ಅಹ್ಮದಾಬಾದ್:3ನೇ ಟೆಸ್ಟ್ ಪಂದ್ಯದಲ್ಲಿ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಕೇವಲ 2ನೇ ದಿನಕ್ಕೆ ಮಣಿಸಿ ಸರಣಿಯಲ್ಲಿ 2-1 ರಲ್ಲಿ ಮುನ್ನಡೆ ಪಡೆದುಕೊಂಡಿದೆ, ಆದರೆ, ಭಾರತ ತಂಡ 10 ವಿಕೆಟ್ಗಳಿಂದ ಇಂಗ್ಲೆಂಡ್ ಮಣಿಸುತ್ತಿದ್ದಂತೆಯೇ ಈ ಪಿಚ್ ಬಗ್ಗೆ ಕೆಲವು ಕ್ರಿಕೆಟ್ ದಿಗ್ಗಜರು ಅಸಮಾಧಾನ ವ್ಯಕ್ತಪಡಿಸಿದ್ದರು.
ಆದರೆ ರೋಹಿತ್ ಶರ್ಮಾ ಎರಡೂ ಇನ್ನಿಂಗ್ಸ್ನಲ್ಲೂ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರುವ ಮೂಲಕ ಪಿಚ್ ಬ್ಯಾಟಿಂಗ್ ಬಗ್ಗೆ ಯಾವುದೇ ಸಮಸ್ಯೆಯನ್ನು ತೋರಿಲ್ಲ, ಆಟಗಾರರು ತಂತ್ರಗಾರಿಕೆಯಲ್ಲಿ ಎಡವುತ್ತಿದ್ದಾರೆ ಎಂದಿದ್ದರು. ಅವರು ಮೊಟೆರಾದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ನಲ್ಲಿ 66 ರನ್ ಸಿಡಿಸಿದರೆ, 2ನೇ ಇನ್ನಿಂಗ್ಸ್ನಲ್ಲಿ ಅಜೇಯ 25 ರನ್ಗಳಿಸಿದರು.
ಇದೀಗ ಮೊಟೆರಾ ಸ್ಪಿನ್ ಸ್ನೇಹಿ ಪಿಚ್ ಗುಣಮಟ್ಟದ ಬಗ್ಗೆ ಟೀಕಿಸಿದವರನ್ನು ರೋಹಿತ್ ಶರ್ಮಾ ಇನ್ಸ್ಟಾಗ್ರಾಂ ಪೋಸ್ಟ್ ಮೂಲಕ ಕಾಲೆಳೆದಿದ್ದಾರೆ. ಪೋಸ್ಟ್ನಲ್ಲಿ ಪಿಚ್ ಮುಂಭಾಗ ಮಲಗಿರುವ ರೋಹಿತ್ " ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಪಿಚ್ ಹೇಗಿರಬಹುದು ಎಂಬುದರ ಬಗ್ಗೆ ಆಶ್ಚರ್ಯವಾಗುತ್ತಿದೆ" ಎಂದು ಬರೆದುಕೊಂಡಿದ್ದಾರೆ.
ಮೊದಲ ಪಂದ್ಯದಲ್ಲಿ 227 ರನ್ಗಳ ಸೋಲು ಕಂಡಿದ್ದ ಭಾರತ ತಂಡ ನಂತರ 2ನೇ ಟೆಸ್ಟ್ ಪಂದ್ಯದಲ್ಲಿ 317 ರನ್ಗಳ ಜಯ ಸಾಧಿಸಿ ತಿರುಗೇಟು ನೀಡಿತ್ತು. ಡೇ ಅಂಡ್ ನೈಟ್ ಟೆಸ್ಟ್ ಪಂದ್ಯದಲ್ಲಿ ಸಂಪೂರ್ಣ ಪ್ರಾಬಲ್ಯ ಸಾಧಿಸಿ 10 ವಿಕೆಟ್ಗಳ ಜಯ ಸಾಧಿಸಿದೆ. ನಾಲ್ಕನೇ ಪಂದ್ಯ ಮಾರ್ಚ್ 4 ರಿಂದ ಆರಂಭವಾಗಲಿದೆ.
ಇದನ್ನು ಓದಿ:ಪಿಚ್ ಬಗ್ಗೆ ನರಳಾಟ ಬಿಡಿ, ನಿಮ್ಮ ಆಟದ ಗುಣಮಟ್ಟ ಹೆಚ್ಚಿಸಿ: ವಿವಿಯನ್ ರಿಚರ್ಡ್ಸ್