ಮ್ಯಾಂಚೆಸ್ಟರ್: ಭಾರತ- ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಒಂದು ಗಂಟೆ ಮುನ್ನ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್, ಟಾಸ್ ಗೆದ್ದರೆ ಬ್ಯಾಟಿಂಗ್ ತಗೆದುಕೊಳ್ಳಿ ಎಂದು ಹೇಳಿದ್ದನ್ನು ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಸರ್ಫರಾಜ್ ಅಹ್ಮದ್ ನಿರ್ಲಕ್ಷಿಸಿ ಟ್ರೋಲ್ಗೆ ತುತ್ತಾಗಿದ್ದಾರೆ.
ತಮ್ಮ ಪ್ರಧಾನಿ ಮಾತನ್ನು ನಿರ್ಲಕ್ಷಿಸಿ ಟ್ರೋಲ್ಗೆ ತುತ್ತಾದ ಪಾಕಿಸ್ತಾನ ತಂಡದ ನಾಯಕ! - ಭಾರತ
ಭಾರತ- ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಒಂದು ಗಂಟೆಗೂ ಮುನ್ನ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್, ಟಾಸ್ ಗೆದ್ದರೆ ಬ್ಯಾಟಿಂಗ್ ತಗೆದುಕೊಳ್ಳಿ ಎಂದು ಹೇಳಿದ್ದನ್ನು ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಸರ್ಫರಾಜ್ ಅಹ್ಮದ್ ನಿರ್ಲಕ್ಷಿಸಿ ಟ್ರೋಲ್ಗೆ ತುತ್ತಾಗಿದ್ದಾರೆ.
pak vs ind
ಪರಿಣಾಮ ಮೊದಲ ವಿಕೆಟ್ಗೆ ಭಾರತ ತಂಡದ ಆರಂಭಿಕರು ಪಾಕಿಸ್ತಾನದ ಬೌಲರ್ಗಳನ್ನು ಹಿಗ್ಗಾಮುಗ್ಗಾ ದಂಡಿಸಿ 136 ರನ್ಗಳ ದಾಖಲೆಯ ಜೊತೆಯಾಟ ನೀಡಿದರು. ಅಲ್ಲದೆ 50 ಓವರ್ಗಳ ಆಟದಲ್ಲಿ ಯಾವ ಹಂತದಲ್ಲೂ ಭಾರತೀಯ ಬ್ಯಾಟ್ಸ್ಮನ್ಗಳನ್ನು ಕಟ್ಟಿಹಾಕಲು ಪಾಕಿಸ್ತಾನ ಬೌಲರ್ಗಳ ಕೈಯಲ್ಲಿ ಆಗಲಿಲ್ಲ.
ಒಬ್ಬ ವಿಶ್ವಕಪ್ ಚಾಂಪಿಯನ್ ತಂಡದ ನಾಯಕ ಹಾಗೂ ದೇಶದ ಪ್ರಧಾನಿ ಸಲಹೆಯನ್ನು ತಿರಿಸ್ಕರಿಸಿದ ಸರ್ಫರಾಜ್ ವಿರುದ್ಧ ಟೀಕೆಗಳ ಸುರಿಮಳೆ ಬರುತ್ತಿದೆ. ಸರ್ಫರಾಜ್ ಜೊತೆಗೆ ಪ್ರಧಾನಿ ಇಮ್ರಾನ್ ಖಾನ್ರನ್ನು ಕೂಡ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಲಾಗುತ್ತಿದೆ.