ಕರ್ನಾಟಕ

karnataka

ETV Bharat / sports

ಭಾರತ ತಂಡವನ್ನು ಸೋಲಿಸುವ ಸಾಮರ್ಥ್ಯ ಬಾಂಗ್ಲಾದೇಶಕ್ಕಿದೆ: ಶಕೀಬ್​​​ ವಿಶ್ವಾಸ​ - ಕೊಹ್ಲಿ

2019ರಲ್ಲಿ ಆಶ್ಚರ್ಯಕರ ಪ್ರದರ್ಶನ ತೋರುತ್ತಿರುವ ಬಾಂಗ್ಲದೇಶ ತಂಡ ವೆಸ್ಟ್​ ಇಂಡೀಸ್​, ದಕ್ಷಿಣ ಆಫ್ರಿಕಾ ತಂಡಗಳಿಗೆ ಸೋಲುಣಿಸಿ ಸೆಮಿಫೈನಲ್​ನತ್ತ ಕಣ್ಣಿಟ್ಟಿದೆ. ತನ್ನ ಮುಂದಿನ ಪಂದ್ಯದಲ್ಲಿ ಭಾರತವನ್ನು ಎದುರಿಸುತ್ತಿದ್ದು, ಪಂದ್ಯಕ್ಕೂ ಮುನ್ನವೇ ತಂಡದ ಆಲ್​ರೌಂಡರ್​ ಆದ ಶಕೀಬ್​ ಕೊಹ್ಲಿ ಪಡೆಯನ್ನು ಮಣಿಸುವ ತಾಕತ್ತು ನಮಗಿದೆ ಎಂದು ಹೇಳಿಕೆ ನೀಡಿದ್ದಾರೆ.

Shakib

By

Published : Jun 25, 2019, 9:46 PM IST

ಲಂಡನ್: ವಿಶ್ವಕಪ್​ನಲ್ಲಿ ಭಾರತ ತಂಡವನ್ನು ಮಣಿಸುವ ಸಾಮರ್ಥ್ಯ ಬಾಂಗ್ಲಾದೇಶಕ್ಕಿದೆ ಎಂದು ಬಾಂಗ್ಲಾದೇಶದ ಆಲ್​ರೌಂಡರ್​ ಶಕೀಬ್​ ಅಲ್​ ಹಸನ್​ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

2019ರಲ್ಲಿ ಆಶ್ಚರ್ಯಕರ ಪ್ರದರ್ಶನ ತೋರುತ್ತಿರುವ ಬಾಂಗ್ಲದೇಶ ತಂಡ ವೆಸ್ಟ್​ ಇಂಡೀಸ್​, ದಕ್ಷಿಣ ಆಫ್ರಿಕಾ ತಂಡಗಳಿಗೆ ಸೋಲುಣಿಸಿ ಸೆಮಿಫೈನಲ್​ನತ್ತ ಕಣ್ಣಿಟ್ಟಿದೆ. ತನ್ನ ಮುಂದಿನ ಪಂದ್ಯದಲ್ಲಿ ಭಾರತವನ್ನು ಎದುರಿಸುತ್ತಿದ್ದು, ಪಂದ್ಯಕ್ಕೂ ಮುನ್ನವೇ ತಂಡದ ಆಲ್​ರೌಂಡರ್​ ಆದ ಶಕೀಬ್​ ಕೊಹ್ಲಿ ಪಡೆಯನ್ನು ಮಣಿಸುವ ತಾಕತ್ತು ನಮಗಿದೆ ಎಂದು ಹೇಳಿಕೆ ನೀಡಿದ್ದಾರೆ.

ಟೀಂ​ ಇಂಡಿಯಾ ವಿಶ್ವದಲ್ಲಿ ಬಲಿಷ್ಠ ತಂಡ. ವಿಶ್ವದರ್ಜೆಯ ಅನುಭವಿ ಬ್ಯಾಟ್ಸ್​ಮನ್​ಗಳು, ಬೌಲರ್​ಗಳನ್ನು ಹೊಂದಿದೆ. ವಿಶ್ವಕಪ್​ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಮೊದಲ ಸ್ಥಾನದಲ್ಲಿದೆ. ನಮಗೆ ಕೊಹ್ಲಿ ಬಳಗವನ್ನು ಸೋಲಿಸುವುದು ಸುಲಭವಲ್ಲ. ಆದರೆ ಸೋಲಿಸಲು ನಾವು ನಮ್ಮ ಕೈಲಾದಷ್ಟು ಹೋರಾಟ ಮಾಡುತ್ತೇವೆ ಎಂದು ಶಕೀಬ್​​ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಏಕದಿನ ಕ್ರಿಕೆಟ್​ನಲ್ಲಿ ನಂಬರ್​ 1​ ಆಲ್​ರೌಂಡರ್​​ ಆಗಿರುವ ಶಕೀಬ್​ 2019ರ ವಿಶ್ವಕಪ್​ನಲ್ಲಿ ಅದ್ಭುತ ಪ್ರದರ್ಶನ ತೋರುತ್ತಿದ್ದಾರೆ. ಬ್ಯಾಟಿಂಗ್​ನಲ್ಲಿ 3 ಅರ್ಧಶತಕ ಹಾಗೂ 2 ಶತಕ ಸಹಿತ 476 ರನ್​ ಸಿಡಿಸಿದ್ದಾರೆ. ಬೌಲಿಂಗ್​ನಲ್ಲಿ 10 ವಿಕೆಟ್​ ಪಡೆದಿದ್ದಾರೆ.

ಬಾಂಗ್ಲಾದೇಶ ಕೊಹ್ಲಿ ಬಳಗವನ್ನು ಮಣಿಸುವ ಅವಕಾಶ ತುಂಬಾ ಕಡಿಮೆ ಇದ್ದರೂ ಬಾಂಗ್ಲಾವನ್ನು ಕಡೆಗಣಸುವ ಹಾಗಿಲ್ಲ. 2007ರಲ್ಲಿ ಭಾರತ ತಂಡ ಲೀಗ್​ನಲ್ಲೇ ಹೊರಹೋಗುವಂತೆ ಮಾಡಿದ್ದು ಇದೇ ಬಾಂಗ್ಲಾದೇಶ ತಂಡ ಎಂಬುದನ್ನು ಮರೆಯುವಂತಿಲ್ಲ. ಬಾಂಗ್ಲಾದೇಶ 7 ಪಂದ್ಯಗಳಲ್ಲಿ 7 ಅಂಕ ಪಡೆದಿದ್ದು, ಅಂಕ ಪಟ್ಟಿಯಲ್ಲಿ 5 ನೇ ಸ್ಥಾನದಲ್ಲಿದೆ. ಮುಷ್ರಫೆ ಪಡೆ ಲೀಗ್​​ನಲ್ಲಿ 3 ಗೆಲುವು, 3 ಸೋಲು ಕಂಡಿದ್ದರೆ, ಒಂದು ಪಂದ್ಯ ಮಳೆಗಾಹುತಿಯಾಗಿತ್ತು.

ABOUT THE AUTHOR

...view details