ಹೈದರಾಬಾದ್:13ನೇ ಆವೃತ್ತಿಯ ಐಪಿಎಲ್ ಆರಂಭಕ್ಕೆ ದಿನಗಣನೆ ಶುರುವಾಗಿದ್ದು, ಈಗಾಗಲೇ ವೇಳಾಪಟ್ಟಿ ಪ್ರಕಟಗೊಂಡಿದೆ. ಸೆ. 19 ರಂದು ನಡೆಯಲಿರುವ ಮೊದಲ ಪಂದ್ಯದಲ್ಲಿ ಮುಂಬೈ ಹಾಗೂ ಚೆನ್ನೈ ತಂಡ ಮುಖಾಮುಖಿ ಆಗಲಿವೆ. ಇತ್ತ ಆರ್ಸಿಬಿ ತಂಡ ಸೆ.21 ರಂದು ಹೈದರಾಬಾದ್ ವಿರುದ್ಧ ತನ್ನ ಮೊದಲ ಪಂದ್ಯ ಆಡಲಿದೆ.
ಕಳೆದ 12 ವರ್ಷಗಳಿಂದ ಟ್ರೋಫಿಗಾಗಿ ಸೆಣಸಾಡುತ್ತಿರುವ ಬೆಂಗಳೂರು ತಂಡ ಈ ಬಾರಿ ಕಪ್ ಗೆಲ್ಲುವ ಫೇವರಿಟ್ ತಂಡಗಳಲ್ಲಿ ಒಂದಾಗಿದೆ. ಯಾವಾಗಲು ಕನ್ನಡಿಗರಿಲ್ಲದೆ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗುತ್ತಿದ್ದ ತಂಡದಲ್ಲಿ ಈ ಬಾರಿ ಇಬ್ಬರು ಕನ್ನಡಿಗರಿದ್ದಾರೆ. ಉತ್ತಮ ಫಾರ್ಮ್ನಲ್ಲಿರುವ ದೇವದತ್ ಪಡಿಕ್ಕಲ್ ಆಡುವ 11ರ ಬಳಗದಲ್ಲಿ ಅವಕಾಶ ಪಡೆಯಲಿದ್ದಾರೆ ಎಂಬ ನಿರೀಕ್ಷೆ ಇದೆ.
ಈ ಮಧ್ಯೆ ಕನ್ನಡಿಗ ದೇವದತ್ ಪಡಿಕ್ಕಲ್ ಮತ್ತು ಪವನ್ ದೇಶಪಾಂಡೆ ಫೋಟೋಗಳೊಂದಿಗೆ ಕನ್ನಡದಲ್ಲೇ ಟ್ವೀಟ್ ಮಾಡಿರುವ ಆರ್ಸಿಬಿ ತಂಡ ನಮ್ಮ ಕರ್ನಾಟಕದ ಹುಡುಗರಿಗೆ ಯಾವ ಸಂದೇಶವನ್ನು ನೀಡಲು ನೀವು ಬಯಸುತ್ತೀರಿ? ಎಂದು ಕೇಳಿದೆ.