ಬ್ರಿಡ್ಜ್ಟೌನ್(ಬಾರ್ಬಡೊಸ್) :ವೆಸ್ಟ್ ಇಂಡೀಸ್ ತಂಡದ ಸ್ಟಾರ್ ಬ್ಯಾಟ್ಸ್ಮನ್ ಶಾಯ್ ಹೋಪ್ ಮತ್ತು ಅವರ ಅಣ್ಣ ಕೈಲ್ ಹೋಪ್ಗೆ ಕೊರೊನಾ ಸೋಂಕು ತಗುಲಿದ್ದು, ಮುಂಬುರುವ ಸೂಪರ್ 50 ಕಪ್ ಟೂರ್ನಿಯಿಂದ ಹೊರ ಬಿದ್ದಿದ್ದಾರೆ.
ಕ್ರಿಕೆಟ್ ವೆಸ್ಟ್ ಇಂಡೀಸ್ 50 ಓವರ್ಗಳ ದೇಶಿ ಟೂರ್ನಿಯನ್ನು ಫೆಬ್ರವರಿಯಲ್ಲಿ ಸೂಪರ್ 50 ಕಪ್ ಮೂಲಕ ಪುನಾರಂಭಿಸುವುದಾಗಿ ಇತ್ತೀಚೆಗೆ ಘೋಷಿಸಿತ್ತು.
"ಬಾರ್ಬಡೊಸ್ ತಂಡದ ಸಂಪೂರ್ಣ ಕೋವಿಡ್ ಪರೀಕ್ಷೆಯ ಫಲಿತಾಂಶ ಭಾನುವಾರ ಹೊರ ಬಂದಿದೆ. ಶಾಯ್ ಹೋಪ್ ಮತ್ತು ಕೈಲ್ ಹೋಪ್ಗೆ ಕೋವಿಡ್-19 ಪಾಸಿಟಿವ್ ಎಂದು ದೃಢಪಟ್ಟಿದೆ. ಅವರಿಬ್ಬರನ್ನು ಬಾರ್ಬಡೊಸ್ ಸರ್ಕಾರದ ಪ್ರೋಟೋಕಾಲ್ಗಳನ್ವಯ ಐಸೊಲೇಸನ್ನಲ್ಲಿ ಇರಿಸಲಾಗಿದೆ" ಎಂದು ಬಾರ್ಬಡೊಸ್ ಕ್ರಿಕೆಟ್ ಬೋರ್ಡ್ ಹೇಳಿಕೆ ಬಿಡುಗಡೆ ಮಾಡಿದೆ.
ಟೂರ್ನಿಗಾಗಿ 15 ಮಂದಿ ತಂಡವನ್ನು ಈಗಾಗಲೇ ಘೋಷಿಸಲಾಗಿತ್ತು. ಇದೀಗ ಶಾಯ್ ಹೋಪ್ ಬದಲಿಗೆ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಟೆವಿನ್ ವಾಲ್ಕಟ್ ಮತ್ತು ಕೈಲ್ ಹೋಪ್ ಬದಲಿಗೆ ಜಕಾರಿ ಮೆಕಾಸ್ಕಿಯನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿಕೆಯಲ್ಲಿ ಕ್ರಿಕೆಟ್ ಬೋರ್ಡ್ ತಿಳಿಸಿದೆ.
ಇದನ್ನು ಓದಿ:ಚಿಂತೆ ಪಡಬೇಕಾಗಿಲ್ಲ, ಗಂಗೂಲಿ ತಪಾಸಣೆಗಷ್ಟೇ ಬಂದಿದ್ದಾರೆ : ಆಸ್ಪತ್ರೆ ಮಾಹಿತಿ