಂಡಾಡಿದ್ದಾರೆ.
ನನಗೆ ಸಮದ್ ಮೇಲೆ ಭರವಸೆಯಿದೆ. ಈಗಾಗಲೇ ಅವನ ಜೊತೆ ಮಾತನಾಡಿದ್ದೇನೆ. ಆತ ಐಪಿಎಲ್ನಲ್ಲಿ ಆಡಿದ ಮೇಲೆ ಕ್ರಿಕೆಟ್‌ನಲ್ಲಿ ಮುಂದೆ ಬರುತ್ತಿದ್ದಾನೆ. ಆತನಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸಿಕೊಟ್ಟರೆ ಖಂಡಿತ ಭವಿಷ್ಯದಲ್ಲಿ ಅತ್ಯುತ್ತಮವಾಗಿ ಆಡಬಲ್ಲ ಎಂದು ಅವರು ಹೇಳಿದ್ದಾರೆ.