ನ್ಯೂ ಸೌತ್ ವೇಲ್ಸ್ :ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಸ್ಫೋಟಕ ಬ್ಯಾಟ್ಸ್ಮನ್ ಆಗಿ ಮಿಂಚುತ್ತಿರುವ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ತಮ್ಮ ಮಕ್ಕಳನ್ನು ಚಿಕ್ಕಂದಿನಿಂದಲೇ ಕ್ರಿಕೆಟ್ನಲ್ಲಿ ಬೆಳೆಯಲು ತಯಾರು ಮಾಡುತ್ತಿದ್ದಾರೆ.
ವಾರ್ನರ್ ಮೈದಾನಕ್ಕೆ ಇಳಿದರೆ ಬೌಂಡರಿ ಸಿಕ್ಸರ್ಗಳಿಗೆ ಬರ ಇರುವುದಿಲ್ಲ. ಅವರ ಆಟವನ್ನು ಐಪಿಎಲ್ ಮತ್ತು ಆಸ್ಟ್ರೇಲಿಯಾ ತಂಡದ ಪರ ಅವರು ಆಡುವಾಗ ಕ್ರಿಕೆಟ್ ಅಭಿಮಾನಿಗಳು ನೋಡಿಯೇ ಇದ್ದಾರೆ. ಇದೀಗ ಅದೇ ಮಾದರಿಯಲ್ಲಿ ಅವರ ಹೆಣ್ಣುಮಕ್ಕಳು ಕೂಡ ಬ್ಯಾಟ್ ಹಿಡಿದು ಸಿಕ್ಸರ್ ಸಿಡಿಸುತ್ತಿದ್ದಾರೆ.
ವಾರ್ನರ್ ಮಕ್ಕಳಾದ ಐವಿ ಮೇ ಮತ್ತು ಇಂಡಿ ರೇ ಕ್ರಿಕೆಟ್ ಆಡುವ ಮುದ್ದಾದ ವಿಡಿಯೋವನ್ನು ಡೇವಿಡ್ ವಾರ್ನರ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ಶೇರ್ ಮಾಡಿಕೊಂಡಿದೆ.
ವಿಡಿಯೋದಲ್ಲಿ ವಾರ್ನರ್ ವೈಫ್ ಬೌಲಿಂಗ್ ಮಾಡುತ್ತಿದ್ದು, ಎರಡನೇ ಮಗಳಾದ ಇಂಡಿ ರೇ ಸಿಕ್ಸರ್ ಸಿಡಿಸುತ್ತಿದ್ದರೆ, ಮೊದಲನೇ ಮಗಳಾದ ಐವಿ ಮೇ ಚೆಂಡನ್ನು ಬಾರಿಸಿ 2 ರನ್ ಗಳಿಸುತ್ತಿದ್ದಾರೆ. ಈ ವಿಡಿಯೋವನ್ನು ಹತ್ತಿರದಿಂದ ವಾರ್ನರ್ ನೋಡಿ ಸಂಭ್ರಮಿಸುತ್ತಿದ್ದಾರೆ. ಅಲ್ಲದೆ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ವಾರ್ನರ್ ದಂಪತಿ ತಮ್ಮ ಮಕ್ಕಳ ಜೊತೆ ಲಾಕ್ಡೌನ್ ಸಂದರ್ಭದಲ್ಲಿ ಕೂಡ ಟಿಕ್ಟಾಕ್ನಲ್ಲಿ ಡ್ಯಾನ್ಸ್, ತೆಲುಗು ಸಿನಿಮಾಗಳ ಡೈಲಾಗ್ಗಳನ್ನು ಬಳಸಿ ಲಕ್ಷಾಂತರ ಅಭಿಮಾನಿಗಳನ್ನು ರಂಜಿಸಿದ್ದರು.