ಪಾರ್ಲ್ ( ದಕ್ಷಿಣ ಆಫ್ರಿಕಾ) : ಶ್ರೀಲಂಕಾ ತಂಡದ ಆಲ್ರೌಂಡರ್ ಇಸುರು ಉದಾನ ಮಜಾನ್ಸಿ ಸೂಪರ್ ಲೀಗ್ನಲ್ಲಿ ಎದುರಾಳಿಯ ತಂಡದ ಬ್ಯಾಟ್ಸ್ಮನ್ ಗಾಯಗೊಂಡು ಕ್ರೀಸ್ ಮಧ್ಯದಲ್ಲಿದ್ದರೂ ಅವರನ್ನು ರನ್ಔಟ್ ಮಾಡದೇ ಕ್ರೀಡಾ ಸ್ಪೂರ್ತಿ ಮೆರೆದಿದ್ದಾರೆ.
ಮಜಾನ್ಸಿ ಸೂಪರ್ ಲೀಗ್ನಲ್ಲಿ ಪಾರ್ಲ್ ರಾಕ್ಸ್ ತಂಡದ ಪರ ಆಡುತ್ತಿರುವ ಉದಾನ 19 ನೇ ಓವರ್ ಮಾಡುತ್ತಿದ್ದ ವೇಳೆ, ಎದುರಾಳಿ ನೆಲ್ಸನ್ ಮಂಡೇಲಾ ಜೈಂಟ್ಸ್ಗೆ 8 ಎಸೆತಗಳಲ್ಲಿ 24 ರನ್ಗಳ ಅವಶ್ಯಕತೆಯಿತ್ತು. ಈ ವೇಳೆ ಉದಾನರ ಬೌಲಿಂಗ್ನಲ್ಲಿ ಕೀಪರ್ ಬ್ಯಾಟ್ಸ್ಮನ್ ಹೀನೋ ಕುಹ್ನ್ ಬಲವಾಗಿ ಹೊಡೆದ ಚೆಂಡ್ ನಾನ್ ಸ್ಟ್ರೈಕರ್ನಲ್ಲಿದ್ದ ಮಾರ್ಕೊ ಮರಾಯಿಸ್ ಅವರ ತೋಳಿಗೆ ಬಿದ್ದು ನೋವಿನಿಂದ ನರಳಾಡುತ್ತಿದ್ದರು.