ಮುಂಬೈ:ಮಹೇಂದ್ರ ಸಿಂಗ್ ಧೋನಿ ಒಬ್ಬ ಬೆಸ್ಟ್ ಕ್ಯಾಪ್ಟನ್ ಎಂದು ಈಗಾಗಲೇ ರೋಹಿತ್ ಶರ್ಮಾ ಹೇಳಿಕೆ ನೀಡಿದ್ದು, ಇದರ ಬೆನ್ನಲ್ಲೇ ಇದೀಗ ಮತ್ತೋರ್ವ ಆಟಗಾರ ಎಂಎಸ್ ಪರ ಬ್ಯಾಟ್ ಬೀಸಿದ್ದಾರೆ.
ಟೀಂ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಸುರೇಶ್ ರೈನಾ ಮಾತನಾಡಿದ್ದು, ಎಂಎಸ್ ಧೋನಿ ಓರ್ವ ಬೆಸ್ಟ್ ಕ್ಯಾಪ್ಟನ್ ಆಗಿದ್ದಾರೆ. ಈ ಹಿಂದೆ ನಾನು ಅವರಂತಹ ಕ್ಯಾಪ್ಟನ್ ನೋಡಿಲ್ಲ ಎಂದಿದ್ದಾರೆ. ಇಂಡಿಯನ್ ಕ್ರಿಕೆಟ್ ಟೀಂ ಬದಲಾವಣೆ ಮಾಡಿರುವ ಶ್ರೇಯ ಅವರಿಗೇ ಸಲ್ಲಬೇಕು. ಇದೀಗ ಡ್ರೆಸ್ಸಿಂಗ್ ರೂಂನಲ್ಲಿ ಅವರನ್ನ ಮತ್ತೊಮ್ಮೆ ನೋಡಲು ಹೆಮ್ಮೆ ಆಗುತ್ತದೆ ಎಂದಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಧೋನಿ, ಸುರೇಶ್ ರೈನಾ ಚೆನ್ನೈ ಸೂಪರ್ ಕಿಂಗ್ಸ್ ಪರ ಬ್ಯಾಟ್ ಬೀಸುತ್ತಿದ್ದು, ತಂಡದ ಕ್ಯಾಪ್ಟನ್ ಆಗಿ ಧೋನಿ ಮುಂದಾಳತ್ವ ವಹಿಸಿಕೊಂಡಿದ್ದಾರೆ. ಟೀಂ ಇಂಡಿಯಾಗೆ ಈಗಾಗಲೇ ಎರಡು ವಿಶ್ವಕಪ್ ತಂದುಕೊಟ್ಟಿರುವ ಎಂಎಸ್ ಧೋನಿ, 2019ರ ವಿಶ್ವಕಪ್ ಬಳಿಕ ಮೈದಾನಕ್ಕಿಳಿದಿಲ್ಲ. ಆದರೆ, ಮಾರ್ಚ್ 29ರಿಂದ ಆರಂಭಗೊಳ್ಳಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಸಿಎಸ್ಕೆ ಪರ ಬ್ಯಾಟ್ ಬೀಸಲು ಮೈದಾನಕ್ಕಿಳಿಯಲಿದ್ದಾರೆ.
ಇನ್ನು ಟೀಂ ಇಂಡಿಯಾ ಪರ 2018ರಲ್ಲಿ ಕೊನೆಯದಾಗಿ ಮೈದಾನಕ್ಕಿಳಿದಿದ್ದ ಸುರೇಶ್ ರೈನಾ ಕೂಡ ಕೇವಲ ಐಪಿಎಲ್ನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದು, ದೇಶಿಯ ಕ್ರಿಕೆಟ್ನಿಂದಲೂ ದೂರ ಉಳಿದಿದ್ದಾರೆ.