ಕರ್ನಾಟಕ

karnataka

ETV Bharat / sports

ಭ್ರಷ್ಟಾಚಾರ ತಡೆಯಬೇಕೇ ಹೊರತು ಟೂರ್ನಿ ನಿಲ್ಲಿಸಬಾರದು: ಕೆಪಿಎಲ್​ ಭವಿಷ್ಯದ ಬಗ್ಗೆ ದಾದಾ ಮಾತು

ಅಧ್ಯಕ್ಷನಾದ ಕೆಲವೇ ದಿನಗಳಲ್ಲಿ ಬಿಸಿಸಿಐನಲ್ಲಿ ಹಲವು ಬದಲಾವಣೆಗೆ ನಾಂದಿ ಹಾಡಿರುವ ಸೌರವ್​ ಗಂಗೂಲಿ ಇದೀಗ ಕ್ರಿಕೆಟ್​ನಲ್ಲಿ ಭ್ರಷ್ಟಾಚಾರ ನಿರ್ಮೂಲನೆಗೆ ಕಠಿಣ ಕಾನೂನು ರೂಪಿಸಲು ಮುಂದಾಗಿದ್ದಾರೆ.

Sourav Ganguly on KPL
Sourav Ganguly on KPL

By

Published : Dec 1, 2019, 8:07 PM IST

ಮುಂಬೈ: ಕ್ರಿಕೆಟ್​ ಆಡಳಿತವನ್ನು ಭ್ರಷ್ಟಾಚಾರ ಮುಕ್ತವಾಗಿ ನಡೆಸಲು ಎಷ್ಟೇ ಪ್ರಯತ್ನಪಟ್ಟರೂ ಬುಕ್ಕಿಗಳು ನೀಡುವ ಹಣದಾಸೆಗೆ ಕೆಲವು ಕ್ರಿಕೆಟಿಗರು ಒಪ್ಪಿ ಕ್ರಿಕೆಟ್​ಗೆ ಕೆಟ್ಟ ಹೆಸರು ತರುತ್ತಿದ್ದಾರೆ. ಅದಕ್ಕಾಗಿ ಬಿಸಿಸಿಐ ಅಧ್ಯಕ್ಷ ಗಂಗೂಲಿ ಭ್ರಷ್ಟಾಚಾರ ಮುಕ್ತ ಕ್ರಿಕೆಟ್​ಗಾಗಿ ಬಲವಾದ ನೀತಿ,ನಿಯಮಗಳನ್ನು ಜಾರಿಗೆ ತರಲು ನಿರ್ಧರಿಸಿದ್ದಾರೆ.

ಕೆಪಿಎಲ್​ನಲ್ಲಿ ಹಲವು ಕ್ರಿಕೆಟಿಗರು ಬುಕ್ಕಿಗಳಿಂದ ಹಣ ಪಡೆದು ಬಂಧಿತರಾದ ಮೇಲೆ ಕೆಪಿಎಲ್​ ನಿಷೇಧಿಸಬೇಕು ಎಂಬ ಕೂಗು ಕೇಳಿ ಬಂದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ದಾದಾ, ಕೆಪಿಎಲ್​ನಲ್ಲಿ ಇಂತಹ ಘಟನೆ ಮತ್ತೊಮ್ಮೆ ಮರುಕಳಿಸುವುದಿಲ್ಲ. ಪ್ರಸ್ತುತ ಮುಂದಿನ ಆವೃತ್ತಿಯನ್ನು ಮಾತ್ರ ಸ್ಥಗಿತಗೊಳಿಸಲಾಗಿದೆ ಎಂದಿದ್ದಾರೆ.

ನಾವು ಭ್ರಷ್ಟಾಚಾರ ನೀತಿಯನ್ನು ಬಲಪಡಿಸಬೇಕು. ಯಾರೋ ಹಣದ ಆಮಿಷ ನೀಡುತ್ತಾರೆಂಬ ಕಾರಣಕ್ಕೆ ಒಂದು ಟೂರ್ನಮೆಂಟ್​ ನಿಲ್ಲಿಸುವುದು ತುಂಬಾ ಕಠಿಣ ನಿರ್ಧಾರ. ಸದ್ಯಕ್ಕೆ ಕೆಪಿಎಲ್​ ಸ್ಥಗಿತಗೊಂಡಿದೆ ಅಷ್ಟೇ. ಆದರೆ ಶಾಶ್ವತವಾಗಿ ನಿಲ್ಲುವುದಿಲ್ಲ. ಭ್ರಷ್ಟಾಚಾರ ನಿಯಂತ್ರಣಕ್ಕೆ ನಾವೇನಾದರೂ ಮಾಡಬೇಕಿದೆ ಎಂದು ಗಂಗೂಲಿ ತಿಳಿಸಿದ್ರು.

2018ರ ಆವೃತ್ತಿಯಲ್ಲಿ, ಬಳ್ಳಾರಿ ಟಸ್ಕರ್ಸ್​, ಬೆಳಗಾವಿ ಹಾಗೂ ಬೆಂಗಳೂರು ಫ್ರಾಂಚೈಸಿ ಆಟಗಾರರು ಹಾಗೂ ಕೋಚ್​ ಮೋಸದಾಟಕ್ಕೆ ಹಣ ಪಡೆದಿರುವುದು ಖಚಿತವಾದ ಬೆನ್ನಲ್ಲೇ ಕೆಲವು ಆಟಗಾರರನ್ನು ಬೆಂಗಳೂರು ಪೊಲೀಸರು ಬಂಧಿಸಿ ತನಿಖೆ ನಡೆಸಿದ್ದರು. ನಂತರ ತನಿಖೆ ಮುಂದುವರಿದಂತೆ ಹಲವು ಆಟಗಾರರು ಭ್ರಷ್ಟಾಚಾರ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು ಕೆಪಿಎಲ್​ನಲ್ಲಿ ಪಾಲ್ಗೊಂಡಿದ್ದ ಎಲ್ಲಾ ಆಟಗಾರರಿಗೂ ಬೆಂಗಳೂರು ಪೊಲೀಸರು ನೋಟೀಸ್​ ಜಾರಿ ಮಾಡಿದ್ದರು.

ABOUT THE AUTHOR

...view details