ಕರ್ನಾಟಕ

karnataka

ETV Bharat / sports

ಮತ್ತೆ ಮಿಂಚಿದ ಅಫ್ರಿದಿ.. ಸೆಮಿಫೈನಲ್​ ಕನಸಿನಲ್ಲಿರುವ ಪಾಕ್​ಗೆ 228 ರನ್​ಗಳ ಟಾರ್ಗೆಟ್​​ ನೀಡಿದ ಅಫ್ಘನ್ನರು

ಸೆಮಿಫೈನಲ್​ಗೆ ಏರಲು ತನ್ನ ಮುಂದಿರುವ ಎಲ್ಲಾ  ಪಂದ್ಯಗಳನ್ನು ಗೆಲ್ಲಲೇಬೇಕಿರುವ ಪಾಕಿಸ್ತಾನ ತಂಡಕ್ಕೆ ಕ್ರಿಕೆಟ್​ ಶಿಶು ಅಫ್ಘಾನಿಸ್ತಾನ 229 ರನ್​ಗಳ ಟಾರ್ಗೇಟ್​ ನೀಡಿದೆ.

ಆಫ್ರಿದಿ

By

Published : Jun 29, 2019, 6:52 PM IST

Updated : Jun 29, 2019, 7:07 PM IST

ಲೀಡ್ಸ್​:ಸೆಮಿಫೈನಲ್​ಗೇರಲು ತನ್ನ ಮುಂದಿರುವ ಎಲ್ಲಾ ಪಂದ್ಯಗಳನ್ನು ಗೆಲ್ಲಲೇಬೇಕಿರುವ ಪಾಕಿಸ್ತಾನ ತಂಡಕ್ಕೆ ಕ್ರಿಕೆಟ್​ ಶಿಶು ಅಫ್ಘಾನಿಸ್ತಾನ 229 ರನ್​ಗಳ ಟಾರ್ಗೇಟ್​ ನೀಡಿದೆ.

ಲೀಡ್ಸ್​ನಲ್ಲಿ ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ತಂಡಗಳು ಮುಖಾಮುಖಿಯಾಗಿದ್ದು. ಟಾಸ್​ ಗೆದ್ದ ಅಫ್ಘಾನಿಸ್ತಾನ 50 ಓವರ್​ಗಳಲ್ಲಿ 9 ವಿಕೆಟ್​ ಕಳೆದುಕೊಂಡು 227 ರನ್​ಗಳಿಸಿದೆ.

ಟಾಸ್​ ಗೆದ್ದು ಬ್ಯಾಟಿಂಗ್​ ಆರಂಭಿಸಿದ ಅಫ್ಘಾನಿಸ್ತಾನ, ಪಾಕಿಸ್ತಾನ ಬೌಲರ್​ಗಳ ದಾಳಿಗೆ ತತ್ತರಿಸಿದರು. ಕೇವಲ 27 ರನ್​ಗಳಾಗುವಷ್ಟರಲ್ಲಿ ಆರಂಭಿಕನಾಗಿ ಕಣಕ್ಕಿಳಿದಿದ್ದ ನಾಯಕ ನೈಬ್(15)​ ಹಾಗೂ 3ನೇ ಕ್ರಮಾಂಕದಲ್ಲಿ ಬಂದ ಶಾಹಿದಿ(0) ಯುವ ಬೌಲರ್​ ಶಾಹೀನ್​ ಆಫ್ರಿದಿಗೆ ವಿಕೆಟ್​ ಒಪ್ಪಿಸಿದರು.

ನಂತರ ರೆಹ್ಮತ್​ ಜೊತೆಗೂಡಿದ ಯುವ ಕೀಪರ್​ ಇಕ್ರಮ್​ ಅಲಿ ಮೂರನೇ ವಿಕೆಟ್​ಗೆ 30 ಸೇರಿಸುವ ಮೂಲಕ ಅಲ್ಪ ಚೇತರಿಕೆ ನೀಡಿದರು. ಈ ಹಂತದಲ್ಲಿ 35 ರನ್​ಗಳಿಸಿ ಉತ್ತಮವಾಗಿ ಆಡುತ್ತಿದ್ದ ರೆಹ್ಮತ್​ ರನ್ನು ಸ್ಪಿನ್ನರ್​ ಇಮಾದ್ ವಾಸೀಂ ಪೆವಿಲಿಯನ್​ಗಟ್ಟಲು ಯಶಸ್ವಿಯಾದರು. ಶಾ ವಿಕೆಟ್​ ಪತನದ ನಂತರ ಅಬ್ಬರ ಆಟವಾಡಿದ ಮಾಜಿ ನಾಯಕ ಅಸ್ಘರ್​ ಅಫ್ಘನ್​ ಕೇವಲ 35 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್​ ಸಹಿತ 43 ರನ್​ಗಳಿಸಿ 4 ನೇ ವಿಕೆಟ್​ ಜೊತಯಾಟದಲ್ಲಿ ಇಕ್ರಮ್​ ಜೊತೆ 64 ರನ್​ ಸೇರಿಸಿದರು. ಈ ಸಂದರ್ಭದಲ್ಲಿ ದಾಳಿಗಿಳಿದ ಸ್ಪಿನ್ನರ್​ ಶದಾಬ್​ ಖಾನ್​ ಅಫ್ಘನ್ ಬೌಲಿಂಗ್​ನಲ್ಲಿ​ ವಿಕೆಟ್​ ಒಪ್ಪಿಸಿದರು. ನಂತರ ಕೇವಲ 5 ರನ್​ ಅಂತರದಲ್ಲಿ ಇಕ್ರಮ್(24)​ ಕೂಡ ಇಮಾದ್​ ವಾಸಿಂಗ್ ಬೌಲಿಂಗ್​ನಲ್ಲಿ ಹಫೀಜ್​ಗೆ ಕ್ಯಾಚ್​ ನೀಡಿದರು.

ಇವರಿಬ್ಬರ ಪತನದ ನಂತರ ಸ್ಫೋಟಕ ಬ್ಯಾಟ್ಸ್​ಮನ್​ ನಜೀಬುಲ್ಹಾ ಜಾಡ್ರನ್​ 54 ಎಸೆತಗಳಲ್ಲಿ 6 ಬೌಂಡರಿ ಸಹಿತ 42 ರನ್​ಗಳಿಸಿದರು. ಆಲ್​ರೌಂಡರ್​ಗಳಾದ ನಬಿ 16, ಹಾಗೂ ಶೆನ್ವಾರಿ 19 ರನ್​ಗೆ ಸೀಮಿತವಾದರೆ, ರಶೀದ್​ ಖಾನ್​ 4,ಹಮೀದ್​ ಹಸನ್​ 1 ಹಾಗೂ ಮುಜೀಬ್​ ಔಟಾಗದೆ 7 ರನ್​ಗಳಿಸಿದರು.

ಕಳೆದ ಪಂದ್ಯದಲ್ಲಿ 3 ವಿಕೆಟ್​ ಪಡೆದು ಮಿಂಚಿದ್ದ ಆಫ್ರಿದಿ ಈ ಪಂದ್ಯದಲ್ಲೂ 4 ವಿಕೆಟ್​ ಪಡೆದು ಅಫ್ಘಾನಿಸ್ತಾನ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿ ಹಾಕಿದರು. ಅಫ್ರಿದಿಗೆ ಬೆಂಬಲ ನೀಡಿದ ಇಮಾದ್​ ವಾಸೀಂ 2, ವಹಾಬ್​ ರಿಯಾಜ್​ 2 ಹಾಗೂ ಶದಾಬ್​ ಖಾನ್ ಒಂದು ವಿಕೆಟ್​ ಪಡೆದರು.​

Last Updated : Jun 29, 2019, 7:07 PM IST

ABOUT THE AUTHOR

...view details