ಕರ್ನಾಟಕ

karnataka

ETV Bharat / sports

ವಿಶ್ವಕಪ್​ನಲ್ಲಿ ಹ್ಯಾಟ್ರಿಕ್​ ಸಹಿತ 5ನೇ ಶತಕ... ವಿಶ್ವದಾಖಲೆ ಬರೆದ ಹಿಟ್​ಮ್ಯಾನ್ - ಸಚಿನ್​

2019 ರ ವಿಶ್ವಕಪ್​ನಲ್ಲಿ 5 ಶತಕ ಸಿಡಿಸಿದ ರೋಹಿತ್​ ಟೂರ್ನಿಯೊಂದರಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರ ಎಂಬ ದಾಖಲೆಗೆ ಪಾತ್ರರಾದರು.

rohith sharma

By

Published : Jul 6, 2019, 9:38 PM IST

ಲೀಡ್ಸ್​: 2019ರ ವಿಶ್ವಕಪ್​ನಲ್ಲಿ ಅದ್ದೂರಿ ಬ್ಯಾಟಿಂಗ್​ ಪ್ರದರ್ಶನ ತೋರುತ್ತಿರುವ ಹಿಟ್​ಮ್ಯಾನ್​ ಖ್ಯಾತಿಯ ರೋಹಿತ್​ ಶರ್ಮಾ 5 ಶತಕ ಸಿಡಿಸುವ ಮೂಲಕ ​ದಾಖಲೆ ಬರೆದಿದ್ದಾರೆ.

ವಿಶ್ವಕ್ರಿಕೆಟ್​ನಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿರುವ ರೋಹಿತ್​ ಶರ್ಮಾ ಇಂದು ನಡೆಯುತ್ತಿರುವ ಶ್ರೀಲಂಕಾ ವಿರುದ್ಧವೂ ಶತಕ ಬಾರಿಸಿ ಸತತ 3 ಶತಕದ ಜೊತೆಗೆ 2019 ರ ವಿಶ್ವಕಪ್​ನಲ್ಲಿ 5ನೇ ಶತಕ ಸಿಡಿಸಿ ಒಂದೇ ವಿಶ್ವಕಪ್​ನಲ್ಲಿ ಹೆಚ್ಚು ಶತಕ ಸಿಡಿಸಿದ ದಾಖಲೆಗೆ ಪಾತ್ರರಾದರು.

2015 ರ ವಿಶ್ವಕಪ್​ನಲ್ಲಿ 4 ಶತಕ ಸಿಡಿಸಿದ್ದ ಶ್ರೀಲಂಕಾದ ಕುಮಾರ್​ ಸಂಗಾಕ್ಕರ ಅವರ ದಾಖಲೆಯನ್ನು ರೋಹಿತ್​ ಬ್ರೇಕ್​ ಮಾಡಿದರು. ಅಷ್ಟೇ ಅಲ್ಲದೆ ವಿಶ್ವಕಪ್​ಗಳಲ್ಲಿ 6 ಶತಕ ಸಿಡಿಸುವ ಮೂಲಕ ಸಚಿನ್​ ತೆಂಡೂಲ್ಕರ್​ ಜೊತೆಗೆ ಮೊದಲ ಸ್ಥಾನ ಹಂಚಿಕೊಂಡಿದ್ದಾರೆ.

ವಿಶ್ವಕಪ್​ ಟೂರ್ನಿಯೊಂದರಲ್ಲಿ ಹೆಚ್ಚು ಶತಕ ಸಿಡಿಸಿದವರು:

5 ಶತಕ ರೋಹಿತ್ ಶರ್ಮಾ 2019ರ ವಿಶ್ವಕಪ್
4 ಶತಕ ಕುಮಾರ್​ ಸಂಗಕ್ಕಾರ 2015ರ ವಿಶ್ವಕಪ್​
3 ಶತಕ ಮಾರ್ಕ್​ ವಾ 1993ರ ವಿಶ್ವಕಪ್​
3 ಶತಕ ಸೌರವ್​ ಗಂಗೂಲಿ 2003ರ ವಿಶ್ವಕಪ್​
3 ಶತಕ ಮ್ಯಾಥ್ಯೂಹೇಡನ್ 2007ರ ವಿಶ್ವಕಪ್​

ABOUT THE AUTHOR

...view details