ಮುಂಬೈ: ಭಾರತ ತಂಡದ ಉದಯೋನ್ಮುಖ ಬ್ಯಾಟ್ಸ್ಮನ್ ಶ್ರೇಯಸ್ ಅಯ್ಯರ್ರಿಂದ ತಂಡದ ನಾಲ್ಕನೇ ಕ್ರಮಾಂಕದ ಸಮಸ್ಯೆ ಬಗೆಹರಿಯಲಿದೆ ಎಂದು ಆಯ್ಕೆ ಸಮಿತಿ ತಿಳಿಸಿದೆ.
ಭಾರತ ತಂಡದಲ್ಲಿ ಕಳೆದ 4 ವರ್ಷಗಳಿಂದ ಬಗೆಹರಿಯದ ಸಮಸ್ಯೆ ಎಂದರೆ ನಾಲ್ಕನೇ ಬ್ಯಾಟಿಂಗ್ ಕ್ರಮಾಂಕ. ಈ ಜಾಗಕ್ಕೆ ಸುಮಾರು 8ರಿಂದ 10 ಆಟಗಾರರನ್ನು ಬದಲಾಯಿಸಲಾಗಿದೆ. ಆದ್ರೆ, ಯಾರೂ ಶಾಶ್ವತವಾಗಲಿಲ್ಲ. ಈ ಸಮಸ್ಯೆ ವಿಶ್ವಕಪ್ನಲ್ಲೂ ಮುಂದುವರಿದಿದ್ದು, ಕೆಲವು ಹಿರಿಯ ಆಟಗಾರರ ಮೇಲೆ ಆಯ್ಕೆ ಸಮಿತಿ ಕೆಂಗಣ್ಣು ಬೀರಿತ್ತು.
ಇದೀಗ ಆಯ್ಕೆ ಸಮಿತಿ ಮುಂಬೈನ ಶ್ರೇಯಸ್ ಅಯ್ಯರ್ರನ್ನು 4 ನೇ ಕ್ರಮಾಂಕಕ್ಕೆ ಅರ್ಹನಾದ ಆಟಗಾರ ಎಂದು ನಿರ್ಧರಿಸಿದ್ದು, 2023 ರ ವಿಶ್ವಕಪ್ಗೆ ತಂಡವನ್ನು ಕಟ್ಟಬೇಕಿದೆ. ಹೀಗಾಗಿ ಸಮಿತಿ ಶ್ರೇಯಸ್ ಅಯ್ಯರ್ ಮೇಲೆ ವಿಶ್ವಾಸ ಇಟ್ಟಿದೆ. ಇವರಿಗೆ ಯುವ ಆಟಗಾರ ಶುಬಮನ್ ಗಿಲ್ ಕೂಡ ಪ್ರತಿಸ್ಪರ್ಧಿಯಾಗಿದ್ದಾರೆ. ಆದರೆ ಅವರಿಗೆ ನ್ಯೂಜಿಲ್ಯಾಂಡ್ ವಿರುದ್ಧ ಸರಣಿಯಲ್ಲಿ ಅವಕಾಶ ನೀಡಲಾಗಿತ್ತು. ಅವರು ಟೀಂ ಇಂಡಿಯಾ ತಲುಪಲು ಇನ್ನಷ್ಟು ಸಮಯ ಕಾಯಬೇಕಿದೆ ಎಂದಿದ್ದಾರೆ.
ಅಯ್ಯರ್ ಹಾಗೂ ಗಿಲ್ ಇಬ್ಬರೂ ಮನೀಷ್ ಪಾಂಡೆ ನೇತೃತ್ವದಲ್ಲಿ ಇಂಡಿಯಾ ಎ ತಂಡದಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಇವರ ಜೊತೆ ನಾಲ್ಕನೇ ಕ್ರಮಾಂಕಕ್ಕೆ ಪಾಂಡೆಯೂ ಪ್ರತಿಸ್ಪರ್ಧಿಯಾಗಬಹುದೇ ಎಂಬ ಪ್ರಶ್ನೆಗೆ ಪ್ರಸಾದ್ ಪ್ರತಿಕ್ರಿಯಿಸಿದ್ದು, ಪಾಂಡೆಯನ್ನು 5ನೇ ಕ್ರಮಾಂಕ ಅಥವಾ 6ನೇ ಕ್ರಮಾಂಕದಲ್ಲಿ ಆಡಿಸುವ ಯೋಜನೆಯಿದೆ ಎಂದು ಉತ್ತರಿಸಿದ್ದಾರೆ.
ಶ್ರೇಯಸ್ ಅಯ್ಯರ್ 6 ಏಕದಿನ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದು 2 ಅರ್ಧಶತಕ ಸಹಿತ 210 ರನ್ ಗಳಿಸಿದ್ದಾರೆ. ಇದರಲ್ಲಿ 2 ಅರ್ಧಶತಕ ಸೇರಿವೆ.