ಕರ್ನಾಟಕ

karnataka

ETV Bharat / sports

ಟೆಸ್ಟ್​ ಕ್ರಿಕೆಟ್​ ಇತಿಹಾಸದಲ್ಲಿ ಈ ದಾಖಲೆ ಮಾಡಿರುವುದು ರೋಹಿತ್​ ಶರ್ಮಾ ಮಾತ್ರ.. ಏನಿದು? - ದಕ್ಷಿಣ ಆಫ್ರಿಕಾ- ಭಾರತ

ಮೊದಲ ಇನ್ನಿಂಗ್ಸ್​ನಲ್ಲಿ ಶತಕ ಸಿಡಿಸಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದ ರೋಹಿತ್​ 2ನೇ ಇನ್ನಿಂಗ್ಸ್​ನಲ್ಲೂ ಭರ್ಜರಿ ಸೆಂಚುರಿ ಭಾರಿಸುವ ಮೂಲಕ ವಿಶ್ವಕ್ರಿಕೆಟ್​ನಲ್ಲಿ ತಾನು ಯಾವುದೇ ಮಾದರಿಯಲ್ಲಾದರೂ ಹಿಟ್​ಮ್ಯಾನ್​ ಎಂದೆನಿಸಿಕೊಂಡಿದ್ದಾರೆ.

Rohit

By

Published : Oct 5, 2019, 4:13 PM IST

ವಿಶಾಖಪಟ್ಟಣ: ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದಂತೆ ತಮ್ಮ ನೈಜ ಆಟವನ್ನು ಪ್ರದರ್ಶಿಸುತ್ತಿರುವ ರೋಹಿತ್​ ಶರ್ಮಾ ಬ್ಯಾಕ್​ ಟು ಬ್ಯಾಕ್​ ಶತಕ ಸಿಡಿಸಿ ತಾಕತ್ತು ಪ್ರದರ್ಶಿಸಿದ್ದಾರೆ.

ಸೀಮಿತ ಓವರ್​ಗಳಲ್ಲಿ ಸ್ಫೋಟಕ ಆಟಕ್ಕೆ ಹೆಸರಾಗಿದ್ದ ರೋಹಿತ್​ ಶರ್ಮಾ ಟೆಸ್ಟ್​ ಕ್ರಿಕೆಟ್​ನಲ್ಲಿ ಇನ್ನಿಂಗ್ಸ್​ ಆರಂಭಿಸಿ ಎರಡೂ ಇನ್ನಿಂಗ್ಸ್​ನಲ್ಲೂ ಶತಕ ಸಿಡಿಸಿದ ವಿಶ್ವದ ಮೊದಲ ಬ್ಯಾಟ್ಸ್​ಮನ್​ ಎನಿಸಿಕೊಂಡಿದ್ದಾರೆ.

ಕಳೆದ ಆರು ವರ್ಷಗಳಿಂದ ಟೆಸ್ಟ್​ನಲ್ಲಿ ನೆಲೆ ಕಂಡುಕೊಳ್ಳಲು ಸಾಕಷ್ಟು ಪ್ರಯತ್ನ ಪಡುತ್ತಿದ್ದ ಹಿಟ್​ಮ್ಯಾನ್​ ಆರಂಭಿಕರಾಗಿ ವಿಫಲರಾದ ಹಿನ್ನಲೆ ಮಧ್ಯಮ ಕ್ರಮಾಂಕದಿಂದ ಬಡ್ತಿ ಪಡೆದು ಆರಂಭಿಕನಾಗಿ ಕಣಕ್ಕಿಳಿದ ಮೊದಲ ಇನ್ನಿಂಗ್ಸ್​ನಲ್ಲೇ 176 ರನ್​ಗಳಿಸಿ ದಕ್ಷಿಣ ಆಫ್ರಿಕನ್ನರನ್ನ ಕಾಡಿದ್ದರು.

ಇದೀಗ ಭಾರತ ತಂಡಕ್ಕೆ ಗೆಲುವು ತಂದುಕೊಡಲು ಉತ್ತಮ ಟಾರ್ಗೆಟ್​ ಅವಶ್ಯಕತೆಯಿರುವುದರಿಂದ ಹೊಡಿಬಡಿ ಆಟ ನಡೆಸುತ್ತಿರುವ ರೋಹಿತ್​ 2ನೇ ಇನ್ನಿಂಗ್ಸ್​ನಲ್ಲಿ 133ನೇ ಎಸೆತದಲ್ಲಿ ಶತಕ ಪೂರೈಸಿ ಮತ್ತೊಮ್ಮೆ ಹರಿಣಗಳಿಗೆ ಶಾಕ್​ ನೀಡಿದ್ದಾರೆ. ಅಲ್ಲದೆ ಎರಡೂ ಇನ್ನಿಂಗ್ಸ್​ನಲ್ಲೂ ಶತಕಸಿಡಿಸಿದ 6ನೇ ಬ್ಯಾಟ್ಸ್​ಮನ್​ ಎನಿಸಿಕೊಂಡರು.

ಎರಡೂ ಇನ್ನಿಂಗ್ಸ್​ನಲ್ಲಿ ಶತಕಸಿಡಿಸಿದವರು

:ವಿಜಯ್​ ಹಜಾರೆ
ಸುನಿಲ್​ ಗವಾಸ್ಕರ್​(3 ಬಾರಿ)
ರಾಹುಲ್​ ದ್ರಾವಿಡ್​(2 ಬಾರಿ)
ವಿರಾಟ್​ ಕೊಹ್ಲಿ
ಅಜಿಂಕ್ಯಾ ರಹಾನೆ
ರೋಹಿತ್​ ಶರ್ಮಾ

ABOUT THE AUTHOR

...view details