ಶಾರ್ಜಾ :ಸಂದೀಪ್ ಶರ್ಮಾ ಹಾಗೂ ಶಹ್ಬಾಜ್ ನದೀಮ್ ಅವರ ಅದ್ಭುತ ಬೌಲಿಂಗ್ ನೆರವಿನಿಂದ ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡವನ್ನು ಹೈದರಾಬಾದ್ ತಂಡ 149 ರನ್ಗಳಿಗೆ ನಿಯಂತ್ರಿಸಲು ಯಶಸ್ವಿಯಾಗಿದೆ.
ನಿರ್ಣಾಯಕ ಪಂದ್ಯದಲ್ಲಿ ಟಾಸ್ ಗೆದ್ದು ಮುಂಬೈ ತಂಡವನ್ನು ಬ್ಯಾಟಿಂಗ್ ಆಹ್ವಾನಿಸಿದ ಹೈದರಾಬಾದ್ ಆರಂಭದಿಂದಲೇ ಪ್ರಾಬಲ್ಯ ಸಾಧಿಸಿತು. ಆರಂಭಿಕರಾದ ರೋಹಿತ್ ಶರ್ಮಾ(4) ಮತ್ತು ಕ್ವಿಂಟನ್ ಡಿಕಾಕ್(25) ರನ್ನು ಪವರ್ ಪ್ಲೇನಲ್ಲೇ ಔಟ್ ಮಾಡುವ ಮೂಲಕ ಸಂದೀಪ್ ಶರ್ಮಾ ಹೈದರಾಬಾದ್ಗೆ ಭರ್ಜರಿ ಮುನ್ನಡೆ ದೊರೆಕಿಸಿಕೊಟ್ಟರು. ನಂತರ ಬಂದ ಸೂರ್ಯಕುಮಾರ್ ಯಾದವ್ 33, ಹಾಗೂ ಇಶಾನ್ ಕಿಶನ್ 36 ರನ್ಗಳಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.