ಕರ್ನಾಟಕ

karnataka

ETV Bharat / sports

ಸ್ನೇಹಿತರ ದಿನದ ಸಂಭ್ರಮ.. ಎಂಎಸ್​ ಧೋನಿ ನನ್ನ 'ಮಾರ್ಗದರ್ಶಕ' ಎಂದ ರೈನಾ!! - ಚೆನ್ನೈ ಸೂಪರ್​ ಕಿಂಗ್ಸ್​

ಈ ವಿಡಿಯೋಗೆ ಪ್ರತಿಕ್ರಿಯೆ ನೀಡಿರುವ ರೈನಾ, 'ಸುಂದರವಾದ ನೆನಪುಗಳನ್ನು ಸೃಷ್ಠಿಸಿರುವುದಕ್ಕೆ ಚೆನ್ನೈಸೂಪರ್​ ಕಿಂಗ್ಸ್​ಗೆ ಧನ್ಯವಾದಳು. ಎಂಎಸ್​ ಧೋನಿ ನನಗೆ ಸ್ನೇಹಿತ ಮಾತ್ರವಲ್ಲ, ನನ್ನ ಮಾರ್ಗದರ್ಶಕ ಮತ್ತು ಕಠಿಣ ಸಮಯದಲ್ಲಿ ಯಾವಾಗಲೂ ನನ್ನ ಜೊತೆಯಲ್ಲಿದ್ದರು..

ಸ್ನೇಹಿತರ ದಿನ
ಸ್ನೇಹಿತರ ದಿನ

By

Published : Aug 2, 2020, 3:28 PM IST

ಮುಂಬೈ :ಭಾರತ ತಂಡದ ಹಿರಿಯ ಆಲ್​ರೌಂಡರ್​ ಸುರೇಶ್​ ರೈನಾ ಸ್ನೇಹಿತರ ದಿನದಂದು ತಮ್ಮ ನೆಚ್ಚಿನ ಸ್ನೇಹಿತ ಧೋನಿಗೆ ಶುಭಕೋರಿದ್ದು, ಧೊನಿಯನ್ನು ಸ್ನೇಹಿತ ಮಾತ್ರವಲ್ಲ ತಮ್ಮ ಮಾರ್ಗದರ್ಶಕ ಎಂದು ಹೇಳಿದ್ದಾರೆ.

ಚೆನ್ನೈ ಸೂಪರ್​ಕಿಂಗ್ಸ್​ ತನ್ನ ಅಧಿಕೃತ ಟ್ವಿಟರ್​ನಲ್ಲಿ ಸ್ನೇಹಿತರ ದಿನದಂದು ರೈನಾ ಮತ್ತು ಧೋನಿ ಒಟ್ಟಿಗೆಯಿರುವ ವಿಡಿಯೋ ತುಣುಕುಗಳನ್ನು ಶೇರ್ ಮಾಡಿಕೊಂಡಿತ್ತು.

ಈ ವಿಡಿಯೋಗೆ ಪ್ರತಿಕ್ರಿಯೆ ನೀಡಿರುವ ರೈನಾ, 'ಸುಂದರವಾದ ನೆನಪುಗಳನ್ನು ಸೃಷ್ಠಿಸಿರುವುದಕ್ಕೆ ಚೆನ್ನೈಸೂಪರ್​ ಕಿಂಗ್ಸ್​ಗೆ ಧನ್ಯವಾದಳು. ಎಂಎಸ್​ ಧೋನಿ ನನಗೆ ಸ್ನೇಹಿತ ಮಾತ್ರವಲ್ಲ, ನನ್ನ ಮಾರ್ಗದರ್ಶಕ ಮತ್ತು ಕಠಿಣ ಸಮಯದಲ್ಲಿ ಯಾವಾಗಲೂ ನನ್ನ ಜೊತೆಯಲ್ಲಿದ್ದರು. ಧನ್ಯವಾದಗಳು ಮಹಿ ಬಾಯ್​, ಆದಷ್ಟು ಬೇಗ ಸಿಗೋಣ, ಸ್ನೇಹಿತರ ದಿನಚಾರಣೆಯ ಶುಭಾಶಯಗಳು' ಎಂದು ಬರೆದುಕೊಂಡಿದ್ದಾರೆ.

ಭಾರತದ ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡೂಲ್ಕರ್​ ಕೂಡ ಸ್ನೇಹಿತರ ದಿನದ ಶುಭಾಶಯ ಕೋರಿದ್ದು, 'ಗೆಳತನವೆಂಬುದು ಕ್ರಿಕೆಟ್​ ಮೈದಾನದಲ್ಲಿರುವ ಫ್ಲಡ್​ ಲೈಡ್​ಗಳ ಹಾಗೆ. ಅವರು ನಿಮ್ಮ ಯಶಸ್ಸನ್ನು ಯಾವುದೋ ಮೂಲೆಯಲ್ಲಿ ನಿಂತು ಆನಂದಿಸುತ್ತಾರೆ. ಆದರೆ, ಸೂರ್ಯ ನಿಮ್ಮನ್ನು ಬಿಟ್ಟು ಹೋಗುತ್ತಿದ್ದಾನೆ ಎಂದೆನಿಸಿದಾಗ, ಅವರು ತಾವಾಗಿಯೇ ಬೆಳಗುವ ಮೂಲಕ ನಿಮ್ಮ ಸುತ್ತಲು ಹೊಳಪನ್ನು ಒದಗಿಸುತ್ತಾರೆ' ಎಂದು ಬರೆದು ತಮ್ಮ ಬಾಲ್ಯ ಸ್ನೇಹಿತರ ಜೊತೆಗಿನ ಫೋಟೋವನ್ನು ಶೇರ್​ ಮಾಡಿಕೊಂಡಿದ್ದಾರೆ.

ABOUT THE AUTHOR

...view details