ಕರ್ನಾಟಕ

karnataka

ETV Bharat / sports

ಕ್ರಿಕೆಟ್​ ಜಗತ್ತಿನಲ್ಲಿ ಯಾವ ಕ್ರಿಕೆಟರ್ ಮಾಡದ ದಾಖಲೆ ಅಫ್ರಿದಿ ಹೆಸರಿಗೆ! ಏನದು?

40 ವರ್ಷ ತುಂಬಿದ್ದರೂ ಕ್ರಿಕೆಟ್​ ಮೇಲಿನ ಹಸಿವು ಅಫ್ರಿದಿಯನ್ನು ಬಿಟ್ಟಿಲ್ಲ. ಅವರ ಬ್ಯಾಟಿಂಗ್ ಯುವ ಆಟಗಾರರನ್ನು ನಾಚಿಸುವಂತಿದೆ. ನವೆಂಬರ್​ 27ರಂದು ನಡೆದಿದ್ದ ಎಲ್​ಪಿಎಲ್ ಪಂದ್ಯದಲ್ಲಿ ಅಫ್ರಿದಿ ಕೇವಲ 23 ಎಸೆತಗಳಲ್ಲಿ 58 ರನ್​ ಚಚ್ಚಿದ್ದರು. ಅವರ ಇನ್ನಿಂಗ್ಸ್​ನಲ್ಲಿ 3 ಬೌಂಡರಿ ಹಾಗೂ 6 ಸಿಕ್ಸರ್​ ಸೇರಿವೆ.

ಶಾಹೀದ್ ಅಫ್ರಿದಿ
ಶಾಹೀದ್ ಅಫ್ರಿದಿ

By

Published : Nov 30, 2020, 6:37 PM IST

ಕೊಲೊಂಬೊ:ಪಾಕಿಸ್ತಾನ ಕ್ರಿಕೆಟ್​ ತಂಡದ ಮಾಜಿ ಆಲ್​ರೌಂಡರ್ ಶಾಹೀದ್ ಅಫ್ರಿದಿ ಕ್ರಿಕೆಟ್​ ಜಗತ್ತಿನಲ್ಲಿ ಹಲವಾರು ದಾಖಲೆಗಳನ್ನು ಈಗಾಗಲೇ ತಮ್ಮ ಹೆಸರಿನಲ್ಲಿ ಬರೆದುಕೊಂಡಿದ್ದಾರೆ. ಇದೀಗ ಶ್ರೀಲಂಕಾದ ಟಿ-20 ಲೀಗ್​ನಲ್ಲಿ ಒಂದೇ ಓವರ್​​ನಲ್ಲಿ 4 ಸಿಕ್ಸರ್​ ಸಿಡಿಸುವ ಮೂಲಕ ಮತ್ತೊಂದು ದಾಖಲೆ ಬರೆದಿದ್ದಾರೆ.

40 ವರ್ಷ ತುಂಬಿದ್ದರೂ ಕ್ರಿಕೆಟ್​ ಮೇಲಿನ ಹಸಿವು ಅಫ್ರಿದಿಯನ್ನು ಬಿಟ್ಟಿಲ್ಲ. ಅವರ ಬ್ಯಾಟಿಂಗ್ ಯುವ ಆಟಗಾರರನ್ನು ನಾಚಿಸುವಂತಿದೆ. ನವೆಂಬರ್​ 27ರಂದು ನಡೆದಿದ್ದ ಎಲ್​ಪಿಎಲ್ ಪಂದ್ಯದಲ್ಲಿ ಅಫ್ರಿದಿ ಕೇವಲ 23 ಎಸೆತಗಳಲ್ಲಿ 58 ರನ್​ ಚಚ್ಚಿದ್ದರು. ಅವರ ಇನ್ನಿಂಗ್ಸ್​ನಲ್ಲಿ 3 ಬೌಂಡರಿ ಹಾಗೂ 6 ಸಿಕ್ಸರ್​ ಸೇರಿವೆ.

ಅವರು ಈ ಪಂದ್ಯದಲ್ಲಿ ಒಂದೇ ಓವರ್​ನಲ್ಲಿ 4 ಸಿಕ್ಸರ್​ ಸಿಡಿಸುವ ಮೂಲಕ ಕ್ರಿಕೆಟ್​ನ ಎಲ್ಲಾ ಮಾದರಿಯಲ್ಲಿ, ಅಂದರೆ ಟೆಸ್ಟ್​, ಏಕದಿನ, ಟಿ-20 ಮತ್ತು ಟಿ-10 ನಾಲ್ಕು ಮಾದರಿಯಲ್ಲೂ ಒಂದೇ ಓವರ್​ನಲ್ಲಿ 4 ಸಿಕ್ಸರ್​ ಸಿಡಿಸಿರುವ ಏಕೈಕ ಬ್ಯಾಟ್ಸ್​ಮನ್​ ಎಂಬ ವಿಶ್ವದಾಖಲೆಗೆ ಪಾತ್ರರಾದರು.

ಅವರು ಟೆಸ್ಟ್​ನಲ್ಲಿ ಭಾರತದ ವಿರುದ್ಧ, ಏಕದಿನ ಕ್ರಿಕೆಟ್​ನಲ್ಲಿ ಶ್ರೀಲಂಕಾ ವಿರುದ್ಧ, ಟಿ-20 ಕ್ರಿಕೆಟ್​ನಲ್ಲಿ ಜಫ್ನಾ ವಿರುದ್ಧ ಹಾಗೂ ಟಿ-10 ಕ್ರಿಕೆಟ್​ನಲ್ಲಿ ನಾರ್ಥರ್ನ್​ ವಿರುದ್ಧ ಈ ಸಾದನೆ ಮಾಡಿದ್ದಾರೆ.

ABOUT THE AUTHOR

...view details