ಲಖನೌ(ಉತ್ತರಪ್ರದೇಶ): ಭಾರತ ಮತ್ತು ದಕ್ಷಿಣ ಆಫ್ರಿಕಾದ ಮಹಿಳಾ ಕ್ರಿಕೆಟ್ ಏಕದಿನ ಹಾಗೂ ಟಿ-20 ಸರಣಿ ವೇಳಾಪಟ್ಟಿ ಬಿಡುಗಡೆಯಾಗಿದೆ. ಮಾರ್ಚ್ 7 ರಿಂದ ಸರಣಿ ಆರಂಭವಾಗಲಿದ್ದು, ಈ ಸರಣಿಯಲ್ಲಿ ಐದು ಏಕದಿನ ಮತ್ತು ಮೂರು ಟಿ -20 ಪಂದ್ಯಗಳು ನಡೆಯಲಿವೆ. ಪೂರ್ವ ಸಿದ್ಧತೆಗಳು ಬರದಿಂದ ಸಾಗಿವೆ. ಆದರೆ, ಪಂದ್ಯ ವೀಕ್ಷಿಸಲು, ಪ್ರೇಕ್ಷಕರಿಗೆ ಪ್ರವೇಶದ ನಿರ್ಧಾರವನ್ನು ಇನ್ನೂ ನಿರ್ಧರಿಸಲಾಗಿಲ್ಲ.
ಈ ಬಗೆಗಿನ ನಿರ್ಧಾರವನ್ನು ಬಿಸಿಸಿಐ ತೆಗೆದುಕೊಳ್ಳಬೇಕಾಗಿದ್ದರೂ, ಯುಪಿಸಿ ಕ್ರಿಕೆಟ್ ಸಂಸ್ಥೆಗೆ ಬಿಸಿಸಿಐ ಒಪ್ಪಿಸಿದೆ. ಈ ವಿಷಯಕ್ಕಾಗಿ ಯುಪಿ ಕ್ರಿಕೆಟ್ ಅಸೋಸಿಯೇಷನ್ ಜಿಲ್ಲಾಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಈ ನಿಟ್ಟಿನಲ್ಲಿ ಇಂದು ಸಭೆ ನಡೆಯಲಿದ್ದು, ಇದರಲ್ಲಿ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳವ ನಿರೀಕ್ಷೆ ಇದೆ.
ಮಾಹಿತಿಯ ಪ್ರಕಾರ, ಕ್ರೀಡಾಂಗಣದ ಸಾಮರ್ಥ್ಯದ 40 ರಿಂದ 50 ಪ್ರತಿಶತದಷ್ಟು ಪ್ರೇಕ್ಷಕರನ್ನು ಹೊಂದಲು ಈ ಹಿಂದೆ ಪ್ರಸ್ತಾಪಿಸಲಾಗಿತ್ತು. ಆದರೆ, ಮತ್ತೆ ಕೊರೊನಾ ಸೋಂಕು ಹರಡುವಿಕೆಯಲ್ಲಿ ಹೆಚ್ಚಳ ಕಂಡ ಬಂದ ಪರಿಣಾಮ ಶೇಕಡಾ 20 ರಷ್ಟು ಪ್ರೇಕ್ಷಕರಿಗೆ ಪಂದ್ಯವನ್ನು ವೀಕ್ಷಿಸಲು ಅವಕಾಶ ನೀಡುವ ಯೋಜನೆಯನ್ನು ಹೊಂದಿದೆ ಎನ್ನಲಾಗಿದೆ.