ಸಿಡ್ನಿ:ಭಾರತ ವಿರುದ್ಧದ ಬಾರ್ಡರ್ - ಗವಾಸ್ಕರ್ ಟ್ರೋಫಿಯ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಟೆಸ್ಟ್ ಕ್ರಿಕೆಟ್ನ 27 ನೇ ಶತಕ ಸಿಡಿಸಿದಿ ಸ್ಟೀವ್ ಸ್ಮಿತ್, ಕಡಿಮೆ ಇನ್ನಿಂಗ್ಸ್ಗಳಲ್ಲಿ ಈ ಸಾಧನೆ ಮಾಡಿದ ವಿಶ್ವದ ಎರಡನೇ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.
ಟೆಸ್ಟ್ ಕ್ರಿಕೆಟ್ನಲ್ಲಿ 27ನೇ ಶತಕ: ವಿರಾಟ್, ಸಚಿನ್ ಹಿಂದಿಕ್ಕಿ ಹೊಸ ದಾಖಲೆ ಬರೆದ ಸ್ಮಿತ್
ಆಸೀಸ್ ಕ್ರಿಕೆಟಿಗ ಸ್ಟೀವ್ ಸ್ಮಿತ್ ಟೆಸ್ಟ್ ಕ್ರಿಕೆಟ್ನಲ್ಲಿ ಭಾರತದ ವಿರುದ್ಧ 8 ಶತಕ ಸಿಡಿಸಿದ್ದು, ಕೇವಲ 25 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದಾರೆ.
27ನೇ ಶತಕ ಸಿಡಿಸಿದ ಸ್ಮಿತ್, ಬ್ರಾಡ್ಮನ್ ನಂತರ ಕಡಿಮೆ ಇನ್ನಿಂಗ್ಸ್ಗಳಲ್ಲೇ ಈ ಸಾಧನೆ ಮಾಡಿದ್ದಾರೆ. ಡಾನ್ ಬ್ರಾಡ್ಮನ್ 70 ಇನ್ನಿಂಗ್ಸ್ಗಳಲ್ಲಿ 27 ಶತಕ ಸಿಡಿದ್ರೆ, ಸ್ಟೀವ್ ಸ್ಮಿತ್ 136, ವಿರಾಟ್ ಕೊಹ್ಲಿ 141, ಸಚಿನ್ ತೆಂಡೂಲ್ಕರ್ 141, ಸುನಿಲ್ ಗವಾಸ್ಕರ್ 154 ಮತ್ತು ಮ್ಯಾಥ್ಯೂ ಹೇಡನ್ 157 ಇನ್ನಿಂಗ್ಸ್ ತೆಗೆದುಕೊಂಡಿದ್ದಾರೆ.
ಸ್ಮಿತ್ 2019ರ ಆ್ಯಶಸ್ ಟೆಸ್ಟ್ ಸರಣಿಯ ನಂತರ ಮೊದಲ ಟೆಸ್ಟ್ ಶತಕ ಸಿಡಿಸಿದ್ರು. ಸ್ಮಿತ್ ಟೆಸ್ಟ್ ಕ್ರಿಕೆಟ್ನಲ್ಲಿ ಭಾರತದ ವಿರುದ್ಧ 8 ಶತಕ ಸಿಡಿಸಿದ್ದು, ಕೇವಲ 25 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಸ್ಮಿತ್ ಹೊರತುಪಡಿಸಿದರೆ, ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ (51 ಇನ್ನಿಂಗ್ಸ್) ಮತ್ತು ವೆಸ್ಟ್ ಇಂಡೀಸ್ ದಂತಕತೆ ವಿವಿಯನ್ ರಿಚರ್ಡ್ಸ್ (41 ಇನ್ನಿಂಗ್ಸ್) ಮತ್ತು ಗ್ಯಾರಿ ಸೋಬರ್ಸ್ (30 ಇನ್ನಿಂಗ್ಸ್) ಭಾರತದ ವಿರುದ್ಧ ಎಂಟು ಶತಕ ಗಳಿಸಿದ್ದಾರೆ.