ಕರ್ನಾಟಕ

karnataka

ETV Bharat / sports

ಸಂಜು ಸ್ಯಾಮ್ಸನ್​​ ಶತಕದ ಅಬ್ಬರ... ಬೃಹತ್ ಮೊತ್ತ ಪೇರಿಸಿದ ರಾಜಸ್ಥಾನ

ಮೊದಲ ವಿಕೆಟ್ ಪತನವಾಗುತ್ತಿದ್ದಂತೆ ಕ್ರೀಸಿಗೆ ಆಗಮಿಸಿದ ಸ್ಯಾಮ್ಸನ್,​ ನಾಯಕ ಅಜಿಂಕ್ಯ ರಹಾನೆ ಜೊತೆಗೂಡಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿದರು.

By

Published : Mar 29, 2019, 9:58 PM IST

ಸಂಜು ಸ್ಯಾಮ್ಸನ್

ಹೈದರಾಬಾದ್​:ಐಪಿಎಲ್​​ನ 12ನೇ ಆವೃತ್ತಿಯ ಸನ್​​ರೈಸರ್ಸ್​ ಹೈದರಾಬಾದ್ ಹಾಗೂ ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯದಲ್ಲಿ ಸಂಜು ಸ್ಯಾಮ್ಸನ್​​ ಭರ್ಜರಿ ಶತಕ ಸಿಡಿಸಿದ್ದಾರೆ.

ಈ ಆವೃತ್ತಿ ಮೊದಲ ಶತಕ ಇದಾಗಿದ್ದು, 53 ಎಸೆತದಲ್ಲಿ ಸ್ಯಾಮ್ಸನ್​ ನೂರರ ಗಡಿ ಮುಟ್ಟಿದರು. ಆರಂಭದಿಂದಲೂ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಸ್ಯಾಮ್ಸನ್​ ತಂಡದ ಮೊತ್ತವನ್ನೂ ಹೆಚ್ಚಿಸುತ್ತಾ ಸಾಗಿದರು.

ಮೊದಲ ವಿಕೆಟ್ ಪತನವಾಗುತ್ತಿದ್ದಂತೆ ಕ್ರೀಸಿಗೆ ಆಗಮಿಸಿದ ಸ್ಯಾಮ್ಸನ್,​ ನಾಯಕ ಅಜಿಂಕ್ಯ ರಹಾನೆ ಜೊತೆಗೂಡಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿದರು. ಒಟ್ಟಾರೆ ನಾಲ್ಕು ಆಕರ್ಷಕ ಸಿಕ್ಸರ್ ಹಾಗೂ ಹತ್ತು ಬೌಂಡರಿ ಮೂಲಕ ಸಂಜು ಸ್ಯಾಮ್ಸನ್​​ 55 ಎಸೆತದಲ್ಲಿ 102 ರನ್ ಬಾರಿಸಿದರು.

ಇನ್ನು ಅಜಿಂಕ್ಯ ರಹಾನೆ 70 ರನ್ ಹಾಗೂ ಕೊನೆಯಲ್ಲಿ ಬೆನ್​ ಸ್ಟೋಕ್ಸ್ ಸಮಯೋಚಿತ 16 ರನ್​ಗಳ ಮೂಲಕ ರಾಜಸ್ಥಾನ ರಾಯಲ್ಸ್ ನಿಗದಿತ 20 ಒವರ್​​ನಲ್ಲಿ ಎರಡು ವಿಕೆಟ್ ನಷ್ಟಕ್ಕೆ 198 ರನ್​ ಪೇರಿಸಿದೆ.

ಬೌಲಿಂಗ್​ನಲ್ಲಿ ಸ್ವಿಂಗ್ ಸ್ಪೆಷಲಿಷ್ಟ್​​ ಭುವನೇಶ್ವರ್​ ಕುಮಾರ್​ ದುಬಾರಿಯಾದರು. ಎರಡು ಒವರ್​ನಲ್ಲಿ ಕೇವಲ ಹತ್ತು ರನ್ ನೀಡಿದ್ದ ಭುವಿ, ಕೊನೆಯ ಎರಡು ಒವರ್​ನಲ್ಲಿ ಬರೋಬ್ಬರಿ 45 ರನ್ ನೀಡಿದರು.

ABOUT THE AUTHOR

...view details