ಕರ್ನಾಟಕ

karnataka

ETV Bharat / sports

ಕನ್ನಡಿಗ ಕೆ.ಎಲ್.ರಾಹುಲ್​ರನ್ನ​ ಹಾಡಿ ಹೊಗಳಿದ ಸ್ಟೀವ್​ ಸ್ಮಿತ್​!

ಟೀಂ ಇಂಡಿಯಾದ ಯುವ ಆಟಗಾರ ಕೆ.ಎಲ್.ರಾಹುಲ್​​ ಬಗ್ಗೆ ಆಸ್ಟ್ರೇಲಿಯಾ ಕ್ರಿಕೆಟರ್​ ಸ್ಟೀವ್​ ಸ್ಮಿತ್​ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

By

Published : Jun 15, 2020, 4:21 PM IST

Steve Smith
Steve Smith

ಸಿಡ್ನಿ:ಟೀಂ ಇಂಡಿಯಾದ ಯುವ ಆಟಗಾರ ಕೆ.ಎಲ್​.ರಾಹುಲ್​ ಬಗ್ಗೆ ಆಸ್ಟ್ರೇಲಿಯಾದ ಕ್ರಿಕೆಟರ್​ ಸ್ಟೀವ್​ ಸ್ಮಿತ್​ ಮೆಚ್ಚುಗೆ ವ್ಯಕ್ತಪಿಡಿಸಿದ್ದು, ಅವರು ತಮ್ಮ ಬ್ಯಾಟಿಂಗ್​​ನಿಂದ ನನ್ನನ್ನು ಇಂಪ್ರೆಸ್​ ಮಾಡಿದ್ದಾರೆ ಎಂದಿದ್ದಾರೆ.

ಇನ್​ಸ್ಟಾಗ್ರಾಂ​ನಲ್ಲಿ ಫ್ಯಾನ್ಸ್​ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಿದ್ದ ವೇಳೆ ಕೆ.ಎಲ್.ರಾಹುಲ್​​ ಓರ್ವ ಅದ್ಭುತ ಆಟಗಾರನಾಗಿದ್ದು, ಅವರ ಬ್ಯಾಟಿಂಗ್​ ಶೈಲಿಯಿಂದ ನನ್ನನ್ನು ಇಂಪ್ರೆಸ್​ ಮಾಡಿದ್ದಾರೆ ಎಂದು ಉತ್ತರಿಸಿದ್ದಾರೆ.

ಡಿಸೆಂಬರ್​​ 3ರಿಂದ ಉಭಯ ದೇಶಗಳ ನಡುವೆ ಬಾರ್ಡರ್​ ಗವಾಸ್ಕರ್​ ಟ್ರೋಫಿ ಕೂಡ ಆರಂಭಗೊಳ್ಳಲಿದ್ದು, ಅದಕ್ಕಾಗಿ ಕಾತುರರಾಗಿದ್ದೇವೆ ಎಂದಿದ್ದಾರೆ. ಇದೇ ವೇಳೇ ರವೀಂದ್ರ ಜಡೇಜಾ ಬಗ್ಗೆ ಕೂಡಾ ಮೆಚ್ಚುಗೆಯ ಮಾತಗಳನ್ನಾಡಿರುವ ಸ್ಮಿತ್,​ ಅವರೊಬ್ಬ ಅದ್ಭುತ ಕ್ಷೇತ್ರ ರಕ್ಷಕ. ಎಂ.ಎಸ್.ಧೋನಿ ಲೆಜೆಂಡ್​ ಎಂದಿದ್ದಾರೆ.

ಕ್ರಿಕೆಟರ್​ ಕೆ.ಎಲ್.ರಾಹುಲ್​

2015ರಲ್ಲಿ ವಿಶ್ವಕಪ್​ ಗೆದ್ದಿರುವುದು ನನ್ನ ಉತ್ತಮ ಕ್ಷಣಗಳಲ್ಲಿ ಒಂದು ಎಂದಿದ್ದು, ಬರ್ಮಿಂಗ್​ಹ್ಯಾಮ್​​ನಲ್ಲಿ ನಡೆದ ಮೊದಲ ಆಸೀಸ್​ ಟೆಸ್ಟ್​ ಸರಣಿಯಲ್ಲಿ 144 ರನ್​ ಗಳಿಸಿದ್ದು ಟೆಸ್ಟ್​​ ಟೂರ್ನಿಯ ಅದ್ಭುತ ಬ್ಯಾಟಿಂಗ್​ ಕ್ಷಣಗಳಲ್ಲಿ ಒಂದು ಎಂದಿದ್ದಾರೆ.

ಇಂಡಿಯನ್​ ಪ್ರೀಮಿಯರ್​ ಲೀಗ್​ ತಮ್ಮ ಬೆಸ್ಟ್​ ಟೂರ್ನಮೆಂಟ್​​ಗಳಲ್ಲಿ ಒಂದು. ಇದರಲ್ಲಿ ವಿಶ್ವದ ಉತ್ತಮ ಆಟಗಾರರೊಂದಿಗೆ ಆಡಲು ಅವಕಾಶ ಸಿಗುತ್ತದೆ ಎಂದಿದ್ದಾರೆ. ಇದೇ ವೇಳೆ ರಾಹುಲ್​ ದ್ರಾವಿಡ್​ ಓರ್ವ ಜಂಟಲ್​ಮ್ಯಾನ್​ ಹಾಗೂ ಉತ್ತಮ ಆಟಗಾರ ಎಂದಿದ್ದಾರೆ.

ABOUT THE AUTHOR

...view details