ಕರ್ನಾಟಕ

karnataka

By

Published : Jul 8, 2020, 4:50 PM IST

ETV Bharat / sports

ಆತ ಹೆಚ್ಚು ಕಡೆಗಣಿಸಲ್ಪಟ್ಟ ಆಲ್​ರೌಂಡರ್​.. ಸಚಿನ್​ ತೆಂಡೂಲ್ಕರ್​​ ಹೀಗೆ ಹೇಳಿದ್ದು ಯಾರ ಬಗ್ಗೆ ಗೊತ್ತಾ?

"ಅವರು ಬ್ಯಾಟಿಂಗ್​ ಬಂದಾಗ ನಿರ್ಣಾಯಕವಾದ 50-55 ರನ್​ ಬಾರಿಸಿದ್ದಾರೆ. ಆದರೆ, ಅವರಿಗೆ ದಕ್ಕಬೇಕಾದ ಮೌಲ್ಯ ಸಿಗುತ್ತಿಲ್ಲ. ಆದರೆ, ಅವರು ತಂಡಕ್ಕೆ ನಿರಂತರವಾಗಿ ನೀಡುತ್ತಿರುವ ಕೊಡುಗೆ ಅದ್ಭುತವಾಗಿದೆ. ಅವರೊಬ್ಬ ಭಯಂಕರ ಆಟಗಾರ" ಎಂದು ಸಚಿನ್​ ಹೊಗಳಿದ್ದಾರೆ.

Sachin Tendulkar
Sachin Tendulkar

ಮುಂಬೈ: ವೆಸ್ಟ್​ ಇಂಡೀಸ್​ ಟೆಸ್ಟ್​ ತಂಡದ ನಾಯಕ ಜೇಸನ್ ಹೋಲ್ಡರ್ ಅವರಿಗೆ ಸಾಕಷ್ಟು ಪ್ರತಿಭೆಯಿದೆ. ಆದರೆ, ಅದನ್ನು ಅವರಿಗೆ ಸಿಗಬೇಕಾದ ಮನ್ನಣೆ ಸಿಗುತ್ತಿಲ್ಲ. ಅವರೊಬ್ಬ ಕಡೆಗಣಸಲ್ಪಡುತ್ತಿರುವ ಆಲ್​ರೌಂಡರ್​ ಎಂದು ಭಾರತದ ಬ್ಯಾಟಿಂಗ್ ದಿಗ್ಗಜ ಸಚಿನ್​ ತೆಂಡೂಲ್ಕರ್ ಅಭಿಪ್ರಾಯ ಪಟ್ಟಿದ್ದಾರೆ.

ಇಂದಿನಿಂದನ ಸೌತಾಂಪ್ಟನ್​ನಲ್ಲಿ ವೆಸ್ಟ್​ ಇಂಡೀಸ್​ ಹಾಗೂ ಇಂಗ್ಲೆಂಡ್​ ನಡುವೆ ಮೂರು ಪಂದ್ಯಗಳ ಟೆಸ್ಟ್​ ಸರಣಿ​ ಆರಂಭವಾಗುತ್ತಿದೆ. ಈ ಪಂದ್ಯದಲ್ಲಿ ವಿಂಡೀಸ್​ ತಂಡವನ್ನು ಜೇಸನ್​ ಹೋಲ್ಡರ್​ ಮುನ್ನಡೆಸುತ್ತಿದ್ದಾರೆ.

ಆಲ್​ರೌಂಡರ್​ ಶ್ರೇಯಾಂಕದಲ್ಲಿ ನಂಬರ್​ ಒನ್​ ಸ್ಥಾನದಲ್ಲಿರುವ ಜೇಸನ್​ ಹೋಲ್ಡರ್​ ನಂತರದ ಸ್ಥಾನದಲ್ಲಿರುವ ಬೆನ್​ಸ್ಟೋಕ್ಸ್​ ನೇತೃತ್ವದ ತಂಡವನ್ನು ಎದುರಿಸುತ್ತಿದ್ದು, 1988ರ ನಂತರ ವಿಂಡೀಸ್​ಗೆ ಇಂಗ್ಲೆಂಡ್​ ನೆಲದಲ್ಲಿ ಟೆಸ್ಟ್​ ಸರಣಿ ಗೆದ್ದುಕೊಡಲು ಒಳ್ಳೆಯ ಅವಕಾಶ ದೊರೆತಿದೆ. ಈ ಹಿಂದೆ ಸರ್​ ವಿವಿಯನ್​ ರಿಚರ್ಡ್ಸ್​ ಕೊನೆಯ ಬಾರಿ ಆಂಗ್ಲರ ನೆಲದಲ್ಲಿ ಟೆಸ್ಟ್​ ಸರಣಿ ಗೆದ್ದುಕೊಟ್ಟಿದ್ದರು.

ಜೇಸನ್​ ಹೋಲ್ಡರ್​

"ಜೇಸನ್​ ಹೋಲ್ಡರ್​ ಪ್ರಸ್ತುತ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಕಡೆಗಣಿಸಲ್ಪಡುತ್ತಿರುವ ಆಲ್​ರೌಂಡರ್​. ಯಾಕೆಂದರೆ, ಮೈದಾನದಲ್ಲಿ ನೀವು ಕೆಮರ್​ ರೋಚ್​, ಶನನ್​ ಗೇಬ್ರಿಯಲ್​ ಅವರನ್ನು ನೋಡಿ. ಆದರೆ, ಜೇಸನ್​ ಮಾತ್ರ ಸ್ಕೋರ್​ಬೋರ್ಡ್​ನಲ್ಲಿ ಕಾಣಿಸುತ್ತಾರೆ. ಜೊತೆಗೆ ಅವರು ಬೌಲಿಂಗ್​ನಲ್ಲೂ ಮೂರು ವಿಕೆಟ್​ ಪಡೆದಾಗ ಅದು ನಿಮಗೆ ತಿಳಿಯುತ್ತದೆ" ಎಂದು ತಮ್ಮ ಮಾಸ್ಟರ್​ ಬ್ಲಾಸ್ಟರ್​ 100ಎಂಬಿ ಆ್ಯಪ್​​ನಲ್ಲಿ ಬ್ರಿಯಾನ್​ ಲಾರಾ ಜೊತೆಗೆ ಸಂವಾದದಲ್ಲಿ ಹೇಳಿದ್ದಾರೆ.

"ಅವರು ಬ್ಯಾಟಿಂಗ್​ ಬಂದಾಗ ನಿರ್ಣಾಯಕವಾದ 50-55 ರನ್​ ಬಾರಿಸಿದ್ದಾರೆ. ಆದರೆ, ಅವರಿಗೆ ದಕ್ಕಬೇಕಾದ ಮೌಲ್ಯ ಸಿಗುತ್ತಿಲ್ಲ. ಆದರೆ, ಅವರು ತಂಡಕ್ಕೆ ನಿರಂತರವಾಗಿ ನೀಡುತ್ತಿರುವ ಕೊಡುಗೆ ಅದ್ಭುತವಾಗಿದೆ. ಅವರೊಬ್ಬ ಭಯಂಕರ ಆಟಗಾರ" ಎಂದು ಸಚಿನ್​ ಹೊಗಳಿದ್ದಾರೆ.

ಹೋಲ್ಡರ್​ ವಿಂಡೀಸ್​ ಪರ 40 ಟೆಸ್ಟ್​ಗಳಲ್ಲಿ 3 ಶತಕಗಳ ಸಹಿತ 1898 ರನ್ ಹಾಗೂ 106 ವಿಕೆಟ್​ ಹಾಗೂ 113 ಏಕದಿನ ಪಂದ್ಯಗಳಲ್ಲಿ 9 ಅರ್ಧಶತಕಗಳ ಸಹಿತ 1821 ರನ್​ ಹಾಗೂ 136 ವಿಕೆಟ್​ ಪಡೆದಿದ್ದಾರೆ.

ABOUT THE AUTHOR

...view details